ರಾಜ್ಯಮಟ್ಟದ ಅಥ್ಲೆಟಿಕ್ ಕೂಟಕ್ಕೆ ತೆರೆ; ಆಳ್ವಾಸ್ ತಂಡಕ್ಕೆ ಸಮಗ್ರ ಪ್ರಶಸ್ತಿ

7

ರಾಜ್ಯಮಟ್ಟದ ಅಥ್ಲೆಟಿಕ್ ಕೂಟಕ್ಕೆ ತೆರೆ; ಆಳ್ವಾಸ್ ತಂಡಕ್ಕೆ ಸಮಗ್ರ ಪ್ರಶಸ್ತಿ

Published:
Updated:

ದಾವಣಗೆರೆ: ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್ ತಂಡ ಭಾನುವಾರ ಇಲ್ಲಿ ಮುಕ್ತಾಯಗೊಂಡ ಜಿಲ್ಲಾ ಅಥ್ಲೆಟಿಕ್ ಸಂಸ್ಥೆ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು. ಈ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 16 ಹೊಸ ನೂತನ ದಾಖಲೆಗಳು ನಿರ್ಮಾಣವಾದವು.ಮಹಿಳಾ ವಿಭಾಗ: 18ರ ವಯೋಮಿತಿಯ ಹ್ಯಾಮರ್‌ಥ್ರೋನಲ್ಲಿ ಆಳ್ವಾಸ್‌ನ ಪುಣ್ಯಶ್ರೀ ರೈ, 18ರ ವಯೋಮಿತಿಯ 5 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಬೆಂಗಳೂರು ಡಿವೈಎಸ್‌ಎಸ್‌ನ ಪ್ರತೀಕ್ಷಾ, 16ರ ವಯೋಮಿತಿಯ ಷಾಟ್‌ಪಟ್‌ನಲ್ಲಿ ಜಿ.ಕೆ. ನಮಿತಾ (ಆಳ್ವಾಸ್), 18ರ ವಯೋಮಿತಿಯ ಷಾಟ್‌ಪಟ್‌ನಲ್ಲಿ ಪಿ.ಎಸ್. ಉಮಾ (ಡಿವೈಎಸ್‌ಎಸ್, ಮೈಸೂರು), 20ರ ವಯೋಮಾನದ ವಿಭಾಗದಲ್ಲಿ ಕೆ. ರಶ್ಮಿ (ಆಳ್ವಾಸ್) ಭಾನುವಾರ ನೂತನ ದಾಖಲೆ ನಿರ್ಮಿಸಿದರು.ಪುರುಷರ ವಿಭಾಗ: 20ರ ವಯೋಮಿತಿಯ ಷಾಟ್‌ಪಟ್‌ನಲ್ಲಿ ಮೈಸೂರಿನ ನಂದೀಶ್ ಕುಮಾರ್, 16ರ ವಯೋಮಿತಿಯ 5 ಕಿ.ಮೀ ನಡಿಗೆ ಸ್ಪರ್ಧೆ ಎಸ್‌ಡಿಎಂನ ಅಭಿಷೇಕ್ ದಾಖಲೆ ಬರೆದರು.  ಶನಿವಾರ ಎಂಟು ದಾಖಲೆಗಳು ನಿರ್ಮಾಣವಾಗಿದ್ದವು. ಭಾನುವಾರದ  ದಾಖಲೆಗಳು ಸೇರಿ ಒಟ್ಟು 16 ದಾಖಲೆಗಳಾದವು.ಉತ್ತಮ ಅಥ್ಲೀಟ್‌ಗಳು: ಪುರುಷರ ವಿಭಾಗದ 20ರ ವಯೋಮಿತಿಯ ಹೈಜಂಪ್‌ನಲ್ಲಿ ಹರ್ಷಿತ್ (ಬೆಂಗಳೂರು ಸ್ಪೋರ್ಟ್ಸ್ ಕ್ಲಬ್), 18ರ ವಯೋಮಿತಿಯ 100 ಮೀ. ಹರ್ಡಲ್ಸ್‌ನಲ್ಲಿ ಪಿ.ಎಂ. ಮಂಜುನಾಥ್ (ಆಳ್ವಾಸ್), 16 ವಯೋಮಿತಿಯ 100 ಮೀ. ಹರ್ಡಲ್ಸ್‌ನಲ್ಲಿ ಶ್ರೀಶೈಲ (ಕೂಡಿಗೆ), 14ರ ವಯೋಮಿತಿಯ ಷಾಟ್‌ಪಟ್‌ನಲ್ಲಿ ಡೊಮಿನಿಕ್ ಫೆರ್ನಾಂಡಿಸ್ (ಕಾರವಾರ), ಮುಕ್ತ ವಿಭಾಗದ ಹೈಜಂಪ್‌ನಲ್ಲಿ ಬಿ. ಚೇತನ್ (ವೈಎಸ್‌ಸಿ ಬೆಂಗಳೂರು), ಮಹಿಳಾ ವಿಭಾಗದ 20ರ ವಯೋಮಿತಿಯ 100 ಮೀ ಓಟದಲ್ಲಿ ಬೇಬಿ ಸುಮಯಾ (ಮೈಸೂರು ಹಾಸ್ಟೆಲ್), 18ರ ವಯೋಮಿತಿಯ 100 ಮೀ ಓಟದಲ್ಲಿ ಮೇಘನಾ ಶೆಟ್ಟಿ (ಇಂಡೋ ಜರ್ಮನ್), 16ರ ವಯೋಮಿತಿಯ 100 ಮೀ ಓಟದಲ್ಲಿ  ಸಿಮಿ (ಆಳ್ವಾಸ್), 14ರ ವಯೋಮಿತಿಯ 100 ಮೀ ಓಟದಲ್ಲಿ  ಶಾಗುಪ್ತಾ (ಆಳ್ವಾಸ್),  ಮುಕ್ತ ವಿಭಾಗದ ಲಾಂಗ್‌ಜಂಪ್‌ನಲ್ಲಿ ವಿ.ಎಂ. ಜಾಲಿ (ಆಳ್ವಾಸ್).ಕೊನೆಯ ದಿನದ ಫಲಿತಾಂಶ:

ಪುರುಷರ ವಿಭಾಗ: 20ರ ವಯೋಮಿತಿ: 10 ಸಾವಿರ ಮೀ. ನಡಿಗೆ: ಶ್ರೀಯೋಮ್ ಪಟೇಲ್ (ಯುವ ಕ್ಲಬ್. ಕಾಲ; 13.14 ಸೆ.)-1, ಕುಲದೀಪ್ ಚವ್ಹಾಣ್ (ಯುವ ಕ್ಲಬ್) -2, ಸಂಜೀವ್ ಕುಮಾರ್ (ಆಳ್ವಾಸ್)-3.

400 ಮೀ. ಹರ್ಡಲ್ಸ್: ಕೆ.ಬಿ. ಚರಣ್ (ಆಳ್ವಾಸ್. ಕಾಲ; 56.8 ಸೆ.), ಬಿ.ಕೆ. ರಾಹುಲ್ ಹೆಗ್ಡೆ (ಯಂಗ್‌ಸ್ಟರ್ ಸ್ಪೋರ್ಟ್ಸ್ ಕ್ಲಬ್) -2, ಸಂತೋಷ್ (ಬಿಜಾಪುರ)-3200 ಮೀ. ಹರ್ಡಲ್: ಮಹಮದ್ ಅಫೀಫ್ (ಆಳ್ವಾಸ್. ಕಾಲ; 22.6)-1,  ಬಿ.ಆರ್. ರಂಗನಾಥ್ (ಡಿವೈಎಸ್‌ಎಸ್ ಬೆಂಗಳೂರು)-2, ಶಿವಕುಮಾರ್ (ಎಸ್‌ಎಐ ಬೆಂಗಳೂರು) -3ಷಾಟ್‌ಪಟ್: ನಂದೀಶ್ ಕುಮಾರ್ (ಮೈಸೂರು. ಕಾಲ; 14.63 ಸೆ.)-1, ಕೆ.ಬಿ. ಹರೀಶ್ (ಮೈಸೂರು)-2, ಎಚ್.ಸಿ. ವೆಂಕಟೇಶ್ (ಡಿವೈಎಸ್‌ಎಸ್ ಬೆಂಗಳೂರು) -3.16ರ ವಯೋಮಿತಿ: 5 ಸಾವಿರ ಮೀ. ನಡಿಗೆ: ಎಚ್.ಎಸ್ ಅಭಿಷೇಕ್ (ಎಸ್‌ಡಿಎಂ. ಉಜಿರೆ. ಕಾಲ; 26.02.9 ಸೆ.)-1, ಬಿ.ಡಿ ನೇಮಿತಾ (ಆಳ್ವಾಸ್)-2, ಬಿ.ಎಚ್. ಕಿರಣ್ (ಎಸ್‌ಎಐ ಧಾರವಾಡ)-3.14ರ ವಯೋಮಿತಿ: 600 ಮೀ. ಓಟ: ಆರ್.ಟಿ. ಹನುಮಂತ (ಡಿವೈಎಸ್‌ಎಸ್ ಬೆಂಗಳೂರು. ಕಾಲ; 1.28 ಸೆ.)-1, ಶಿವಕುಮಾರ್ -2, ಎಂ.ಕೆ. ಹನುಮಂತ (ಎಸ್.ಡಿ.ಎಂ. ಉಜಿರೆ)-3.ಹೈಜಂಪ್: ತಾವ್ರೋ (ಆಳ್ವಾಸ್) (ಎತ್ತರ; 1.48 ಮೀ.)-1, ಚೇತನ್ (ಎಸ್‌ಡಿಎಂ ಉಜಿರೆ)-2, ಯಶ್ (ದಕ್ಷಿಣ ಕನ್ನಡ)-3ಮಹಿಳೆಯರ ವಿಭಾಗ: 14ರ ವಯೋಮಿತಿ: 600 ಮೀ. ಓಟ: ಸಝಾ (ದಕ್ಷಿಣ ಕನ್ನಡ. ಕಾಲ; 1.46.5 ಸೆ.)-1, ಶುಭಾ ಮಲಿಕ್ (ಡಿವೈಎಸ್‌ಎಸ್ ಕೂಡಿಗೆ)-2, ಜಯಲಕ್ಷ್ಮೀ -3.ಹೈಜಂಪ್: ಕೃತಿಕಾ ಪರ್ವೋಡಿ (ಆಳ್ವಾಸ್) (ಎತ್ತರ; 1.28 ಮೀ.)-1, ಪಿಬಿ. ಹರ್ಷಿಣಿ (ಇಂಡೋ ಜರ್ಮನ್)-2, ನೀಲಿಮಾ (ಆಳ್ವಾಸ್)-3.16ರ ವಯೋಮಿತಿ: 3 ಸಾವಿರ ಮೀ. ನಡಿಗೆ: ವಿಲ್ಮಾ ಡಿಸೋಜಾ (ಎಸ್‌ಡಿಎಂ ಉಜಿರೆ. ಕಾಲ; 17.17.60 ಸೆ.)-1, ಕೆ.ಎಂ. ಕಾವ್ಯಶ್ರೀ (ಡಿವೈಎಸ್‌ಎಸ್ ವಿದ್ಯಾನಗರ)-2, ಕೆ. ಹರ್ಷಿಕಾ (ಆಳ್ವಾಸ್)-3.ಹೈಜಂಪ್: ಕೆ. ಬಬಿತಾ (ಎಸ್‌ಡಿಎಂ ಉಜಿರೆ, ಎತ್ತರ; 1.41 ಮೀ.)-1, ಜಿಸ್ಮಿ ಥಾಮಸ್ (ಆಳ್ವಾಸ್)-2, ಜಿ. ಅನ್ನಪೂರ್ಣಾ (ವೈಎಸ್‌ಸಿಬಿ ಬೆಂಗಳೂರು)-3ಷಾಟ್‌ಪಟ್: ಜಿ.ಕೆ. ನಮಿತಾ (ಆಳ್ವಾಸ್) (ದೂರ; 13.29)-1, ನಿವೇದಿತಾ ಸಾವಂತ್ (ಉತ್ತರ ಕನ್ನಡ)-2, ಎ. ಅನಿಖಿತಾ, (ಬೆಂಗಳೂರು)-3.18ರ ವಯೋಮಿತಿ: 5000 ಮೀ ನಡಿಗೆ: ಪ್ರತೀಕ್ಷಾ (ಡಿವೈಎಸ್‌ಎಸ್ ಬೆಂಗಳೂರು. ಕಾಲ 30.05.50 ಸೆ.)-1 ಎಂ.ಎನ್. ಅಖಿಲಾ (ಆಳ್ವಾಸ್)-2ಹೈಜಂಪ್: ಝೀನ್ ಲಾಸ್ವಿ ಒಲಿವೆರಾ (ಬೆಂಗಳೂರು ಸ್ಪೋರ್ಟ್ಸ್ ಕ್ಲಬ್) (ಎತ್ತರ; 1.50 ಮೀ.) -1, ಕೆ.ಜಿ. ಭವ್ಯಶ್ರೀ (ಆಳ್ವಾಸ್)-2, ಅನುಷಾ ಜಿ. ಪೂಜಾರಿ (ಆಳ್ವಾಸ್)-3ಹ್ಯಾಮರ್ ಥ್ರೋ: ಪುಣ್ಯಶ್ರೀ ಎಸ್. ರೈ (ಆಳ್ವಾಸ್) (ದೂರ; 39.87)-1, ರಚನಾ (ಆಳ್ವಾಸ್)-2,  ಡಬ್ಲ್ಯೂ. ಆರ್. ಹರ್ಷಿತಾ (ಡಿವೈಎಸ್‌ಎಸ್ ಮೈಸೂರು)-3.20ರ ವಯೋಮಿತಿ: 3 ಸಾವಿರ ಮೀ. ನಡಿಗೆ: ಶ್ರದ್ಧಾರಾಣಿ (ಡಿವೈಎಸ್‌ಎಸ್ ಮೈಸೂರು. ಕಾಲ 11.22.40 ಸೆ.)-1, ಸುಪ್ರೀತಾ (ಆಳ್ವಾಸ್)-2, ಕೆ.ಎಂ. ಅರ್ಚನಾ (ಆಳ್ವಾಸ್)-3.ಹ್ಯಾಮರ್ ಥ್ರೋ: ಕೆ. ರಶ್ಮಿ (ಆಳ್ವಾಸ್) (ದೂರ; 38.03 ಮೀ.) -1, ಪುಷ್ಪಾ ಎಸ್. ಗಡದಿ (ಡಿವೈಎಸ್‌ಎಸ್ ಮೈಸೂರು)-2, ಬಿ.ಟಿ. ಪ್ರಿಯಾಂಕಾ (ಆಳ್ವಾಸ್)-3.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry