ಶನಿವಾರ, ಜೂನ್ 19, 2021
26 °C

ರಾಜ್ಯ ಖಜಾನೆ ಬರಿದು: ಪರಮೇಶ್ವರ್ ವ್ಯಂಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತರೀಕೆರೆ: ಕನಸಲ್ಲೂ ಕಾಣದ ಮುಖ್ಯಮಂತ್ರಿ ಗದ್ದುಗೆಯನ್ನು ಏರಿರುವ ಮುಖ್ಯಮಂತ್ರಿ ಸದಾನಂದಗೌಡರ ಕುರ್ಚಿ ಸದಾ ಅಲ್ಲಾಡುತ್ತಿದ್ದು, ಯಾವ ಸಮಯದಲ್ಲಿ ಬೀಳುತ್ತದೆ ಎಂದು ಅವರು ಆತಂಕಗೊಂಡಿದ್ದಾರೆ ಎಂದು ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಡಾ.ಪರಮೇಶ್ವರ್ ಹೇಳಿದರು.ಇಲ್ಲಿನ ಬಯಲು ರಂಗಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ಬಹಿರಂಗ ಚುನಾವಣಾ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಯಾದ ಮೇಲೆ ತಾವು ಪ್ರತಿನಿಧಿಸಿದ್ದ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಿರುವ ಸದಾನಂದಗೌಡರು ಹುಲಿ ಸಂರಕ್ಷಣಾ ಯೋಜನೆ ಮೂಲಕ ಜನರಲ್ಲಿ ಆತಂಕ ಮೂಡಲು ಕಾರಣವಾಗಿದ್ದಾರೆ.ಜನತೆಯ ಋಣ ತಿರಿಸಲಿಕ್ಕಾದರು ಮುಖ್ಯಮಂತ್ರಿ ಹುಲಿಯೋಜನೆ ಹಿಂದಕ್ಕೆ ಪಡೆಯಲಿ ಎಂದರು.

ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಯಡಿಯೂರಪ್ಪ ತಾವೇ ಬಜೆಟ್ ಮಂಡಿಸಬೇಕೆಂದು ಹಠ ಹಿಡಿದಿರುವ ಕಾರಣಈ ಬಾರಿ ರಾಜ್ಯದ ಬಿಜೆಪಿ ಸರ್ಕಾರ ಬಜೆಟ್ ಮಂಡಿಸದೆ ಪಥನವಾಗಲಿದೆ ಎಂದರು.ರಾಜ್ಯದ ಖಜಾನೆ ಬರಿದಾಗಿದ್ದು, ವಿಧವಾ, ವೃದ್ಯಾಪ್ಯ, ಅಂಗವಿಕಲ ವೇತನ ಸೇರಿದಂತೆ ಯಾವುದೇ  ಮಾಸಾಶನವನ್ನು ಕಳೆದ ಒಂದು ವರ್ಷದಿಂದ ರಾಜ್ಯ ಸರ್ಕಾರ ನೀಡಿಲ್ಲವೆಂದು ದೂರಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ರೆಡ್ಡಿ ಇನ್ನಿತರೆ ಗಣಿ ಹಗರಣದಲ್ಲಿರುವ ರೂ. 1ಲಕ್ಷ ಕೋಟಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದರು.ಮಾಜಿ ಸಂಸದ ಎಂ.ವಿ.ರಾಜಶೇಖರ್, ಮಂಜುನಾಥ್ ಕುನ್ನೂರ್, ಮಾಜಿ ಸಚಿವರಾದ ಎಚ್.ವಿಶ್ವನಾಥ್, ಮಹದೇವ ಪ್ರಸಾದ್, ಜಲಜಾಕ್ಷಿ ನಾಯ್ಕ, ಮಾಜಿ ಶಾಸಕರಾದ ಚಂದ್ರಶೇಖರಪ್ಪ, ಎಸ್.ಎಂ.ನಾಗರಾಜ್, ನೀಲಕಂಠಪ್ಪ, ಟಿ.ಎಚ್.ಶಿವಶಂಕರಪ್ಪ, ಮುಖಂಡರಾದ ಎಚ್.ಓಂಕಾರಪ್ಪ, ದೋರನಾಳ್ ಪರಮೇಶ್, ಕೆ.ಆರ್.ದ್ರುವಕುಮಾರ್, ಅಬ್ದುಲ್ ಘನಿ ಅನ್ವರ್, ಆರ್.ಮಂಜುನಾಥ್, ಗೋಪಿನಾಥ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.