ರಾಜ್ಯಮಟ್ಟದ ಫುಟ್ಬಾಲ್ ಟೂರ್ನಿ: ಮೈಸೂರು, ಮೊಗ್ರಾಲ್ ತಂಡ ಮುನ್ನಡೆ

7

ರಾಜ್ಯಮಟ್ಟದ ಫುಟ್ಬಾಲ್ ಟೂರ್ನಿ: ಮೈಸೂರು, ಮೊಗ್ರಾಲ್ ತಂಡ ಮುನ್ನಡೆ

Published:
Updated:

ಕುಶಾಲನಗರ: ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್, ಸುಂಟಿಕೊಪ್ಪ ಬ್ಲೂ ಬಾಯ್ಸ ಯೂತ್ ಕ್ಲಬ್ ವತಿಯಿಂದ ಸುಂಟಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಡಿ.ಶಿವಪ್ಪ ಸ್ಮಾರಕ ಗೋಲ್ಡನ್ ಕಪ್ ರಾಜ್ಯಮಟ್ಟದ ಫುಟ್ಬಾಲ್ ಟೂರ್ನಿಯ ಎರಡನೇ ದಿನವಾದ ಸೋಮವಾರ ನಡೆದ ಟೂರ್ನಿಯಲ್ಲಿ ಮೈಸೂರಿನ ಮುಸ್ಲಿಂ ಫುಟ್ಬಾಲ್ ಕ್ಲಬ್ ಮತ್ತು ಮೊಗ್ರಾಲ್‌ನ ಬ್ರದರ್ಸ್ ಫುಟ್ಬಾಲ್ ಕ್ಲಬ್ ತಂಡಗಳು ಮುನ್ನಡೆ ಪಡೆದವು.

ಮೊದಲ ಟೂರ್ನಿಯಲ್ಲಿ ಮೈಸೂರಿನ ಮುಸ್ಲಿಂ ಫುಟ್ಬಾಲ್ ಕ್ಲಬ್ ತಂಡವು ಮಂಗಳೂರಿನ ಬೊಳಾರ್ ಬ್ರದರ್ಸ್ ಫುಟ್ಬಾಲ್ ಕ್ಲಬ್ ತಂಡವನ್ನು 7-6 ಗೋಲುಗಳಿಂದ ಪರಾಭವಗೊಳಿಸಿತು. ಉಭಯ ತಂಡಗಳ ಮಧ್ಯೆ ಪರಸ್ಪರ ಪೈಪೋಟಿ ಏರ್ಪಟ್ಟ ಹಿನ್ನೆಲೆಯಲ್ಲಿ ಟೈ ಬ್ರೇಕರ್ ಮೂಲಕ ಗೋಲು ಬಾರಿಸಲಾಯಿತು. ಎರಡನೆ ಟೂರ್ನಿಯಲ್ಲಿ ಮೊಗ್ರಾಲ್ ಬ್ರದರ್ಸ್ ಕ್ಲಬ್ ತಂಡವು ಟೈ ಬ್ರೇಕರ್‌ನಲ್ಲಿ ಮಂಡ್ಯದ ಬೆನಕಾ ಫುಟ್ಬಾಲ್ ಕ್ಲಬ್ ತಂಡವನ್ನು 6-5 ಗೋಲುಗಳಿಂದ ಪರಾಭವಗೊಳಿಸಿತು.

ಮತ್ತೊಂದು ಟೂರ್ನಿಯಲ್ಲಿ ಹಾಸನದ ಹೊಯ್ಸಳ ತಂಡವು ಮುಂದಿನ ಪಂದ್ಯಾಟಕ್ಕೆ ವಾಕ್ ಓವರ್ ಪಡೆಯಿತು.

ಇಂದಿನ ಪಂದ್ಯಾಟ: ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಮಂಗಳೂರಿನ ತಳಪಾಡಿ ಹೀರೋ ಫುಟ್ಬಾಲ್ ಕ್ಲಬ್ ಮತ್ತು ಉಳ್ಳಾಲ ಫುಟ್ಬಾಲ್ ಕ್ಲಬ್ ತಂಡಗಳ ನಡುವೆ ಹಾಗೂ ಸಂಜೆ 4ಕ್ಕೆ ಉಪ್ಪಳದ ಸಿಟಿಜೆನ್ ಸ್ಪೋರ್ಟಿಂಗ್ ಕ್ಲಬ್ ಮತ್ತು ಮೈಸೂರಿನ ಅಶೋಕ ಫುಟ್ಬಾಲ್ ಕ್ಲಬ್‌ಗಳ ನಡುವೆ ಟೂರ್ನಿ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry