ಶನಿವಾರ, ಮೇ 15, 2021
25 °C

ರಾಜ್ಯ ಕುಸ್ತಿ ತಂಡಕ್ಕೆ ಆಯ್ಕೆ ಟ್ರಯಲ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉತ್ತರ ಪ್ರದೇಶದ ಗೊಂಡಾದ ನಂದಿನಿ ನಗರದಲ್ಲಿ ಅಕ್ಟೋಬರ್ 13 ರಿಂದ 16ರ ವರೆಗೆ ನಡೆಯುವ 56ನೇ ರಾಷ್ಟ್ರೀಯ ಸೀನಿಯರ್ ಪುರುಷರ ವಿಭಾಗದ (ಫ್ರೀಸ್ಟೈಲ್ ಹಾಗೂ ಗ್ರೀಕೊ ರೋಮನ್), 14ನೇ ರಾಷ್ಟ್ರೀಯ ಮಹಿಳಾ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವ ಕರ್ನಾಟಕ ತಂಡಗಳಿಗೆ ಸ್ಪರ್ಧಿಗಳನ್ನು ಆಯ್ಕೆ ಮಾಡಲು ಮೈಸೂರಿನಲ್ಲಿ ಅಕ್ಟೋಬರ್ 1 ರಿಂದ 3ರ ವರೆಗೆ ನಡೆಯುವ ದಸರಾ ಕ್ರೀಡಾ ಕೂಟದ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಆಯ್ಕೆ ಟ್ರಯಲ್ಸ್ ನಡೆಯಲಿದೆ.ಟ್ರಯಲ್ಸ್‌ನಲ್ಲಿ ಭಾಗವಹಿಸಲಿಚ್ಛಿಸುವವರು ಹೆಚ್ಚಿನ ವಿವರಗಳಿಗೆ ಕಾರ್ಯದರ್ಶಿ, ಕರ್ನಾಟಕ ಕುಸ್ತಿ ಸಂಸ್ಥೆ,  ನಂಬರ್ 3, ಕಂಠೀರವ ಒಳಾಂಗಣ  ಕ್ರೀಡಾಂಗಣ,  ಕಸ್ತೂರು ಬಾ ರಸ್ತೆ, ಬೆಂಗಳೂರು-560001 (ದೂರವಾಣಿ ಸಂಖ್ಯೆ: 080-22267389/ 25225846/ಮೊಬೈಲ್ ನಂಬರ್: 9448373863) ಇಲ್ಲಿ ಸಂಪರ್ಕಿಸಲು ಕೋರಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.