ರಾಜ್ಯಮಟ್ಟದ ಹೋರಾಟಕ್ಕೆ ತೀರ್ಮಾನ

7
ಅಮೃತ ಮಹಲ್ ಕಾವಲು ರಕ್ಷಣೆ

ರಾಜ್ಯಮಟ್ಟದ ಹೋರಾಟಕ್ಕೆ ತೀರ್ಮಾನ

Published:
Updated:

ಚಿಕ್ಕಮಗಳೂರು: ರಾಜ್ಯದ 6 ಜಿಲ್ಲೆಗಳ­ಲ್ಲಿರುವ ಅಮೃತ ಮಹಲ್ ಕಾವಲು­ಗಳನ್ನು ರಕ್ಷಿಸಿ, ತಳಿ ಅಭಿವೃದ್ಧಿಪಡಿಸು­ವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ರಾಜ್ಯವ್ಯಾಪಿ ಹೋರಾಟ ನಡೆ­ಸಲು ರಾಜ್ಯ ಅಮೃತ ಮಹಲ್ ಕಾವಲು ಉಳಿಸಿ ಮತ್ತು ತಳಿ ಅಭಿವೃದ್ಧಿ­ಪಡಿಸಿ ಹೋರಾಟ ಸಮಿತಿ ನಿರ್ಧರಿಸಿದೆ.ಅಜ್ಜಂಪುರ ಅಮೃತ ಮಹಲ್ ಕೇಂದ್ರದ ಆವರಣದಲ್ಲಿ ಗುರುವಾರ ನಡೆದ 6 ಜಿಲ್ಲೆಗಳ ಅಮೃತ ಮಹಲ್ ಕಾವಲು ಪ್ರದೇಶಗಳ ಹೋರಾಟ­ಗಾರರ ಸಭೆಯಲ್ಲಿ ಅಮೃತ ಮಹಲ್ ಕಾವಲು ಅಭಿವೃದ್ಧಿ ಕುರಿತಂತೆ ಹಲವು ಸಲಹೆಗಳನ್ನು ಸರ್ಕಾರದ ಮುಂದಿಡಲು ನಿರ್ಣಯಿಸಲಾಯಿತು.6 ಜಿಲ್ಲೆಗಳ ಅಮೃತ ಮಹಲ್ ಕಾವಲು ಪ್ರದೇಶಗಳನ್ನು ಸಂರಕ್ಷಿಸಲು ಬೇಲಿ ಹಾಕಬೇಕು. ಅಮೃತ ಮಹಲ್ ಕಾವಲು ಉಳಿಸಿ ಮತ್ತು ತಳಿ ಅಭಿವೃದ್ಧಿ­ಗಾಗಿ ಬೇಕಾದ ಸಿಬ್ಬಂದಿ ಕೂಡಲೇ ನೇಮಿಸಬೇಕು. ಪಶು ಸಂಗೋಪನಾ ಇಲಾಖೆಯಿಂದ ಅಮೃತ ಮಹಲ್ ತಳಿ ಸಂವರ್ಧನ ಕೇಂದ್ರವನ್ನು ವಾಪಸ್ ಪಡೆದು, ಪ್ರತ್ಯೇಕ ಅಮೃತ ಮಹಲ್ ಕಾವಲು ಅಭಿವೃದ್ಧಿ ಪ್ರಾಧಿಕಾರ ರಚಿಸ­ಬೇಕು. ಅಮೃತ ಮಹಲ್ ಕಾವಲು ಭೂಮಿಯನ್ನು ಅನ್ಯ ಉದ್ದೇಶಗಳಿಗೆ ಪರಭಾರೆ ಮಾಡಬಾರದು. ಅಮೃತ ಮಹಲ್ ತಳಿ ಗುಣಮಟ್ಟ ಕಾಯ್ದು­ಕೊಳ್ಳಲು ಮಿಶ್ರ ತಳಿಗೆ ಆಸ್ಪದ ನೀಡದೆ ಗುಣಾತ್ಮಕ ತಳಿ ಅಭಿವೃದ್ಧಿಗೆ ಪ್ರಾಧಾನ್ಯ ನೀಡಬೇಕು. ಅಜ್ಜಂಪುರ ತಳಿ ಸಂವ­ರ್ಧನಾ ಕೇಂದ್ರವನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸಬಾರದೆಂದು ಸಭೆಯಲ್ಲಿ ಆಗ್ರಹಿಸಲಾಯಿತು.ಇದೇ ಸಂದರ್ಭ ಅಜ್ಜಂಪುರ ಅಮೃತ ಮಹಲ್ ಕೇಂದ್ರದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಉಂಟಾಗಿರುವ ಅವ್ಯವಸ್ಥೆ- ಅವಾಂತರ ಸರಿಪಡಿಸಲು ಒತ್ತಾಯಿಸಿ ಪ್ರತಿಭಟನೆ ವ್ಯಕ್ತಪಡಿಸಲಾಯಿತು.ಸಭೆಯಲ್ಲಿ ರವೀಶ್ ಕ್ಯಾತನಬೀಡು,  ಬಿ.ಅಮ್ಜದ್, ಎಂ.ಸಿ.ಶಿವಾನಂದ ಸ್ವಾಮಿ, ಕರಿಯಣ್ಣ, ಮನೋಹರ್, ಗುರುಶಾಂತಪ್ಪ, ಜಾನವಿ, ಪವಿತ್ರ ವೆಂಕಟೇಶ್, ಎಸ್. ಶಿವಾನಂದ್ ಮತ್ತಿತರು ಭಾಗವಹಿಸಿದ್ದರು.ಸಂಚಾಲನ ಸಮಿತಿ: ಅಮೃತ ಮಹಲ್ ಕಾವಲು ಉಳಿಸಿ ಮತ್ತು ತಳಿ ಅಭಿ­ವೃದ್ಧಿಗೆ ಚಳವಳಿ ನಡೆಸಲು ನಿರ್ಧರಿಸಿದ ಸಭೆಯು ಇದಕ್ಕಾಗಿ ರಾಜ್ಯಮಟ್ಟದ ಸಂಚಾಲನ ಸಮಿತಿ ಅಸ್ತಿತ್ವಕ್ಕೆ ತಂದಿದೆ.ಅಜ್ಜಂಪುರದ ಎಸ್.ಶಿವಾನಂದ, ರೈತ ಸಂಘದ ಗುರುಶಾಂತಪ್ಪ, ತಿಪಟೂರಿನ ಮನೋಹರ್, ಚಿತ್ರದುರ್ಗ ಜಿಲ್ಲೆಯ ಕರಿಯಣ್ಣ, ಶಿವಮೊಗ್ಗ ಜಿಲ್ಲೆಯ ಲೋಕಣ್ಣ ಸಮಿತಿಯಲ್ಲಿದ್ದಾರೆ. ಜನದನಿ ಸಂಘಟನೆ ಇದರೊಂದಿಗೆ ಕಾರ್ಯ ನಿರ್ವಹಿಸಲು ತೀರ್ಮಾನಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry