ರಾಜ್ಯದ 21 ಪೊಲೀಸರಿಗೆ ರಾಷ್ಟ್ರಪತಿ ಪದಕ

7

ರಾಜ್ಯದ 21 ಪೊಲೀಸರಿಗೆ ರಾಷ್ಟ್ರಪತಿ ಪದಕ

Published:
Updated:

ಬೆಂಗಳೂರು: ನಗರ ಪೊಲೀಸ್ ಕಮಿಷನರ್ ಆದ ಹಿರಿಯ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಸೇರಿದಂತೆ ರಾಜ್ಯದ 21 ಪೊಲೀಸ್ ಅಧಿಕಾರಿಗಳಿಗೆ ಗಣರಾಜ್ಯೋತ್ಸವ ಸಂದರ್ಭದಲ್ಲಿ ನೀಡಲಾಗುವ ರಾಷ್ಟ್ರಪತಿ ಪದಕ ಲಭಿಸಿದೆ.ಶೌರ್ಯ ಸೇವಾ ಪದಕ: ಶಂಕರ್ ಬಿದರಿ- ಬೆಂಗಳೂರು ನಗರ ಪೊಲೀಸ್ ಕಮಿಷನರ್; ಕೆ.ಕೆ.ವಿಜಯ್‌ಕುಮಾರ್- ಇನ್‌ಸ್ಪೆಕ್ಟರ್, ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್‌ಆರ್‌ಪಿ) ಬೆಂಗಳೂರು; ಕೆ.ರಮಾನಂದ- ಸಶಸ್ತ್ರ ಮುಖ್ಯಕಾನ್‌ಸ್ಟೆಬಲ್, ಕೆಎಸ್‌ಆರ್‌ಪಿ, ಮಂಗಳೂರು; ಜಿ.ಕೆ.ದಿಲೀಪ್‌ಕುಮಾರ್- ಸಶಸ್ತ್ರ ಕಾನ್‌ಸ್ಟೆಬಲ್, ಕೆಎಸ್‌ಆರ್‌ಪಿ, ಹಾಸನ.ವಿಶಿಷ್ಟ ಸೇವಾ ಪದಕ: ಎ.ಎಂ.ಪ್ರಸಾದ್- ಐಜಿಪಿ, ಕೆಎಸ್‌ಆರ್‌ಪಿ; ವಿ.ಎಸ್.ಡಿಸೋಜಾ- ಡಿಸಿಪಿ, ಬೆಂಗಳೂರು ಗುಪ್ತಚರ ದಳ.ಗಣನೀಯ ಸೇವಾ ಪದಕ: ಬಿ.ದಯಾನಂದ- ಡಿಐಜಿ, ರಾಜ್ಯ ಗುಪ್ತಚರ ದಳ; ಅಮೃತ್‌ಪಾಲ್- ಡಿಐಜಿ, ನಕ್ಸಲ್ ನಿಗ್ರಹ ಪಡೆ, ಕಾರ್ಕಳ; ಜೆ.ಅರುಣ್ ಚಕ್ರವರ್ತಿ- ಡಿಐಜಿ ಮತ್ತು ನಿರ್ದೇಶಕರು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ; ಟಿ.ಜಿ.ಕೃಷ್ಣಭಟ್- ಡಿಸಿಪಿ, ಆಡಳಿತ ವಿಭಾಗ, ಬೆಂಗಳೂರು; ಬಿ.ಚಂದ್ರಮೋಹನ್‌ಸಿಂಗ್- ಎಸ್ಪಿ, ರಾಜ್ಯ ಗುಪ್ತಚರ ದಳ; ಶಿವಲಿಂಗಪ್ಪ- ಎಸ್ಪಿ ಮತ್ತು ಕಮಾಂಡೆಂಟ್, ಗೃಹರಕ್ಷಕ ಹಾಗೂ ಪೌರರಕ್ಷಣಾ ಇಲಾಖೆ, ಬೆಂಗಳೂರು; ಬಿ.ಜಯಭಂಡಾರಿ- ಡಿವೈಎಸ್ಪಿ, ಜಿಲ್ಲಾ ಅಪರಾಧ ದಾಖಲಾತಿ ವಿಭಾಗ (ಡಿಸಿಆರ್‌ಬಿ), ದಕ್ಷಿಣ ಕನ್ನಡ.ಎಂ.ಕೃಷ್ಣಪ್ಪ- ಡಿವೈಎಸ್ಪಿ, ಮೆಸ್ಕಾಂ ವಿಚಕ್ಷಣ ದಳ, ಮಂಗಳೂರು; ಎಂ.ಶಂಕರಪ್ಪ- ಡಿವೈಎಸ್ಪಿ, ಸಿಐಡಿ; ಎನ್.ರುದ್ರಮುನಿ- ಡಿವೈಎಸ್ಪಿ, ಹಿರಿಯೂರು ಉಪವಿಭಾಗ, ಚಿತ್ರದುರ್ಗ ಜಿಲ್ಲೆ; ಎನ್.ಟಿ.ಪ್ರಮೋದ್‌ರಾವ್- ಇನ್‌ಸ್ಪೆಕ್ಟರ್, ಕರಾವಳಿ ರಕ್ಷಣಾ ಪಡೆ (ಸಿಎಸ್‌ಪಿಎಸ್), ಕುಮಟಾ; ಮಹಮ್ಮದ್ ಬುದಾನ್- ಇನ್‌ಸ್ಪೆಕ್ಟರ್, ರಾಜ್ಯ ಗುಪ್ತಚರ ದಳ; ಎಸ್.ಕೆ.ತಮ್ಮಣ್ಣ ಶಾಸ್ತ್ರಿ- ಸಬ್‌ಇನ್‌ಸ್ಪೆಕ್ಟರ್, ರಾಜ್ಯ ಗುಪ್ತಚರ ದಳ; ಎಲ್.ಪುಟ್ಟಸ್ವಾಮಿ- ಸಬ್‌ಇನ್‌ಸ್ಪೆಕ್ಟರ್, ರಾಜ್ಯ ಪೊಲೀಸ್ ಮಹಾನಿರ್ದೇಶಕರ ನಿಯಂತ್ರಣ ಕೊಠಡಿ, ಬೆಂಗಳೂರು; ಎ.ವಿ.ಪ್ರಕಾಶ್- ಎಎಸ್‌ಐ, ನಿಸ್ತಂತು ವಿಭಾಗ, ಬೆಂಗಳೂರು.ಶೌರ್ಯ ಸೇವಾ ಪದಕಕ್ಕೆ ಪಾತ್ರರಾಗಿರುವ ನಾಲ್ವರು ಕಾಡುಗಳ್ಳ ವೀರಪ್ಪನ್ ಬಂಧನಕ್ಕೆ ರಚಿಸಲಾಗಿದ್ದ ವಿಶೇಷ ಕಾರ್ಯಚರಣೆ ಪಡೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.ಬಿದರಿ ಅವರಿಗೆ ಇದೀಗ ಎರಡನೇ ಬಾರಿಗೆ ರಾಷ್ಟ್ರಪತಿಗಳ ಶೌರ್ಯ  ಪದಕ ಲಭಿಸಿದೆ. ಹಿಂದೆ 1991ರಲ್ಲಿಯೂ ಈ ಪದಕ ಲಭಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry