ರಾಜ್ಯದ ಹಲವೆಡೆ ಮಳೆ

7

ರಾಜ್ಯದ ಹಲವೆಡೆ ಮಳೆ

Published:
Updated:

ಬೆಂಗಳೂರು: ಸೋಮವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿಯ ಕೆಲವೆಡೆ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆಯಾಗಿದ್ದು, ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆದಿದೆ.ಬಂಡೀಪುರದಲ್ಲಿ 11 ಸೆಂ.ಮೀ.,  ಚಿಂತಾಮಣಿ 10, ಪೊನ್ನಂಪೇಟೆ, ನೆಲಮಂಗಲ 9, ಧರ್ಮಸ್ಥಳ, ಪಾಂಡವಪುರ 7, ಮೈಸೂರು, ಮಹದೇಶ್ವರ ಬೆಟ್ಟ, ಯಲಹಂಕ, ಮಾಗಡಿ 6, ಎಚ್. ಡಿ.ಕೋಟೆ, ಯಳಂದೂರು, ಕೆ.ಆರ್. ಪೇಟೆ, ಶ್ರೀರಂಗಪಟ್ಟಣ, ಕನಕಪುರ 5, ಮೂಡಬಿದಿರೆ, ವಿರಾಜಪೇಟೆ, ಚಾಮರಾಜನಗರ, ಕೆ.ಆರ್.ಸಾಗರ, ಕುಣಿಗಲ್‌ನಲ್ಲಿ 4 ಸೆಂ.ಮೀ. ಮಳೆಯಾಗಿದೆ.ಮಂಗಳೂರು, ಮಂಡ್ಯ, ಕೋಲಾರ, ಬಂಗಾರಪೇಟೆ, ಬೆಂಗಳೂರು ನಗರ, ಹೊಸಕೋಟೆ 3, ಬಂಟ್ವಾಳ, ಸುಬ್ರಹ್ಮಣ್ಯ, ನಾಪೋಕ್ಲು, ಕೊಟ್ಟಿಗೆಹಾರ, ಸರಗೂರು, ನಂಜನಗೂಡು,ಮಾಲೂರು, ರಾಮನಗರ, ಚನ್ನಪಟ್ಟಣ 2,  ಎಚ್.ಎ. ಎಲ್ ವಿಮಾನ ನಿಲ್ದಾಣ, ಬಾಗೇಪಲ್ಲಿ ಯಲ್ಲಿ 1ಸೆಂ.ಮೀ ಮಳೆಯಾಗಿದೆ.ಬಳ್ಳಾರಿಯಲ್ಲಿ ಗರಿಷ್ಠ ಉಷ್ಣಾಂಶ 34.1 ಡಿಗ್ರಿ ಸೆಲ್ಸಿಯಸ್ ಹಾಗೂ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಅತಿ ಕನಿಷ್ಠ ಉಷ್ಣಾಂಶ 14.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.ಮುನ್ಸೂಚನೆ: ಮುಂದಿನ 48 ಗಂಟೆಗಳ ಕಾಲ ದಕ್ಷಿಣ ಒಳನಾಡಿನ ಹಲವು ಪ್ರದೇಶಗಳು ಮತ್ತು ಕರಾವಳಿಯಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry