ರಾಜ್ಯಪಾಲರ ವಿರುದ್ಧ ‘ಅಹಿಂದ’ ಪ್ರತಿಭಟನೆ

7

ರಾಜ್ಯಪಾಲರ ವಿರುದ್ಧ ‘ಅಹಿಂದ’ ಪ್ರತಿಭಟನೆ

Published:
Updated:

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾ ಲಯದ ಕುಲಪತಿಯಾಗಿ ಪ್ರೊ.ಬಿ.ಬಿ. ಕಲಿವಾಳ್‌ ಅವರನ್ನು ನೇಮಿಸಿರುವ ರಾಜ್ಯಪಾಲ ಹಂಸರಾಜ್‌ ಭಾರ ದ್ವಾಜ್‌ ಅವರ ಕ್ರಮ ಖಂಡಿಸಿ ‘ಅಹಿಂದ’ ಹೋರಾಟ ಸಮಿತಿ ಕಾರ್ಯಕರ್ತರು ಬುಧವಾರ ನಗರದ ಅಂಬೇಡ್ಕರ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತ ಪಡಿಸಿದರು. ಸಾಹಿತಿ ಯು.ಆರ್‌.ಅನಂತಮೂರ್ತಿ ಅವರ ನೇತೃತ್ವದ ಶೋಧನಾ ಸಮಿತಿ, ಆಯ್ಕೆ ಮಾಡಿದ ಮೂವರಲ್ಲಿ ಪರಿ ಷ್ಟ ವರ್ಗದ ಗೋಮತಿದೇವಿ ಹೆಸರೇ ಮೊದಲಿತ್ತು. ಅವರ ಹೆಸರನ್ನು ಬಿಟ್ಟು ಕಲಿವಾಳ್‌ ಅವರನ್ನು ನೇಮಕ ಮಾಡಿ ರುವ ಕ್ರಮ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮುಖಂಡ ಎಚ್‌.ಕೆ.ರಾಮ ಚಂದ್ರಪ್ಪ ಮಾತನಾಡಿ, ‘ರಾಜ್ಯಪಾಲರ ನಡೆಯ ಬಗ್ಗೆ ರಾಜ್ಯದ ಜನರಿಗೆ ಅನು ಮಾನ ಕಾಡುತ್ತಿದೆ. ರಾಜಭವನ ದಲ್ಲೂ ಭ್ರಷ್ಟಾಚಾರ ಹೊಗೆ ಕಾಣಿಸು ತ್ತಿದೆ. ಜಾತಿ, ಹಣ ಬಲದ ಆಧಾರದ ಮೇಲೆ ಕುಲಪತಿಯ ನೇಮಕವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೋಮತಿದೇವಿ ಅವರ ಹೆಸರನ್ನೇ ಶಿಫಾರಸು ಮಾಡಿದ್ದರು. ಆದರೆ, ರಾಜ್ಯಪಾಲರು ದ್ವಿಮುಖ ನೀತಿ ಅನು ಸರಿಸುವ ಮೂಲಕ ‘ಅಹಿಂದ’ ವರ್ಗಕ್ಕೆ ಅನ್ಯಾಯ ಎಸಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.ಮುಖಂಡ ಬಿ.ಎಂ.ಸತೀಶ್‌ ಮಾತ ನಾಡಿ, ‘ರಾಜ್ಯಪಾಲರು ರಾಜ್ಯದಿಂದ ಹೊರ ನಡೆಯಬೇಕು. ಜಾತಿ, ಹಣದ ಪ್ರಭಾವ ಕುಲಪತಿಯ ನೇಮಕದಲ್ಲಿ ಕಾಣಿಸುತ್ತಿದೆ. ಸಾಮಾಜಿಕ ನ್ಯಾಯಕ್ಕೆ ರಾಜ್ಯಪಾಲರು ಮನ್ನಣೆ ನೀಡಿಲ್ಲ. ಇದು ಮಹಿಳೆಗೆ ಆದ ಅವಮಾನ, ಅನ್ಯಾಯ. ಈ ಬಗ್ಗೆ ಶೋಧನಾ ಸಮಿತಿ ಅಧ್ಯಕ್ಷರೇ ಆಕ್ಷೇಪ ಎತ್ತಿದ್ದಾರೆ. ರಾಜ್ಯ ಪಾಲರು ನಡೆಯ ಬಗ್ಗೆ ಅನುಮಾನ ವಿದೆ ಎಂದು ಆರೋಪಿಸಿದರು.ರೈತ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ್‌, ಗುಡ್ಡಪ್ಪ, ಟಿ.ದಾಸ ಕರಿಯಪ್ಪ, ಮಾಯಕೊಂಡ ಮಲ್ಲಿ ಕಾರ್ಜುನಪ್ಪ, ಮಲ್ಲಿಕಾರ್ಜುನ್‌, ಅನೀಶ್‌ ಪಾಷಾ, ನಾಗರಾಜ್‌, ಗಂಗಾ ಧರ್‌, ಸೋಮೇಶ್‌, ಚಂದ್ರು, ವಾಸು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry