ರಾಜ್ಯ ಅಥ್ಲೆಟಿಕ್ಸ್: ಪ್ರಜ್ಞಾ ಪ್ರಕಾಶ್ ವೇಗದ ಓಟಗಾರ್ತಿ

7

ರಾಜ್ಯ ಅಥ್ಲೆಟಿಕ್ಸ್: ಪ್ರಜ್ಞಾ ಪ್ರಕಾಶ್ ವೇಗದ ಓಟಗಾರ್ತಿ

Published:
Updated:
ರಾಜ್ಯ ಅಥ್ಲೆಟಿಕ್ಸ್: ಪ್ರಜ್ಞಾ ಪ್ರಕಾಶ್ ವೇಗದ ಓಟಗಾರ್ತಿ

ದಾವಣಗೆರೆ: ಡೆಕಥ್ಲಾನ್ ಸ್ಪರ್ಧೆಯ 20 ವರ್ಷ ವಯೋಮಿತಿಯೊಳಗಿನ ಪುರುಷರ ವಿಭಾಗದಲ್ಲಿ ಅಭಿಷೇಕ್ ಶೆಟ್ಟಿ ನಿರ್ಮಿಸಿದ ಹೊಸ ದಾಖಲೆಯೂ ಸೇರಿದಂತೆ ರಾಜ್ಯ ಅಥ್ಲೆಟಿಕ್ಸ್‌ನಲ್ಲಿ ಎರಡನೇ ದಿನ ಒಟ್ಟು ಎಂಟು ನೂತನ ಕೂಟ ದಾಖಲೆಗಳು ಮೂಡಿ ಬಂದವು.ಜಿಲ್ಲಾ ಅಥ್ಲೆಟಿಕ್ ಸಂಸ್ಥೆ ವತಿಯಿಂದ ಇಲ್ಲಿ ನಡೆಯುತ್ತಿರುವ ಈ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಭಿಷೇಕ್ 6333 ಪಾಯಿಂಟ್ಸ್ ಗಳಿಸುವ ಮೂಲಕ ಹಿಂದೆ ಬೆಂಗಳೂರಿನಲ್ಲಿ ತಾವೇ ಸ್ಥಾಪಿಸಿದ್ದ ದಾಖಲೆಯನ್ನು (6153) ಉತ್ತಮ ಪಡಿಸಿದರು. ಆದರೆ ಇವರು ಈಚೆಗೆ ಪುಣೆಯಲ್ಲಿ ನಡೆದಿದ್ದ ಅಂತರ ವಲಯ ಅಥ್ಲೆಟಿಕ್ಸ್‌ನಲ್ಲಿ ಮಾಡಿದ್ದ ಸಾಧನೆಯ (3358) ಸಮೀಪ ಹೋಗಲೂ ಸಾಧ್ಯವಾಗಲಿಲ್ಲ.

ಮೂಲತಃ ಪುತ್ತೂರಿನ ನೆಲ್ಯಾಡಿಯವರಾದ ಇವರು ಬಿ ಕಾಂ ಅಂತಿಮ ವರ್ಷದ ವಿದ್ಯಾರ್ಥಿ.

18ರ ವಯೋಮಿತಿಯೊಳಗಿನ ಬಾಲಕರ ವಿಭಾಗದ 3,000 ಮೀಟರ್ಸ್ ಓಟದಲ್ಲಿ ಉಜಿರೆಯ ಎಸ್‌ಡಿಎಂ ಕಾಲೇಜಿನ ಪರಸಪ್ಪ ಅವರು  08ನಿ.57ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದಾರೆ. ಇದರಿಂದ ಹಿಂದೆ ಸೂರಜ್ ಎಂಬುವವರು ಸ್ಥಾಪಿಸಿದ್ದ ದಾಖಲೆ (09ನಿ.25.8ಸೆ.) ಅಳಿಸಿ ಹೋಯಿತು. ವಿಜಾಪುರ ಜಿಲ್ಲೆಯ ಬಸವನಬಾಗೇವಾಡಿಯ ಮಟ್ಟಿಹಾಳು ಗ್ರಾಮದ ಪರಸಪ್ಪ ಕಳೆದ ವರ್ಷ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಇದೇ ಕೂಟದಲ್ಲಿ ಚಿನ್ನ ಗೆದ್ದಿದ್ದರು.ಎಸ್‌ಡಿಎಂನ ಇನ್ನೊಬ್ಬ ವಿದ್ಯಾರ್ಥಿ ಗವಿಸ್ವಾಮಿ ಮನೋಹರ ನಾಗಮ್ಮನವರ್ ಹ್ಯಾಮರ್ ಎಸೆತದಲ್ಲಿ (55.47ಮೀ.) ನೂತನ ದಾಖಲೆ ಬರೆದರು. ಇದೇ ಕಾಲೇಜಿನ ಬಿ.ಖಾಸೀಂ ಸಾಬ್ 2009ರಲ್ಲಿ (49.79ಮೀ.) ನಿರ್ಮಿಸಿದ್ದ ದಾಖಲೆಯನ್ನು ಗವಿಸ್ವಾಮಿ ಹಿಂದಿಕ್ಕಿದರು. ವಿಶೇಷವೆಂದರೆ ಇವರಿಬ್ಬರೂ ಕೊಪ್ಪಳ ಜಿಲ್ಲೆಯವರು. ಈ ಸಂದರ್ಭದಲ್ಲಿ ಮಾತನಾಡಿದ ಗವಿಸ್ವಾಮಿ ಮತ್ತು ಪರಸಪ್ಪ ತಮಗೆ ಎಳವೆಯಲ್ಲಿ ತರಬೇತಿ ನೀಡಿದ ಕೋಚ್‌ಗಳಾದ ಕ್ರಮವಾಗಿ ಸಿದ್ದಪ್ಪ ಶಿವನೂರು ಮತ್ತು ಪ್ರಭುಸ್ವಾಮಿ ಹಿರೇಮಠ ಅವರನ್ನು ಕೃತಜ್ಞತೆಯಿಂದ ನೆನಪಿಸಿಕೊಂಡರು.18ರ ವಯೋಮಿತಿಯ ಬಾಲಕರ ವಿಭಾಗದ ಡಿಸ್ಕಸ್ ಎಸೆತದಲ್ಲಿ ಗೌತಮ್ (44.57 ಮೀ.) ಹೊಸ ಕೂಟ ದಾಖಲೆ ಬರೆದರು. ಹಿಂದೆ ಬೆಂಗಳೂರಿನ ಶೀತಲ್ ಕುಮಾರ್ ಹೆಸರಿನಲ್ಲಿ (44.32 ಮೀ) ಈ ದಾಖಲೆಯಿತ್ತು. ಇದೇ ವಯೋಮಾನದ ಶಾಟ್‌ಪಟ್ ಸ್ಪರ್ಧೆಯಲ್ಲಿ ಆಳ್ವಾಸ್‌ನ ಸಾಯಿರಾಜ್ (16.55 ಮೀ) ದಾಖಲೆ ನಿರ್ಮಿಸಿದರು. ಹಿಂದೆ ದಕ್ಷಿಣ ಕನ್ನಡದ ಕೆ.ಎಸ್. ಕಾರ್ತಿಕ್ (15.46 ಮೀ.) ಹೆಸರಿನಲ್ಲಿ ಈ ದಾಖಲೆಯಿತ್ತು. ಸಾಯಿರಾಜ್ ನಿಟ್ಟೆ ಸಮೀಪ ಕೆದಿಂಜೆಯವರು.

110  ಮೀಟರ್ ಹರ್ಡಲ್ಸ್‌ನಲ್ಲಿ ಆಳ್ವಾಸ್‌ನ ಪಿ.ಎಂ. ಮಂಜುನಾಥ್ (14.23 ಸೆ.) ದಾಖಲೆ ಸ್ಥಾಪಿಸಿ 2004ರಲ್ಲಿ ಬೆಂಗಳೂರು ಡಿವೈಎಸ್‌ಎಸ್‌ನ ಅಮಿತ್ ಯಾದವ್(14.4 ಸೆ.)  ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದರು.

20ರ ವಯೋಮಿತಿಯ ಪುರುಷರ ವಿಭಾಗದ ಹೈಜಂಪ್‌ನಲ್ಲಿ ಬೆಂಗಳೂರು ಸ್ಪೋರ್ಟ್ಸ್ ಕ್ಲಬ್‌ನ ಎಸ್. ಹರ್ಷಿತ್ 2.13 ಮೀಟರ್ಸ್ ಜಿಗಿಯುವ ಮೂಲಕ ಬೆಂಗಳೂರಿನ ವೈಎಸ್‌ಸಿ ಸಂಸ್ಥೆಯ ಬಿ. ಚೇತನ್ (2.08 ಮೀ.) ಅವರ ದಾಖಲೆ ಮುರಿದರು.

20ಕ್ಕೆ ಮೇಲ್ಪಟ್ಟವರ ಮುಕ್ತ ವಿಭಾಗದ ಹೈಜಂಪ್‌ನಲ್ಲಿ ಬೆಂಗಳೂರು ವೈಎಸ್‌ಸಿಯ ಬಿ. ಚೇತನ್ ಅವರು (2.15 ಮೀ.)  ತಮ್ಮದೇ ಹೆಸರಿನಲ್ಲಿದ್ದ (2.8 ಮೀ) ದಾಖಲೆ ಅಳಿಸಿ ಹೊಸ ದಾಖಲೆ ನಿರ್ಮಿಸಿದರು.

 ಮೂಡುಬಿದಿರೆಯ ಆಳ್ವಾಸ್ ಈವರೆಗೆ ಒಟ್ಟು 27 ಚಿನ್ನ, 20 ಬೆಳ್ಳಿ ಹಾಗೂ 21 ಕಂಚಿನ ಪದಕ ಗೆದ್ದು ಪದಕ ಗಳಿಕೆಯಲ್ಲಿ ಮುಂಚೂಣಿಯಲ್ಲಿದೆ.

 

ಎರಡನೇ ದಿನದ ಫಲಿತಾಂಶಗಳು ಇಂತಿವೆ: ಪುರುಷರ ವಿಭಾಗ: 20ರ ವಯೋಮಿತಿ: 110 ಮೀ ಹರ್ಡಲ್ಸ್: ಶ್ರೀಕಾಂತ್ ಮಧ್ಯಸ್ಥ (ಆಳ್ವಾಸ್)(ಕಾಲ; 14.92 ಸೆ.)-1, ಸಿ. ಶಿವಕುಮಾರ್ (ಡಿವೈಎಸ್‌ಎಸ್ ಬೆಂಗಳೂರು)-2, ಸಿದ್ಧಾರ್ಥ ಮಗದುಂ (ಎಸ್‌ಎಐ ಧಾರವಾಡ)-3.ಡಿಸ್ಕಸ್ ಎಸೆತ:
ಆರ್.ಎಸ್. ಸುಧೀರ್ (ಆಳ್ವಾಸ್) ( ದೂರ; 44 ಮೀ)-1, ಎಸ್. ನಂದೀಶ್ ಕುಮಾರ್ ( ಮೈಸೂರು) -2, ಕೆಂಚಪ್ಪ (ಆಳ್ವಾಸ್)-3.

