ಸೋಮವಾರ, ಜೂನ್ 21, 2021
23 °C

ರಾಜ್ಯಸಭೆ: ರಾಜ್ಯದಲ್ಲಿ ಅವಿರೋಧವಾಗಿ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಜೆಪಿಯ ಬಸವರಾಜ ಪಾಟೀಲ್ ಸೇಡಂ, ಆರ್.ರಾಮಕೃಷ್ಣ, ಕಾಂಗ್ರೆಸ್‌ನ ಕೆ.ರೆಹಮಾನ್ ಖಾನ್ ಮತ್ತು ಪಕ್ಷೇತರ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಅವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ನಾಮಪತ್ರ ವಾಪಸ್ ಪಡೆಯಲು ಗುರುವಾರ ಮಧ್ಯಾಹ್ನ 3ರವರೆಗೂ ಸಮಯ ಇತ್ತು. ಆ ನಂತರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಯೂ ಆದ ವಿಧಾನಸಭೆ ಕಾರ್ಯದರ್ಶಿ ಪಿ.ಓಂಪ್ರಕಾಶ್ ಅಧಿಕೃತವಾಗಿ ಪ್ರಕಟಿಸಿದರು.ಐದನೇ ಅಭ್ಯರ್ಥಿಯಾಗಿ ಕಣದಲ್ಲಿದ್ದ ಬಿ.ಜೆ.ಪುಟ್ಟಸ್ವಾಮಿ ಬುಧವಾರವೇ ನಾಮಪತ್ರ ಹಿಂದಕ್ಕೆ ಪಡೆದಿದ್ದರು. ಈ ಕಾರಣಕ್ಕೆ ಚುನಾವಣೆ ಇಲ್ಲದೆಯೇ ನಾಲ್ಕು ಮಂದಿಯೂ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.ನಾಲ್ಕು ಮಂದಿಯ ಪೈಕಿ ರೆಹಮಾನ್‌ಖಾನ್ ಮತ್ತು ರಾಜೀವ್ ಚಂದ್ರಶೇಖರ್ ಪುನರಾಯ್ಕೆಯಾಗಿದ್ದಾರೆ. ಖಾನ್ ಅವರು ನಾಲ್ಕನೇ ಬಾರಿಗೆ ಹಾಗೂ ರಾಜೀವ್ ಅವರು 2ನೇ ಅವಧಿಗೆ ರಾಜ್ಯಸಭೆ ಪ್ರವೇಶಿಸುತ್ತಿದ್ದಾರೆ. ಇವರ ಅಧಿಕಾರ ಅವಧಿ ಏಪ್ರಿಲ್ 2ರಿಂದ ಆರು ವರ್ಷಗಳ ಕಾಲ ಇರುತ್ತದೆ.ಆಯ್ಕೆ ಕುರಿತ ಪ್ರಮಾಣ ಪತ್ರ ಸ್ವೀಕರಿಸಿ ಸುದ್ದಿಗಾರರ ಜತೆ ಮಾತನಾಡಿದ ನಿವೃತ್ತ ಐಎಎಸ್ ಅಧಿಕಾರಿಯೂ ಆದ ತಮಿಳುನಾಡು ಮೂಲದ ಆರ್.ರಾಮಕೃಷ್ಣ ಅವರು `ಇನ್ನು ಮುಂದೆ ಕರ್ನಾಟಕ ನನ್ನ ಎರಡನೇ ಮನೆ. ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತೇನೆ~ ಎಂದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.