ರಾಜ್ಯ ಎ ಡಿವಿಷನ್ ವಾಲಿಬಾಲ್ ಚಾಂಪಿಯನ್‌ಷಿಪ್:ಎಎಸ್‌ಸಿಗೆ ಮಣಿದ ಎಂಇಜಿ

7

ರಾಜ್ಯ ಎ ಡಿವಿಷನ್ ವಾಲಿಬಾಲ್ ಚಾಂಪಿಯನ್‌ಷಿಪ್:ಎಎಸ್‌ಸಿಗೆ ಮಣಿದ ಎಂಇಜಿ

Published:
Updated:
ರಾಜ್ಯ ಎ ಡಿವಿಷನ್ ವಾಲಿಬಾಲ್ ಚಾಂಪಿಯನ್‌ಷಿಪ್:ಎಎಸ್‌ಸಿಗೆ ಮಣಿದ ಎಂಇಜಿ

ಬೆಂಗಳೂರು: ಪ್ರಬಲ ಪೈಪೋಟಿ ಎದುರಾದರೂ, ಸಮರ್ಥ ಹೋರಾಟ ತೋರಿದ ಎಎಸ್‌ಸಿ ತಂಡದವರು ಕರ್ನಾಟಕ ರಾಜ್ಯ ವಾಲಿಬಾಲ್ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ 19ನೇ ರಾಜ್ಯ `ಎ~ ಡಿವಿಷನ್ ವಾಲಿಬಾಲ್ ಚಾಂಪಿಯನ್‌ಷಿಪ್‌ನ ಶುಕ್ರವಾರದ ಪಂದ್ಯದಲ್ಲಿ ಗೆಲುವು ಸಾಧಿಸಿತು.ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಎಸ್‌ಸಿ 3-2 ಸೆಟ್‌ಗಳಲ್ಲಿ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ (ಎಂಇಜಿ) ಎದುರು ಜಯ ಪಡೆಯಿತು. ಮೊದಲ ಸೆಟ್‌ನಲ್ಲಿ 29-27ರಲ್ಲಿ ಮುನ್ನಡೆ ಸಾಧಿಸಿದ ಎಎಸ್‌ಸಿ ಎರಡನೇ ಸೆಟ್‌ನಲ್ಲಿ 22-25ರಲ್ಲಿ ಮತ್ತು ಮೂರನೇ ಸೆಟ್‌ನಲ್ಲಿ 15-25ರಲ್ಲಿ ನಿರಾಸೆ ಕಂಡು ಸೋಲಿನ ಭೀತಿ ಎದುರಿಸಿತ್ತು.ಈ ವೇಳೆ ಚುರುಕಿನ ಆಟವಾಡಿದ ವಿಜಯಿ ತಂಡದ ಸುಧೀರ್ ಮತ್ತು ಸಣೇಶ್ ಅವರು ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದರು. ಈ ಪರಿಣಾಮ ಎಎಸ್‌ಸಿ ಮುಂದಿನ ಎರಡೂ ಸೆಟ್‌ಗಳಲ್ಲಿ 25-19, 15-11ರಲ್ಲಿ ಗೆಲುವು ಸಾಧಿಸಿತು.ಎಂಇಜಿಯ ಮಾರ್ಟಿನ್ ಜಾನ್ ಮತ್ತು ಬಿಪಿನ್ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದರಾದರೂ, ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry