ರಾಜ್ಯಗಳ ಹೊರೆ ಭರಿಸಲಿರುವ ಕೇಂದ್ರ

7
ಬಿಸಿಯೂಟಕ್ಕೆ ಎಲ್‌ಪಿಜಿ ಪೂರೈಕೆ ಸ್ಥಗಿತ

ರಾಜ್ಯಗಳ ಹೊರೆ ಭರಿಸಲಿರುವ ಕೇಂದ್ರ

Published:
Updated:

ನವದೆಹಲಿ (ಪಿಟಿಐ): ಶಾಲೆಗಳ ಬಿಸಿಯೂಟ ಯೋಜನೆಗೆ ಸಬ್ಸಿಡಿ ಸಿಲಿಂಡರ್‌ಗಳ ಪೂರೈಕೆ ಸ್ಥಗಿತಗೊಳಿಸಿರುವುದರಿಂದ ರಾಜ್ಯಗಳಿಗೆ ಬೀಳುವ ವೆಚ್ಚದ ಹೊರೆಯನ್ನು ತಾನು ಭರಿಸುವುದಾಗಿ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.ಈಗ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ, ಬಿಸಿಯೂಟ ಬೇಯಿಸಲು ತಗುಲುವ ಶೇ 75ರಷ್ಟು ಹಣವನ್ನು ಕೇಂದ್ರ ನೀಡುತ್ತಿದೆ. ಇಂಧನ ವೆಚ್ಚವನ್ನು (ಸಿಲಿಂಡರ್, ಸೀಮೆಎಣ್ಣೆ ಇತ್ಯಾದಿ) ಅಡುಗೆ ಬೇಯಿಸಲು ತಗುಲುವ ಖರ್ಚಿನ ಭಾಗವಾಗಿಯೇ ಪರಿಗಣಿಸಲಾಗುತ್ತಿದೆ ಎಂದು ಮಾನವ ಸಂಪನ್ಮೂಲ ಖಾತೆ ರಾಜ್ಯ ಸಚಿವ ಶಶಿ ತರೂರ್ ಬುಧವಾರ ತಿಳಿಸಿದರು.ಬಿಸಿಯೂಟ ಯೋಜನೆಯನ್ನು ನಿಲ್ಲಿಸದೇ ಮುಂದುವರಿಸಲು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾನವ ಸಂಪನ್ಮೂಲ ಸಚಿವಾಲಯ ಮನವಿ ಮಾಡಿದೆ ಎಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದರು.ರಾಷ್ಟ್ರದ ಶೇ 68ರಷ್ಟು ಶಾಲೆಗಳಲ್ಲಿ ಬಿಸಿಯೂಟ ತಯಾರಿಸಲು ಎಲ್‌ಪಿಜಿ ಸಿಲಿಂಡರ್‌ಗೆ ಹೊರತಾದ ಇಂಧನ ಮೂಲಗಳನ್ನು ಬಳಸಲಾಗುತ್ತಿದೆ ಎಂದೂ ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry