ರಾಜ್ಯದ ಆಡಳಿತದಲ್ಲಿ ಮುಲಾಯಂ ಹಸ್ತಕ್ಷೇ
ಬಾರಾಬಂಕಿ, (ಉತ್ತರ ಪ್ರದೇಶ), (ಪಿಟಿಐ): `ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಅವರ ಹಸ್ತಕ್ಷೇಪದಿಂದಾಗಿ ಉತ್ತರ ಪ್ರದೇಶ ಸರ್ಕಾರಕ್ಕೆ ಸಮರ್ಪಕವಾಗಿ ಕೆಲಸ ಮಾಡಲು ಆಗುತ್ತಿಲ್ಲ~ ಎಂದು ಬೇಣಿ ಪ್ರಸಾದ್ ವರ್ಮಾ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
`ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ನನ್ನ ಮಗ ಇದ್ದಂತೆ. ಹೀಗಾಗಿ ಅವರ ವಿರುದ್ಧ ಯಾವುದೇ ಆರೋಪ ಮಾಡಲಾರೆ~ ಎಂದು ಹೇಳ್ದ್ದಿದಾರೆ.ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ 60ಕ್ಕೂ ಹೆಚ್ಚು ಸ್ಥಾನ ಗಳಿಸಿದರೆ ಕೇಂದ್ರದಲ್ಲಿ ತೃತೀಯ ರಂಗ ಸರ್ಕಾರ ರಚಿಸಲಿದೆ ಎಂಬ ಮುಲಾಯಂ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, `ಮುಲಾಯಂ ಪ್ರಧಾನಿ ಆಗುವ ಕನಸು ಕಾಣುತ್ತಿದ್ದಾರೆ. ಆದರೆ, ಇದು ಅಸಾಧ್ಯದ ಮಾತು~ ಎಂದು ಲೇವಡಿ ಮಾಡ್ದ್ದಿದ್ದಾರೆ.
ರಾಹುಲ್-ಮೋದಿ ನಡುವಿನ ಯುದ್ಧ: `ಮುಂಬರುವ 2014ರ ಲೋಕಸಭಾ ಚುನಾವಣೆ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಮತ್ತು ಬಿಜೆಪಿಯ ನರೇಂದ್ರ ಮೋದಿ ಅವರ ನಡುವೆ ನೇರ ಪೈಪೋಟಿಯ ಅಖಾಡವಾಗಲಿದೆ~ ಎಂದೂ ಬೇಣಿ ಹೇಳಿದ್ದಾರೆ.
`ಚುನಾವಣೆಯ ನಂತರ ಕೇಂದ್ರದಲ್ಲಿ ಒಂದೋ ರಾಹುಲ್ ನೇತೃತ್ವದ ಸರ್ಕಾರ ರಚನೆಯಾಗಬೇಕು ಇಲ್ಲವೇ ಮೋದಿ ನೇತೃತ್ವದ ಸರ್ಕಾರ ರಚನೆಯಾಗಬೇಕು. ನಡುವೆ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ನೇತೃತ್ವದ ಸರ್ಕಾರ ಎಲ್ಲಿಂದ ಬಂತು~ ಎಂದು ವ್ಯಂಗ್ಯವಾಡಿದ್ದಾರೆ.
`ಪ್ರಾದೇಶಿಕ ಪಕ್ಷವಾದ ಸಮಾಜವಾದಿ ಪಕ್ಷ ಕೇಂದ್ರದಲ್ಲಿ ಸರ್ಕಾರ ರಚಿಸುವುದು ಅಸಾಧ್ಯದ ಮಾತು. ಆದರೆ, ಆ ಪಕ್ಷದ ನಾಯಕರು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ~ ಎಂದು ಆರೋಪಿಸಿದರು. ಮನಮೋಹನ್ ಸಿಂಗ್ ಅವರ ಆಶೀರ್ವಾದದಿಂದ ರಾಹುಲ್ ಪ್ರಧಾನಿಯಾಗುತ್ತಾರೆ. ಸಿಂಗ್ ಅವರಂಥ ಸಜ್ಜನ ಪ್ರಧಾನಮಂತ್ರಿಯನ್ನು ದೇಶ ಮುಂದೆಂದೂ ಪಡೆಯಲು ಸಾಧ್ಯವಿಲ್ಲ.
ವಿರೋಧ ಪಕ್ಷಗಳ ಹೊರತಾಗಿ ವಿಶ್ವದ ಎಲ್ಲ ನಾಯಕರೂ ಅವರನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ~ ಎಂದರು.ಕಾಂಗ್ರೆಸ್ ಮಾತ್ರ ರಾಷ್ಟ್ರಮಟ್ಟದಲ್ಲಿ ಮುಸ್ಲಿಮರ ಹಿತಾಸಕ್ತಿ ಪರ ಹೋರಾಟ ನಡೆಸುತ್ತಿರುವ ಪಕ್ಷ. ಆದರೆ, ಪ್ರಾದೇಶಿಕ ಪಕ್ಷಗಳು ಮುಸ್ಲಿಮರನ್ನು ದಾರಿ ತಪ್ಪಿಸುತ್ತಿವೆ~ ಎಂದು ಸಮಾಜವಾದಿ ಪಕ್ಷದ ಹೆಸರು ಪ್ರಸ್ತಾಪಿಸಿದರೆ ಹರಿಹಾಯ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.