ಶನಿವಾರ, ನವೆಂಬರ್ 23, 2019
23 °C

`ರಾಜ್ಯವನ್ನು ನಂ.1 ಮಾಡುವ ಕನಸು'

Published:
Updated:

ಮೂಡಲಗಿ: `ಅರಬಾವಿ ಕ್ಷೇತ್ರವನ್ನು ರಾಜ್ಯದಲ್ಲೇ  ನಂ.1 ಮಾಡುವ ಕನಸು ನನ್ನದಾಗಿದೆ' ಎಂದು ಅರಬಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಹೇಳಿದರು.ಇಲ್ಲಿಗೆ ಸಮೀಪದ ಖಾನಟ್ಟಿ ಗ್ರಾಮದಲ್ಲಿ ಮತಯಾಚಿಸಿದ ನಂತರ ಮಾತನಾಡಿದ ಅವರು, `ಜಗದೀಶ ಶೆಟ್ಟರ್ ಮತ್ತೆ ಮುಖ್ಯಮಂತ್ರಿಯಾಗಿ ಮಾಡಿ, ಶುದ್ಧ ಆಡಳಿತ ನೀಡಲು ಆಶೀರ್ವಾದ ಮಾಡಬೇಕು' ಎಂದರು.ಜಿ.ಪಂ. ಮಾಜಿ ಸದಸ್ಯ ಶಂಕರಗೌಡ ಪಾಟೀಲ, ಬಸಗೌಡ ಪಾಟೀಲ ನಾಗನೂರ, ತಮ್ಮಣ್ಣ ಪಾರ್ಶಿ, ಬಿ.ಬಿ. ಹಂದಿಗುಂದ, ವಿಠ್ಠಲ ಸವದತ್ತಿ, ಶಂಕರ ಬಿಲಕುಂದಿ, ಅಶೋಕ ನಾಯ್ಕ, ಗೋವಿಂದ ಕೊಪ್ಪದ, ಬಾಲಗೌಡ ಪಾಟೀಲ, ಶಿವನಪ್ಪ ರಡ್ಡೇರಟ್ಟಿ, ಶಿವಪ್ಪ ಜುಟ್ನಟ್ಟಿ, ಶಿವನಪ್ಪ ಗುದಗನ್ನವರ, ಮಲ್ಲಪ್ಪ ಕೌಜಲಗಿ, ಚೇತನ ರಡ್ಡೇರಟ್ಟಿ, ಪರಸಪ್ಪ ಬಂಗಿ, ರಮೇಶ ಮೇತ್ರಿ, ಅಶೋಕ ಪೋತರಾಜ, ಮಾರುತಿ ಸನದಿ, ತುಕಾರಾಮ ವಡೇರ, ದೇವೆಂದ್ರ ಯಳ್ಳೂರ, ಸದಾಶಿವ ಲಂಗೋಟಿ, ರಮಜಾನ್ ಮುಲ್ತಾನಿ, ಶಿವಬಸು ಡೊಂಬರ, ಸಂಗಪ್ಪ ಸೂರಣ್ಣವರ, ಆನಂದರಾವ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)