ಶನಿವಾರ, ಜೂನ್ 19, 2021
21 °C

ರಾಜ್ಯಸಭೆ ಚುನಾವಣೆ: ರೆಹಮಾನ್‌ಖಾನ್ ಕಾಂಗ್ರೆಸ್ ಅಭ್ಯರ್ಥಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ವಿಧಾನಸಭೆಯಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ಈ ತಿಂಗಳ 30ರಂದು ನಡೆಯುವ ಚುನಾವಣೆಗೆ ಕಾಂಗ್ರೆಸ್ ರಾಜ್ಯಸಭೆ ಉಪ ಸಭಾಪತಿ ಕೆ.ರೆಹಮಾನ್ ಖಾನ್ ಹೆಸರನ್ನು ಭಾನುವಾರ  ಸಂಜೆ ಪ್ರಕಟಿಸಿದೆ.ಎಐಸಿಸಿ ಮುಂದೆ ರೆಹಮಾನ್‌ಖಾನ್, ಮಾಜಿ ಸಚಿವರಾದ ಜಾಫರ್ ಷರೀಫ್ ಹಾಗೂ ಸಿ.ಎಂ. ಇಬ್ರಾಹಿಂ ಹೆಸರುಗಳು ಪರಿಶೀಲನೆಯಲ್ಲಿದ್ದವು. ರಾಜ್ಯ ಕಾಂಗ್ರೆಸ್ ಮುಖಂಡರು ಇಬ್ರಾಹಿಂ ಪರ `ಲಾಬಿ~ ಮಾಡಿದ್ದರು. ಆದರೆ, ಈ ಲಾಬಿಗೆ ಹೈಕಮಾಂಡ್ ಮಣೆ ಹಾಕದೆ ಪಕ್ಷಕ್ಕೆ ನಿಷ್ಠರೆನ್ನಲಾದ ಖಾನ್ ಹೆಸರನ್ನು ಅಂತಿಮಗೊಳಿಸಿದೆ. ನಾಳೆ ರೆಹಮಾನ್ ಖಾನ್ ನಾಮಪತ್ರ ಸಲ್ಲಿಸಲಿದ್ದಾರೆ.ರೆಹಮಾನ್ ಖಾನ್ ರಾಜ್ಯಸಭೆಗೆ ಆಯ್ಕೆ ಬಯಸಿರುವುದು ಇದು 4ನೇ ಸಲ. ಮೊದಲ ಸಲ ಆಯ್ಕೆಯಾಗಿದ್ದು 1994ರಲ್ಲಿ. ರಾಜ್ಯಸಭೆಗೆ ಬರುವ ಮೊದಲು ವಿಧಾನ ಪರಿಷತ್ ಸದಸ್ಯ ಮತ್ತು ಸಭಾಪತಿಯಾಗಿ ಅನುಭವ ಪಡೆದಿದ್ದಾರೆ. ಸಂಖ್ಯಾಬಲದ ಆಧಾರದಲ್ಲಿ ಕಾಂಗ್ರೆಸ್ ಒಬ್ಬರನ್ನು ಮಾತ್ರ ಆರಿಸಿ ಕಳುಹಿಸಬಹುದಾಗಿದೆ. ಕಾಂಗ್ರೆಸ್ 71 ಶಾಸಕರ ಬಲ ಹೊಂದಿದ್ದು, ಖಾನ್‌ಗೆ 45 ಮತಗಳು ಬೇಕು. ಹೆಚ್ಚುವರಿಯಾಗಿ ಉಳಿಯಲಿರುವ ಮತಗಳನ್ನು ನಾಲ್ಕನೇ ಅಭ್ಯರ್ಥಿಗೆ ವರ್ಗಾಯಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.