ರಾಜ್ಯದ ನಂಟಿನ `ರೆಬೆಕಾ ಸೋಮರ್ಸ್‌' ನಿಧನ

7
ಭಾರತ-ಅಮೆರಿಕ ವಾಣಿಜ್ಯ ಪರಿಷತ್ ಅಧ್ಯಕ್ಷ ರಾನ್ ಸೋಮರ್ಸ್‌ ಪತ್ನಿ

ರಾಜ್ಯದ ನಂಟಿನ `ರೆಬೆಕಾ ಸೋಮರ್ಸ್‌' ನಿಧನ

Published:
Updated:

ವಾಷಿಂಗ್ಟನ್(ಪಿಟಿಐ):  ಕರ್ನಾಟಕದೊಂದಿಗೆ ಗಾಢ ನಂಟು ಹೊಂದಿದ್ದ ಭಾರತ- ಅಮೆರಿಕ ವಾಣಿಜ್ಯ ಪರಿಷತ್ತಿನ ಅಧ್ಯಕ್ಷ ರಾನ್ ಸೋಮರ್ಸ್‌ ಪತ್ನಿ ರೆಬೆಕಾ ಸೋಮರ್ಸ್‌ (50) ಅವರು ಶುಕ್ರವಾರ ಕೊನೆಯುಸಿರೆಳೆದಿದ್ದಾರೆ.ಅವರು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಕೊಜೆಂಟ್ರಿಕ್ಸ್ ಇತ್ಯಾದಿ ಅಮೆರಿಕ ಮೂಲದ ವಿದ್ಯುತ್ ಕಂಪೆನಿ ರಾನ್ ಸೋಮರ್ಸ್‌ ಕೆಲಸ ಮಾಡುತ್ತಿದ್ದಾಗ 1992-2004ರ ಅವಧಿಯಲ್ಲಿ ಬೆಂಗಳೂರು ಮತ್ತು ದೆಹಲಿಯಲ್ಲಿ ಈ ದಂಪತಿ ವಾಸವಾಗಿದ್ದರು.  ಬೆಂಗಳೂರಿನಲ್ಲಿ ನೆಲೆಸ್ದ್ದಿದ ವೇಳೆ  ಇಂದಿರಾನಗರದಲ್ಲಿರುವ ಅನಾಥಾಶ್ರಮವೊಂದರಲ್ಲಿ ರೆಬೇಕಾ ಸ್ವಯಂ ಸೇವಕಿಯಾಗಿ ಸೇವೆ ಸಲ್ಲಿಸಿದ್ದರು.  ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ, ವಿದ್ಯಾರ್ಥಿ ವೇತನ ನೀಡುತ್ತಿದ್ದರು.ಸಮಾಜ ಸೇವೆಯ ಜೊತೆಗೆ ಸಾಹಸ ಮನೋಭಾವವನ್ನು ರೂಢಿಸಿಕೊಂಡಿದ್ದ ರೆಬೆಕಾ ಅವರು ಹಳ್ಳ-ತೊರೆಗಳ ಶೋಧ, ಚಾರಣ, ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದರು. ಕಾವೇರಿ ಮತ್ತು ಗಂಗಾ ನದಿಗಳಲ್ಲಿ ಕಂಡುಬರುವ ವಿಶಿಷ್ಟ `ಮಶೀರ್' ಮೀನು ಹಿಡಿಯುವುರಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಅಲ್ಲದೆ ಕಬಿನಿ, ಬಂಡೀಪುರ ಹಾಗೂ ನಾಗರಹೊಳೆ ಕಾಡುಗಳಲ್ಲಿ ಹೆಚ್ಚು ಸುತ್ತಾಡಿದ್ದ ಅವರು, ಆನೆ ಮತ್ತು ಪಕ್ಷಿಗಳ ಕುರಿತು ಅಧ್ಯಯನ ನಡೆಸಿದ್ದರು.`ಭಾರತೀಯರ  ಸ್ನೇಹಪರತೆ ಮತ್ತು ಮತ್ತು ವಿಶಾಲ ಹೃದಯನ್ನು ಅರಿಯಲು ರೆಬೆಕಾ ನನಗೆ ನೆರವಾದಳು' ಎಂದು ಪತಿ ರಾನ್ ಸೋಮರ್ಸ್‌ ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry