ರಾಜ್ಯದ ವಿವಿಧೆಡೆ ಮಳೆ:ಸಿಡಿಲಿಗೆ ಮೂವರು ಬಲಿ

ಮಂಗಳವಾರ, ಜೂಲೈ 23, 2019
20 °C

ರಾಜ್ಯದ ವಿವಿಧೆಡೆ ಮಳೆ:ಸಿಡಿಲಿಗೆ ಮೂವರು ಬಲಿ

Published:
Updated:

ಬೆಂಗಳೂರು: ರಾಜ್ಯದ ವಿವಿಧೆಡೆ ಬುಧವಾರ ಗುಡುಗು, ಸಿಡಿಲಿಂದ ಕೂಡಿದ ಮಳೆ ಸುರಿದಿದೆ. ರಾಯಚೂರು, ಯಾದಗಿರಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಿಡಿಲಿನಿಂದ ತಲಾ ಒಬ್ಬರು ಮೃತಪಟ್ಟಿದ್ದಾರೆ.ರಾಯಚೂರು ತಾಲ್ಲೂಕಿನ ಯರಗೇರಾ ಗ್ರಾಮದಲ್ಲಿ ಸಂಜೆ ಪದ್ಮಣ್ಣ (55) ಎಂಬುವವರು ಮಳೆ ವೇಳೆ ಮೃತಪಟ್ಟಿದ್ದಾರೆ. ಇವರು ಗುಡುಗು- ಸಿಡಿಲಿನ ಭಾರಿ ಶಬ್ದಕ್ಕೆ ಹೆದರಿ ಮೃತಪಟ್ಟರು ಎನ್ನಲಾಗಿದೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಬಾದ್ಯಾಪುರ ಗ್ರಾಮದ ಸೀಮಾಂತರದಲ್ಲಿ ರತ್ತಾಳ ಗ್ರಾಮದ ದೊಡ್ಡಭೀಮಣ್ಣ ಸಾಯಬಣ್ಣ ದೊಡ್ಡಮನಿ (28) ಸಿಡಿಲು ಬಡಿದು ಸ್ಥಳದಲ್ಲೆ ಅಸು ನೀಗಿದ್ದಾರೆ, ಇತರ ಐವರು ಗಾಯಗೊಂಡಿದ್ದಾರೆ.ನೀಲಮ್ಮ ರಂಗನಾಥ ದೊರಿ, ಹಣಮಂತ್ರಾಯ ಕೊಂಡಯ್ಯ ಜಾಲಹಳ್ಳಿ, ರಾಮಣ್ಣ ಹಣಮಂತ ಅಂಗಡಿ, ಶರಣಬಸವ ಪಾಂಡುರಂಗ ಧೊರಿ, ರೇಣುಕಾ ಸಕ್ರೆಪ್ಪ ತಳವಾರ ಹಾಗೂ ಮನೆಯಲ್ಲಿ ಕುಳಿತಿದ್ದ ಎಲ್ಲಮ್ಮ ಹಣಮಂತ ತಳವಾರ ಸಿಡಿಲು ಬಡಿದು ಮೂರ್ಛೆ ಹೋದರು. ಎಲ್ಲರನ್ನೂ ಸುರಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಗೊಲ್ಲಹಳ್ಳಿ ಗ್ರಾಮದಲ್ಲಿ ನಾಗರಾಜ್ (34) ಎಂಬ ರೈತ ಸಂಜೆ  ಹೊಲದಲ್ಲಿ ಕೆಲಸ ಮಾಡುತ್ತ್ದ್ದಿದ ವೇಳೆ ಮಳೆ ಎಂದು ಮರದ ಕೆಳಗಡೆ ನಿಂತಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry