ರಾಜ್ಯ ಎ ಡಿವಿಷನ್ ವಾಲಿಬಾಲ್:ರೈಲ್ವೆಗೆ ಮಣಿದ ಪೊಲೀಸ್ ತಂಡ

7

ರಾಜ್ಯ ಎ ಡಿವಿಷನ್ ವಾಲಿಬಾಲ್:ರೈಲ್ವೆಗೆ ಮಣಿದ ಪೊಲೀಸ್ ತಂಡ

Published:
Updated:
ರಾಜ್ಯ ಎ ಡಿವಿಷನ್ ವಾಲಿಬಾಲ್:ರೈಲ್ವೆಗೆ ಮಣಿದ ಪೊಲೀಸ್ ತಂಡ

ಬೆಂಗಳೂರು: ಸದರ್ನ್ ವೆಸ್ಟರ್ನ್ ರೈಲ್ವೆ (ಎಸ್‌ಡಬ್ಲ್ಯುಆರ್) ತಂಡ ಕರ್ನಾಟಕ ರಾಜ್ಯ ವಾಲಿಬಾಲ್ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯ `ಎ~ ಡಿವಿಷನ್ ವಾಲಿಬಾಲ್ ಚಾಂಪಿಯನ್‌ಷಿಪ್‌ನ ಮಂಗಳವಾರದ ಪಂದ್ಯದಲ್ಲಿ ಗೆಲುವು ಸಾಧಿಸಿತು.ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಸ್‌ಡಬ್ಲ್ಯುಆರ್ 3-1 ಸೆಟ್‌ಗಳಿಂದ (25-18, 24-26, 25-23, 25-19) ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್‌ಪಿ) ತಂಡವನ್ನು ಸೋಲಿಸಿತು.

95 ನಿಮಿಷ ನಡೆದ ಹೋರಾಟದಲ್ಲಿ ಕ್ರಿಸ್ಟಿ ಹಾಗೂ ಇಮ್ತಿಯಾಜ್ ಅಹಮದ್ ಉತ್ತಮ ಪ್ರದರ್ಶನ ನೀಡಿ ರೈಲ್ವೆ ತಂಡದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದರು.ಪೊಲೀಸ್ ತಂಡದ ನಾಗೇಶ್ ಕೆಲ ಪಾಯಿಂಟ್ಸ್ ಕಲೆ ಹಾಕಿ ಗಮನ ಸೆಳೆದರಾದರೂ, ತಂಡವನ್ನು ಗೆಲುವಿನ ಹಾದಿಯಲ್ಲಿ ಕೊಂಡೊಯ್ಯಲು ಸಾಧ್ಯವಾಗಲಿಲ್ಲ.ದಿನದ ಇನ್ನೊಂದು ಪಂದ್ಯದಲ್ಲಿ ಐಟಿಐ 3-0ರಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ತಂಡವನ್ನು ಮಣಿಸಿತು. ಅಲ್ಪ ಪ್ರತಿರೋಧ ಎದುರಿಸಿದ ಐಟಿಐ 25-18, 25-21, 25-18ರಲ್ಲಿ ಮೂರೂ ಸೆಟ್‌ಗಳಲ್ಲಿ ಗೆಲುವು ದಾಖಲಿಸಿತು. ವಿಜಯಿ ತಂಡದ ಪ್ರದೀಪ್ ಮತ್ತು ರವೀಂದ್ರ ಅವರ ಉತ್ತಮ ಆಟವಾಡಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry