ಬುಧವಾರ, ಮಾರ್ಚ್ 3, 2021
19 °C
ಬೆಳಗಾವಿ, ನಿಪ್ಪಾಣಿ, ಕಾರವಾರ ಮಹಾರಾಷ್ಟ್ರಕ್ಕೆ ಸೇರ್ಪಡೆ ಹೇಳಿಕೆಗೆ ಖಂಡನೆ

ರಾಜ್ಯದ ನೆಲ ಕಸಿಯಲು ಬಿಡೆವು: ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದ ನೆಲ ಕಸಿಯಲು ಬಿಡೆವು: ಪಾಟೀಲ

ಬೆಂಗಳೂರು: ಬೆಳಗಾವಿ, ಕಾರವಾರ ನಿಪ್ಪಾಣಿಯನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆಗೊಳಿಸುವುದಾಗಿ  ಪಿಂಪ್ರಿಯಲ್ಲಿ ನಡೆದ ಮರಾಠಿ ಸಮ್ಮೇಳನದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್  ಹೇಳಿಕೆ ನೀಡಿರುವುದನ್ನು ಬೆಳಗಾವಿ ಗಡಿ ಉಸ್ತುವಾರಿ ಎಚ್.ಕೆ. ಪಾಟೀಲ ತೀವ್ರವಾಗಿ ಖಂಡಿಸಿದರು. ರಾಜ್ಯಕ್ಕೆ ಸೇರಿದ ನೆಲವನ್ನು ಕಸಿದುಕೊಳ್ಳಲು ಯಾರಿಗೂ ಬಿಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ‘ಈ ಮೂರು ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆಗೊಳಿಸಿ ‘ಸಂಯುಕ್ತ ಮಹಾರಾಷ್ಟ್ರ’ ನಿರ್ಮಾಣ ಮಾಡುತ್ತೇವೆ ಎಂದು ಫಡಣವೀಸ್‌ ಹೇಳಿಕೆ ನೀಡಿದ್ದಾರೆ. ಸಂವಿಧಾನಾತ್ಮಕವಾದ ಜವಾಬ್ದಾರಿ ಸ್ಥಾನದಲ್ಲಿರುವ ಅವರು ಪ್ರಚೋದನಾತ್ಮಕ ಹೇಳಿಕೆ ನೀಡಿರುವುದು ಸರಿಯಲ್ಲ’ ಎಂದರು.‘ಬೆಳಗಾವಿ ಗಡಿ ವಿಚಾರವನ್ನು  ಮಹಾರಾಷ್ಟ್ರವೇ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಈಗ ಅರ್ಜಿ ವಿಚಾರಣೆಗೆ ಬರುತ್ತಿರುವ ಸಂದರ್ಭದಲ್ಲಿ ಇಂತಹ ಹೇಳಿಕೆ ನೀಡುವ ಮೂಲಕ ಫಡಣವೀಸ್‌ ನ್ಯಾಯಾಲಯಕ್ಕೆ ಅಗೌರವ ತೋರಿದ್ದಾರೆ. ನ್ಯಾಯಾಂಗ ನಿಂದನೆ ಮಾಡಿದ್ದಾರೆ’ ಎಂದು ಆರೋಪಿಸಿದರು.‘ಬೆಳಗಾವಿ ಕರ್ನಾಟಕ್ಕೆ ಸೇರಿದ್ದು ಎಂದು 1929ರಲ್ಲಿ ಎನ್.ಸಿ.ಕೇಳ್ಕರ್‌ ನೇತೃತ್ವದಲ್ಲಿ ನಡೆದ ಮರಾಠಿ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂಬುದನ್ನು ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ನೆನಪು ಮಾಡಲು ಬಯಸುತ್ತೇನೆ’ ಎಂದರು.‘ಬೆಳಗಾವಿ, ನಿಪ್ಪಾಣಿ, ಕಾರವಾರ ಕರ್ನಾಟಕದ ಅವಿಭಾಜ್ಯ ಅಂಗ. ಇವುಗಳ ಮೇಲೆ ಕೆಟ್ಟ ಕಣ್ಣು ಬೀರುವುದನ್ನು ಮಹಾರಾಷ್ಟ್ರ ನಿಲ್ಲಿಸಬೇಕು. ಸಮಾಜದ ಶಾಂತಿ ಕದಡುವ ಕೆಲಸವನ್ನು ಫಡಣವೀಸ್ ಬಿಡಬೇಕು. ರಾಷ್ಟ್ರದ, ಜನರ ಹಿತದೃಷ್ಟಿಯಿಂದ ಇಂತಹ ಹೇಳಿಕೆಗಳು ಸೂಕ್ತವಲ್ಲ’ ಎಂದರು.ಚರ್ಚಿಸಿ ತೀರ್ಮಾನ: ‘ನಾವು ಸದ್ಯಕ್ಕೆ ಯಾರಿಗೂ ಪತ್ರ ಬರೆಯಲು ಹೋಗು ವುದಿಲ್ಲ. ಈ ವಿಚಾರದ ಬಗ್ಗೆ ಸಂಬಂಧಿಸಿದವರೊಂದಿಗೆ (ಮುಖ್ಯಮಂತ್ರಿ, ಗಡಿ ರಕ್ಷಣಾ ಆಯೋಗ, ವಕೀಲರು) ಚರ್ಚಿಸಿ ತೀರ್ಮಾ ನಿಸುತ್ತೇವೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಈ ಹೇಳಿಕೆಗಳನ್ನು ಗಮನಿಸಬೇಕು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ರಾಜಕೀಯಕ್ಕಾಗಿ ಬೆಳಗಾವಿ ಬಳಕೆ- ಸಿಎಂ (ಮಂಡ್ಯ ವರದಿ): ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಆ ವಿಷಯದಲ್ಲಿ ಮಹಾಜನ ವರದಿಯೇ ಅಂತಿಮ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಜಿಲ್ಲೆಯ ಆದಿಚುಂಚನಗಿರಿಯಲ್ಲಿ ಗುರು ನಮನ–ಭಕ್ತಿ ಸಂಗಮ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ರಾಜಕೀಯ ಅಸ್ತಿತ್ವಕ್ಕಾಗಿ ಆಗಾಗ ಮಹಾರಾಷ್ಟ್ರ ರಾಜಕಾರಣಿಗಳು ಬೆಳಗಾವಿಯ ಬಗ್ಗೆ ಮಾತನಾಡುತ್ತಿರುತ್ತಾರೆ. ಅದಕ್ಕೆ ಮಹತ್ವ ನೀಡಬೇಕಿಲ್ಲ ಎಂದರು.ನ್ಯಾಯಾಲಯದಲ್ಲಿ ಕಾನೂನು ಹೋರಾಟವನ್ನು ರಾಜ್ಯ ಸರ್ಕಾರ ಸಮರ್ಥವಾಗಿ ನಡೆಸಲಿದೆ. ಆ ಕಾರಣಕ್ಕಾಗಿಯೇ ಬೆಳಗಾವಿ ಗಡಿ ವಿವಾದ ವಿಷಯ ಮೇಲ್ವಿಚಾರಣೆ ವಹಿಸಲು ಉಸ್ತುವಾರಿ ಸಚಿವರನ್ನಾಗಿ ಎಚ್‌.ಕೆ. ಪಾಟೀಲ ಅವರನ್ನು ನೇಮಕ ಮಾಡಲಾಗಿದೆ ಎಂದರು.

ವಿಧಾನಸಭೆ ಉಪಚುನಾವ ಣೆಯ ಮೂರೂ ಕ್ಷೇತ್ರಗಳ ಅಭ್ಯರ್ಥಿ ಗಳನ್ನು ಅಂತಿಮಗೊಳಿಸಿಲ್ಲ. ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಟಿಕೆಟ್‌ಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಅಸಮಾಧಾನಗೊಂಡಿದ್ದಾರೆ ಎಂಬುದು ಸುಳ್ಳಿ ಎಂದರು.

ಪ್ರದರ್ಶನ ನಿಷೇಧಿಸಿದರೆ ಪ್ರತಿಭಟನೆ- ಚಿತ್ರತಂಡ ಎಚ್ಚರಿಕೆ (​ಬೆಳಗಾವಿ ವರದಿ): ರಾಜ್ಯದಲ್ಲಿ ‘ಮರಾಠಿ ಟೈಗರ್ಸ್’ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡದಿದ್ದರೆ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಪ್ರತಿಭಟನೆಎದುರಿಸಬೇಕಾಗುತ್ತದೆ ಎಂದು ಚಿತ್ರದ ನಾಯಕ ನಟ, ಶಿವಸೇನೆ ಮುಖಂಡ ಅಮೋಲ್‌ ಕೊಲ್ಹೆ  ಸೋಮವಾರ ಇಲ್ಲಿ ಎಚ್ಚರಿಸಿದರು.

ನಗರದಲ್ಲಿ ನಡೆದ ಚಿತ್ರದ ಪ್ರಚಾರ ಕಾರ್ಯಕ್ರಮದ ವೇಳೆ ಮಾತನಾಡಿದ ಅವರು, ಕರ್ನಾಟಕ ದಲ್ಲಿ ಈ ಚಿತ್ರ ಬಿಡುಗಡೆಗೆ ಅವಕಾಶ ಸಿಗದಿದ್ದರೆ ಮಹಾರಾಷ್ಟ್ರದಲ್ಲೂ ಕನ್ನಡ ಚಿತ್ರಗಳಿಗೆ ಅಂಥದೇ ಪರಿಸ್ಥಿತಿ ನಿರ್ಮಾಣಗೊಳ್ಳುವ ಸಾಧ್ಯತೆಯಿದೆ’ ಎಂದರು.ಹಿಂಡಲಗಾದಲ್ಲಿರುವ ಎಂ.ಇ.ಎಸ್‌ ಕಾರ್ಯಕರ್ತರ ಹುತಾತ್ಮ ಸ್ಮಾರಕಕ್ಕೆ ಗೌರವ ಸಲ್ಲಿಸಿದ ಬಳಿಕ ನಿರ್ಮಾಪಕರಾದ ನವೀದ್‌ ಹಂಗೇದ್‌, ಅಭಿಜಿತ ತಹಶೀಲ್ದಾರ, ಪ್ರಶಾಂತ ಕುಲಕರ್ಣಿ, ನಿರ್ದೇಶಕ ಅವಧೂತ ಕದಂ ಅವರೊಂದಿಗೆ ನಗರದ ಮರಾಠಾ ಮಂದಿರದಲ್ಲಿ ಪ್ರಚಾರ ಸಭೆ ನಡೆಸಿದರು. ಚಿತ್ರದ ಮೂಲಕ ಮರಾಠಿ ಭಾಷಿಕರ ಹಕ್ಕನ್ನು ಬಿಂಬಿಸುವ ಪ್ರಯತ್ನ ಮಾಡಿರುವುದಾಗಿ  ಹೇಳಿದರು.‘ಗಡಿ ವಿವಾದ ಕುರಿತು 5 ವರ್ಷ ಗಳಿಂದ ಸಿದ್ಧತೆ ಮಾಡಿಕೊಂಡಿದ್ದೆವು. ಚಿತ್ರದಲ್ಲಿ ಆಕ್ಷೇಪಾರ್ಹವಾದ ವಿಷ ಯವಿಲ್ಲ. ಅಂತೆಯೇ ಭಾರತೀಯ ಚಲನಚಿತ್ರ ಸೆನ್ಸಾರ್‌ ಮಂಡಳಿಯೂ ಪ್ರಮಾಣಪತ್ರ ನೀಡಿದೆ. ಮಂಡಳಿ ಯಲ್ಲಿ ಕನ್ನಡ ಭಾಷಿಕ ಸದಸ್ಯರೂ ಇದ್ದಾರೆ’ ಎಂದು ಅವಧೂತ ಕದಂ ಹೇಳಿದರು.  ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದರೂ ಗಡಿ ವಿಷಯ ಕುರಿತು ಸಿನಿಮಾ ಮಾಡು ವುದರಲ್ಲಿ ತಪ್ಪೇನಿಲ್ಲ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.