ಬುಧವಾರ, ಜನವರಿ 29, 2020
28 °C
ಒಡಿಶಾದ ಎನ್‌ಟಿಪಿಸಿ ಘಟಕದಲ್ಲಿ ಉತ್ಪಾದನೆ ಸ್ಥಗಿತ

ರಾಜ್ಯದಲ್ಲಿ ವಿದ್ಯುತ್‌ ವ್ಯತ್ಯಯ?

ಎಸ್‌.ಟಿ. ಬ್ಯೂರಿಯಾ/ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದಲ್ಲಿ ವಿದ್ಯುತ್‌ ವ್ಯತ್ಯಯ?

ಭುವನೇಶ್ವರ: ಒಡಿಶಾದ ಅಂಗುಲ್‌ ಜಿಲ್ಲೆಯ ತಲ್ಚರ್‌ ಕಲ್ಲಿ­ದ್ದಲು ಪಟ್ಟಣ ಬಳಿಯ ಕನಿಹಾದಲ್ಲಿರುವ ರಾಷ್ಟ್ರೀಯ  ಶಾಖೋತ್ಪನ್ನ ವಿದ್ಯುತ್‌ ನಿಗ­ಮದ (ಎನ್‌ಟಿ­­ಪಿಸಿ) ೩,೦೦೦ ಮೆಗಾವಾಟ್‌  ಸಾಮರ್ಥ್ಯದ ಸ್ಥಾವರ­ದಲ್ಲಿ ಉತ್ಪಾದನೆ ಸ್ಥಗಿತ­ವಾಗಿದೆ. ಈ ದಿಢೀರ್‌ ಬೆಳವಣಿಗೆಯು ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳ ವಿದ್ಯುತ್‌ ಪೂರೈಕೆ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ.ಎನ್‌ಟಿಪಿಸಿ ಸ್ಥಾವರಗಳಿಂದ ಕರ್ನಾಟಕ, ತಮಿಳು­ನಾಡು, ಕೇರಳ ಹಾಗೂ ಒಡಿಶಾ ರಾಜ್ಯಗಳು ಅಂದಾಜು 500 ಮೆಗಾವಾಟ್‌ನಷ್ಟು ವಿದ್ಯುತ್‌  ಪಡೆಯುತ್ತಿವೆ.

ಸಮೀಪದ ಗಣಿಯಿಂದ ಕಲ್ಲಿದ್ದಲು ಸರ­ಬ­ರಾಜು ನಿಂತಿರುವುದ­ರಿಂದ ಈ ಮುಖ್ಯ ಸ್ಥಾವರದಲ್ಲಿ ವಿದ್ಯುತ್‌ ಉತ್ಪಾ­ದನೆ ಸ್ಥಗಿ­ತ­ಗೊಂಡಿದೆ. ಸರ್ಕಾರಿ ಸ್ವಾಮ್ಯದ ಭಾರ­ತೀಯ ಕಲ್ಲಿದ್ದಲು ಸಂಸ್ಥೆಯ (ಸಿಐಎಲ್‌) ಅಂಗವಾದ ಮಹಾ­ನಂದಿ ಕಲ್ಲಿದ್ದಲು ನಿಕ್ಷೇಪ ಘಟಕ­ದಲ್ಲಿ (ಎಂಸಿಎಲ್‌) ಹಿಂಸಾಚಾರ ನಡೆದು, ಸುತ್ತಲಿನ ಪ್ರದೇಶದಲ್ಲಿ      ಉದ್ವಿ­ಗ್ನ ವಾತಾವರಣ ನಿರ್ಮಾಣ ಆಗಿ­ರು­ವುದರಿಂದ ಗಣಿ­ಯನ್ನು ತಾತ್ಕಾ­ಲಿಕ ಮುಚ್ಚಲಾಗಿದೆ.ಕಾರ್ಮಿ­­­ಕರ ಗುಂಪೊಂದು, ತಮ್ಮನ್ನು ಹೊಸ­ ಕಲ್ಲಿದ್ದಲು ಗುತ್ತಿಗೆ­ದಾರರು ಕೆಲಸದಿಂದ ತೆಗೆದುಹಾಕಿರುವು­ದನ್ನು ಖಂಡಿಸಿ ಶುಕ್ರ­ವಾರ  ಹಿಂಸಾ­ತ್ಮಕ ಪ್ರತಿಭಟನೆ ನಡೆಸಿತುರಾಜ್ಯದಲ್ಲಿ ವಿದ್ಯುತ್‌ ವ್ಯತ್ಯಯ?

ಈ ಸಂದರ್ಭ­ದಲ್ಲಿ ಆಕ್ರೋಶಭರಿತ ಕಾರ್ಮಿ­ಕರು ಎಂಸಿ­ಎಲ್‌ನ ಸ್ಥಳೀಯ ಕಚೇರಿ­ ಧ್ವಂಸಗೊಳಿಸಿ, ೪೦­ರಿಂದ ೫೦ ವಾಹನ­ಗಳಿಗೆ ಬೆಂಕಿ­ ಹಚ್ಚಿದರು.

ಈ ಘಟನೆಯು ಪ್ರದೇಶದಲ್ಲಿ ಉದ್ರಿಕ್ತ­ಪರಿಸ್ಥಿತಿಗೆ ಕಾರಣ­ವಾಗಿದ್ದು, ಶನಿವಾರ ಸಂಜೆ ತಲ್ಚರ್‌ನ ಪಕ್ಷೇ­ತರ ಶಾಸಕ ಬಿ.ಕೆ. ಪ್ರಧಾನ್‌ ಅವರ ಬಂಧನ­­ದಿಂದ ಪರಿಸ್ಥಿತಿ ಇನ್ನಷ್ಟು ಹದ­ಗೆಟ್ಟಿದೆ. ಶಾಸಕರ ಜಾಮೀನು ಅರ್ಜಿ ತಿರ­ಸ್ಕೃತ­ಗೊಂಡಿದ್ದು  14 ದಿನ­ಗಳ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.ಅಂಗುಲ್‌ ಜಿಲ್ಲಾ­ಡಳಿತವು ಉದ್ವಿಗ್ನ ತಲ್ಚರ್‌ ಮತ್ತು ಸುತ್ತ­ಮುತ್ತಲ ಪ್ರದೇಶ­­ದಲ್ಲಿ ಭಾನುವಾರ ಬೆಳಿಗ್ಗೆಯಿಂದ ನಿಷೇ­ಧಾಜ್ಞೆ ಜಾರಿಗೊಳಿಸಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಭಾರಿ ಪೊಲೀಸ್‌ ಬಂದೋಬಸ್‌್ತ ಏರ್ಪಡಿಸಿದೆ. ಈ ಬೆಳವಣಿಗೆಯಿಂದಾಗಿ ಗಣಿಗಾರಿಕೆ ಮತ್ತು ಕಲ್ಲಿದ್ದಲು ಸರಬರಾಜು ಸ್ಥಗಿತಗೊಂಡಿದೆ.ಎನ್‌ಟಿಪಿಸಿ ಆಡಳಿತವು ಕಲ್ಲಿದ್ದಲು ಕೊರತೆಯಿಂದಾಗಿ ತಲಾ 500 ಮೆವಾ ಸಾಮರ್ಥ್ಯದ 6 ವಿದ್ಯುತ್‌ ಉತ್ಪಾ­ದನಾ ಘಟಕ­ಗಳಲ್ಲಿ ಮೂರನ್ನು ಈಗಾ­ಗಲೇ ಸ್ಥಗಿತಗೊಳಿಸಿದೆ.  ಈ ಬೆಳವಣಿಗೆ­ಯಿಂದ ಎನ್‌ಟಿ­ಪಿಸಿಗೆ ಈಗಾಗಲೇ ₨ 50 ಕೋಟಿಗಳಿಗೂ ಹೆಚ್ಚಿನ ನಷ್ಟ ಉಂಟಾ­ಗಿದೆ. ಎಂಸಿಎಲ್‌ಗೆ ₨ 21 ಕೋಟಿಗಳಿಗೂ ಅಧಿಕ ನಷ್ಟವಾಗಿದೆ. ಇದಲ್ಲದೆ, ಒಡಿಶಾ ಸರ್ಕಾರ ಕೂಡ ಕೋಟ್ಯಂತರ ರೂಪಾಯಿಗಳ ಆದಾಯ ತೆರಿಗೆಯನ್ನು ಕಳೆದುಕೊಳ್ಳಲಿದೆ  ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)