4್ಡ100 ಮೀ ರಿಲೆ: ಎಸ್‌ಎಐ, ಧಾರವಾಡ (ಕಾಲ; 45.3 ಸೆ.)-1, ಯಂಗ್‌ಸ್ಟರ್ ಸ್ಪೋರ್ಟ್ಸ್ ಕ್ಲಬ್-2, ಆಳ್ವಾಸ್-3.18ರ ವಯೋಮಿತಿ: 1500 ಮೀ. ಓಟ: ಸಚಿನ್ ಗೌಡ ವಿ. ಪಾಟೀಲ್ (ಡಿವೈಎಸ್‌ಎಸ್, ಬೆಂಗಳೂರು) (ಕಾಲ: 4ನಿ.18.3 ಸೆ)-1, ಪರಸಪ್ಪ ಎಂ. ಹಲಿಜೋಳ (ಎಸ್‌ಡಿಎಂ, ಉಜಿರೆ)-2, ಸಿ. ನವೀನ್ ಗೌಡ( ಆಳ್ವಾಸ್)-3

110 ಮೀ. ಹರ್ಡಲ್ಸ್: ಪಿ.ಎಂ. ಮಂಜುನಾಥ್ (ಆಳ್ವಾಸ್) (ಕಾಲ; 14.24 ಸೆ)-1, ಫಕೀರಪ್ಪ ವಿ. ಬಿ (ಎಸ್.ಎ.ಐ., ಧಾರವಾಡ)-216ರ ವಯೋಮಿತಿ: ಜಾವೆಲಿನ್ ಎಸೆತ: ಧೀರಜ್ (ಆಳ್ವಾಸ್) ( ದೂರ; 45.82 ಮೀ)-1 ಆರ್.ಪಿ. ಶರತ್‌ಬಾಬು (ದಾವಣಗೆರೆ)-2, ಎನ್.ಎಚ್. ಶ್ರೀಕಾಂತ್ (ಹಾವೇರಿ)-3  100 ಮೀ ಹರ್ಡಲ್ಸ್: ಪಿ.ಎಸ್. ಶ್ರೀಶೈಲ (ಕೂಡಿಗೆ. ಕಾಲ; 14.8 ಸೆ.)-1, ಪ್ರತೀಕ್ ಎಸ್. ಮರಗಿ ( ಧಾರವಾಡ)-2, ಬಿ. ನಾಗೇಶ್ (ಕಬ್ಬಳಗೆರಿ)-3ಮಹಿಳೆಯರ ವಿಭಾಗ:  100 ಮೀ. ಓಟ: 20ರ ವಯೋಮಿತಿ: ಪ್ರಜ್ಞಾ ಎಸ್. ಪ್ರಕಾಶ್ (ಇಂಡೋ ಜರ್ಮನ್ ಕ್ಲಬ್, ಬೆಂಗಳೂರು) (ಕಾಲ; 15.4 ಸೆ.)-1, ಪಿ.ಬಿ. ಸುಮಿತ್ರಾ (ಡಿವೈಎಸ್‌ಎಸ್ ಮೈಸೂರು) -2, ನಯನ ಪಿ. ಜಾದ್ಬಾರ್ (ಬಿಜಾಪುರ) -3.400 ಮೀ: ರೀನಾ ಜಾರ್ಜ್ (ಡಿವೈಎಸ್‌ಎಸ್ ಮೈಸೂರು). (ಕಾಲ; 58.5 ಸೆ.)-1, ಎಂ. ಅರ್ಪಿತಾ (ಡಿವೈಎಸ್‌ಎಸ್ ಮೈಸೂರು) -2,  ಕೆ.ಆರ್. ಮೇಘನಾ (ಮೈಸೂರು) -3

1500 ಮೀ: ಶ್ರದ್ಧಾರಾಣಿ ದೇಸಾಯಿ (ಡಿವೈಎಸ್‌ಎಸ್ ಮೈಸೂರು). (ಕಾಲ; 5.03.7 ಸೆ.) -1, ಫರೀನ್ ಎಚ್. ಶೇಖ್ (ಎಸ್‌ಟಿಎಸ್ ಬೆಳಗಾವಿ) -2, ಬಿ.ಕೆ. ಸುಪ್ರೀತಾ (ಆಳ್ವಾಸ್) -34ಷ100 ಮೀ. ರಿಲೇ: ಡಿವೈಎಸ್‌ಎಸ್, ಮೈಸೂರು. (ಕಾಲ; 49.84 ಸೆ.) -1, ಎಸ್‌ಡಿಎಂ, ಉಜಿರೆ-2

18ರ ವಯೋಮಿತಿ:  100 ಮೀ. ಹರ್ಡಲ್ಸ್‌ಮೇಘನಾ ಶೆಟ್ಟಿ (ಇಂಡೋ ಜರ್ಮನ್ ಕ್ಲಬ್. ಬೆಂಗಳೂರು) (ಕಾಲ; 14.8 ಸೆ)-1, ಜಿ. ಪ್ರೆಯಾಲೆಸ್ (ಡಿವೈಎಸ್‌ಎಸ್, ಮೈಸೂರು)-2, ಸಿಮೋನಾ (ಮೈಸೂರು)-3ಡಿಸ್ಕಸ್ ಎಸೆತ: ಪ್ರಿಯಾಂಕಾ (ಆಳ್ವಾಸ್) (ದೂರ; 32.62 ಮೀ) -1, ಕೆ. ಕಾವ್ಯಾ (ಶಿವಮೊಗ್ಗ), ಪುಷ್ಪಾ -3.

ಡಿಸ್ಕಸ್ ಎಸೆತ: ಮುಕ್ತ ವಿಭಾಗ: ಎಸ್. ಸುಷ್ಮಾ (ಮೈಸೂರು) (ದೂರ; 36.95 ಮೀ)-1, ಕೆ. ಕಾವ್ಯಾ (ಶಿವಮೊಗ್ಗ)-2, ಬಿ.ಟಿ. ಪ್ರಿಯಾಂಕಾ (ಆಳ್ವಾಸ್) -3.16ರ ವಯೋಮಿತಿ100 ಮೀ ಹರ್ಡಲ್ಸ್: ಐಶ್ವರ್ಯಾ ಹಲಗಲಿ (ಎಸ್‌ಎಐ, ಧಾರವಾಡ) (ಕಾಲ; 16.49 ಸೆ.) -1, ಸಿ.ಬಿ. ಮಹಿಮಾ -2,  ಪುಷ್ಪಾಂಜಲಿ (ಎಸ್‌ಎಐ, ಧಾರವಾಡ)-3

18ರ ವಯೋಮಿತಿ 1500 ಮೀ ಓಟ: ಕೆ. ಅನುಷಾ (ಆಳ್ವಾಸ್),(ಕಾಲ; 5ನಿ.18.6 ಸೆ)-1, ಎ. ಶ್ರೇಯಾ (ಆಳ್ವಾಸ್) -2, ಎ.ಎ. ಲಿಖಿತಾ (ಆಳ್ವಾಸ್)- 3ಡಿಸ್ಕಸ್ ಎಸೆತ: ನವ್ಯಾ ಶೆಟ್ಟಿ (ಕೊಡಗು) (ಕಾಲ; 35.60ಮೀ.)-1, ಕೆ.ಯು. ಲಿಖಿತಾ (ಆಳ್ವಾಸ್)-2, ಪ್ರಿಯಾಂಕಾ (ದಕ್ಷಿಣ ಕನ್ನಡ) -3  14ರ ವಯೋಮಿತಿ ಷಾಟ್‌ಪಟ್: ಖ್ಯಾತಿ ಅಚ್ಯುತ ( ಉಡುಪಿ) ( ದೂರ; 9.42 ಮೀ.)-1, ರಾಹತ್ ನಝೀರುದ್ದೀನ್ ಸಯೀದ್ (ಕಾರವಾರ) -2, ಐಶ್ವರ್ಯಾ ಪಿ. ( ಶಿವಮೊಗ್ಗ)-3.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry