ಮಂಗಳವಾರ, ಮೇ 18, 2021
22 °C

ರಾಜ್ಯದ ವಿದ್ಯುತ್ ಪರಿಸ್ಥಿತಿ ಸುಧಾರಿಸಲಿ

ಕೆ. ಪಿ. ವಿಷ್ಣುವರ್ಧನ,ಕೊಡಗವಳ್ಳಿಹಟ್ಟಿ(ಹೊಳಲ್ಕೆರೆ ತಾ.) Updated:

ಅಕ್ಷರ ಗಾತ್ರ : | |

ನೂತನ ಮುಖ್ಯಮಂತ್ರಿಗಳು ಪ್ರಣಾಳಿಕೆಯಲ್ಲಿ ಪ್ರಕಟಿಸಿರುವ ವಿಚಾರಗಳತ್ತ ಗಮನ ಹರಿಸುತ್ತಿದ್ದಾರೆ. ಆದರೆ ಅತಿ ಮುಖ್ಯವಾದ ವಿದ್ಯುತ್ ಸಮಸ್ಯೆ ಬಗ್ಗೆ ಯಾವುದೇ ರೀತಿಯ ವಿಚಾರಗಳು ಪ್ರಸ್ತಾಪವಾಗುತ್ತಿಲ್ಲ.ಮುಖ್ಯಮಂತ್ರಿಯಾಗಿ ನೇಮಕಗೊಂಡ ಮೊದಲ ದಿನವೇ ಸಿದ್ದರಾಮಯ್ಯನವರು ನನ್ನ ಮೊದಲ ಆದ್ಯತೆ ವಿದ್ಯುತ್ ಸಮಸ್ಯೆಯ ಕಡೆಗೆ ಎಂದು ಹೇಳಿದ್ದರು. ಆದರೆ ವಿದ್ಯುತ್ ಖಾತೆಯನ್ನೇ ಯಾರಿಗೂ ಕೊಡಲಿಲ್ಲ. ತಾವೇ ವಿದ್ಯುತ್ ಖಾತೆ ಇಟ್ಟುಕೊಳ್ಳುವ ಬದಲು ಒಬ್ಬ ದಕ್ಷರಾದವರಿಗೆ ಈ ಖಾತೆಯ ಜವಾಬ್ದಾರಿ ಹೊರಿಸಿ ವಿದ್ಯುತ್ ಸುಧಾರಣೆಯ ಬಗ್ಗೆ ತ್ವರಿತಗತಿಯಲ್ಲಿ ಕಾರ್ಯಪ್ರವೃತ್ತರಾಗಬೇಕಿತ್ತು.ರಾಜ್ಯದ ಗ್ರಾಮೀಣ ಜನತೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇಡೀ ಹಗಲು ಯಾವ ಕಾರಣಕ್ಕೂ ಸಿಂಗಲ್ ಫೇಸ್ ವಿದ್ಯುತ್ ಸರಬರಾಜಾಗಲಿಲ್ಲ. ಕೇವಲ 2 ರಿಂದ 3 ಗಂಟೆ 3-ಫೇಸ್‌ನಲ್ಲಿ, ತೋಟಗಾರಿಕಾ ಬೆಳೆಗಳನ್ನು ಉಳಿಸಿಕೊಳ್ಳಲು ಎಷ್ಟೊ ರೈತರಿಗೆ ಸಾಧ್ಯವಾಗಲಿಲ್ಲ. ಅಡಿಕೆ ತೋಟಗಳು ಒಣಗಿವೆ. ಆದ್ದರಿಂದ ಮುಖ್ಯಮಂತ್ರಿಗಳು ತಮ್ಮ ಕೆಲಸದ ಒತ್ತಡದಲ್ಲಿ ವಿದ್ಯುತ್ ಖಾತೆಗೆ ಬೇಗ ಜೀವ ಕೊಡಲು ಸಾಧ್ಯವಿಲ್ಲವಾದ್ದರಿಂದ ಒಬ್ಬ ದಕ್ಷ ಶಾಸಕರಿಗೆ ಈ ಖಾತೆ ಕೊಡಲಿ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.