ರಾಜ್ಯದಲ್ಲಿ ವಾಲ್ಮೀಕಿ ಜನಾಂಗದ ಜನಸಂಖ್ಯೆ 75 ಲಕ್ಷ

7

ರಾಜ್ಯದಲ್ಲಿ ವಾಲ್ಮೀಕಿ ಜನಾಂಗದ ಜನಸಂಖ್ಯೆ 75 ಲಕ್ಷ

Published:
Updated:

ಕೂಡ್ಲಿಗಿ: ರಾಜ್ಯದಲ್ಲಿ ಪ್ರಸ್ತುತ 75 ಲಕ್ಷದಷ್ಟು ವಾಲ್ಮೀಕಿ ಜನಾಂಗದ ಜನಸಂಖ್ಯೆಯಿದೆ, ಇವರೆಲ್ಲ ಒಂದೇ ಸಂಘಟನೆಯಡಿಯಲ್ಲಿ ಸೇರಬೇಕಾಗಿದೆ ಎಂದು ವಾಲ್ಮೀಕಿ ಜನಾಂಗದ ಜಗದ್ಗುರು ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.ಅವರು ಗುರುವಾರ ಪಟ್ಟಣದ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಏರ್ಪಡಿಸಲಾಗಿದ್ದ ವಾಲ್ಮೀಕಿ ಜನಾಂಗದ ಸಭೆಯನ್ನುದ್ದೇಶಿಸಿ ಮಾತನಾಡಿದರು.ವಾಲ್ಮೀಕಿ ಗುರುಪೀಠದ ಆರಂಭ ಕ್ಕಿಂತಲೂ ಮೊದಲು ಸಮಾಜದಲ್ಲಿ ಅನೇಕ ಸಂಘಟನೆಗಳು ಜನಾಂಗದ ಅಭಿವೃದ್ಧಿಗೆ ಶ್ರಮಿಸಿವೆ. ಆದರೂ ಇವೆಲ್ಲವನ್ನೂ ಒಂದುಗೂಡಿಸಿ ಜನಾಂಗದ ಏಳಿಗೆಗೆ ಶ್ರಮಿಸಬೇಕಾಗಿದೆ ಎಂದರು.ಈಗಾಗಲೇ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ರಾಜ್ಯ ಘಟಕವನ್ನು ಆರಂಭಿಸಲಾಗಿದೆ. ವಿವಿಧ ಜಿಲ್ಲೆ, ತಾಲ್ಲೂಕುಗಳಲ್ಲಿ ನಿರ್ದೇಶಕರನ್ನೂ ಆಯ್ಕೆ ಮಾಡಲಾಗಿದೆ ಎಂದರು.ವಾಲ್ಮೀಕಿ ಜನಾಂಗದಲ್ಲಿ ಎ್ಲ್ಲಲ ರೀತಿಯ ಜಾಗೃತಿಯನ್ನು ಮೂಡಿಸ ಬೇಕಾಗಿದೆ, ಇದು ತಕ್ಷಣಕ್ಕೆ ಆಗುವಂತ ಹದಲ್ಲ ಎಂದು ಅವರು ಹೇಳಿದರು.ಪರಿಶಿಷ್ಟ ಪಂಗಡದ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಯಾರನ್ನೂ ಬೆಂಬಲಿಸುವುದಿಲ್ಲ, ಉತ್ತಮರನ್ನು ಆಯ್ಕೆ ಮಾಡುವುದು ಮಾತ್ರ ಅಗತ್ಯ ವಾಗಿದೆ ಎಂದರಲ್ಲದೆ, ಈ ಸಂದರ್ಭದಲ್ಲಿ ಪೀಠದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಬಾರದೆಂದು ಸ್ವಾಮೀಜಿ ಎಚ್ಚರಿಸಿದರು.ಸಾಮಾನ್ಯ ಕ್ಷೇತ್ರದಲ್ಲಿ ಪರಿಶಿಷ್ಟ ಪಂಗಡದ ಅಭ್ಯರ್ಥಿ ಸ್ಪರ್ಧಿಸಿಲ್ಲಿ ಕ್ಷೇತ್ರದ ಮನೆ ಮನೆಗಳಿಗೆ ತೆರಳಿ ಮತ ಕೇಳಲಾಗುವುದು ಎಂದರು. ಚುನಾವಣೆ ಬಂದಾಗ ಪಕ್ಷವಾರು ಕಾರ್ಯ ಮಾಡಿ ಆದರೆ ಚುನಾವಣೆಯ ನಂರ ಎಲ್ಲರೂ ವಾಲ್ಮೀಕಿ ಸಮಾಜದಡಿ ಒಂದಾಗಿರ ಬೇಕೆಂದು ಅವರು ತಿಳಿಸಿದರು.ಕೇಂದ್ರದ ರೀತಿಯಲ್ಲಿಯೇ ರಾಜ್ಯ ದಲ್ಲಿಯೂ ವಾಲ್ಮೀಕಿ ಜನಾಂಗಕ್ಕೆ ಮೀಸಲಾತಿಯನ್ನು ನೀಡಲು ಮುಖ್ಯಮಂತ್ರಿ ಅವರನ್ನು ಕೋರ ಲಾಗಿದೆ. ಮುಂದಿನ ದಿನಗಳಲ್ಲಿ ಬೇಡಿಕೆ ಈಡೇರದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು. ಎಪ್ರಿಲ್ 8ರಂದು ರಾಜ್ಯಮಟ್ಟದ ವಾಲ್ಮೀಕಿ ಜಯಂತಿಯನ್ನು ಚಿತ್ರದುರ್ಗದಲ್ಲಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.ಗುರುಪೀಠದ ಧರ್ಮದರ್ಶಿ ಜಂಬಯ್ಯ ನಾಯಕ, ಫೆಬ್ರವರಿ 19ರಂದು ಬಳ್ಳಾರಿಯ ರಾಘವ ಕಲಾ ಮಂದಿರದಲ್ಲಿ ಜಿಲ್ಲಾ ಮುಖಂಡರ ಸಭೆ ಸೇರಿಸಿ, ವಾಲ್ಮೀಕಿ ಜನಾಂಗವನ್ನು ಒಂದುಗೂಡಿಸಿ ಸಂಘಟನೆ ಮಾಡಲು ನಿರ್ಧರಿಸಲಾಗಿದೆ.ಇದಕ್ಕೆ ತಾಲ್ಲೂಕಿನಿಂದ, ಪ್ರತಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೊಬ್ಬರಂತೆ ಹಾಗೂ ಪಟ್ಟಣದಿಂದ 4 ಮಂದಿಯನ್ನು ಆಯ್ಕೆ ಮಾಡ ಲಾಗುವುದು ಎಂದರು.ಉಪನ್ಯಾಸಕಿ ಡಾ.ಟಿ.ಕೊತ್ಲಮ್ಮ ಮಾತನಾಡಿದರು. ಜನಾಂಗದ ಹಿರಿಯರಾದ ಕೆ.ಮಲ್ಲಣ್ಣ, ಡಿ.ಕೇಶವ, ಕೆ.ಹೊನ್ನಪ್ಪ, ಹನುಮಂತಪ್ಪ, ಬಿ.ಕೆ. ಜಯಮ್ಮ, ಜಿ.ನಾಗಮಣಿ, ಸಿ.ಬಿ. ಜಯರಾಂ ನಾಯಕ, ಸೊಲ್ಲಪ್ಪ, ಮಾರಪ್ಪ, ಭೀಮೇಶ, ನಿಂಗಪ್ಪ, ಸೊಲ್ಲಪ್ಪ. ಅಂಜಿನಪ್ಪ, ಸೊಸೈಟಿ ಕೊತ್ಲಪ್ಪ, ಕಚಾಟಿ ಈಶಪ್ಪ, ವೇಣುಗೋಪಾಲ, ಕಡ್ಡಿ ಮಂಜುನಾಥ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಾಜಿ ಮಂಡಲ ಪ್ರಧಾನ ಎನ್. ಮುದ್ದಪ್ಪ ಸ್ವಾಗತಿಸಿದರು. ಕಾವಲ್ಲಿ ಶಿವಪ್ಪ ನಾಯಕ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry