ರಾಜ್ಯ ಜೂನಿಯರ್ ಬ್ಯಾಸ್ಕೆಟ್‌ಬಾಲ್: ಸ್ಪೋರ್ಟ್ಸ್ ಹಾಸ್ಟೆಲ್‌ಗೆ ಪ್ರಶಸ್ತಿ

ಶುಕ್ರವಾರ, ಜೂಲೈ 19, 2019
29 °C

ರಾಜ್ಯ ಜೂನಿಯರ್ ಬ್ಯಾಸ್ಕೆಟ್‌ಬಾಲ್: ಸ್ಪೋರ್ಟ್ಸ್ ಹಾಸ್ಟೆಲ್‌ಗೆ ಪ್ರಶಸ್ತಿ

Published:
Updated:

ಬೆಂಗಳೂರು: ನವನೀತ (20 ಪಾಯಿಂಟ್) ಅವರ ಪ್ರಭಾವಶಾಲಿ ಆಟದ ನೆರವಿನಿಂದ ಸ್ಪೋರ್ಟ್ಸ್ ಹಾಸ್ಟೆಲ್ ಮೈಸೂರು ತಂಡದವರು ಕರ್ನಾಟಕ ರಾಜ್ಯ ಬ್ಯಾಸ್ಕೆಟ್‌ಬಾಲ್ ಸಂಸ್ಥೆ ಆಶ್ರಯದಲ್ಲಿ ನಡೆದ ರಾಜ್ಯ ಜೂನಿಯರ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್ 18 ವರ್ಷದೊಳಗಿನವರ ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ಮುಕ್ತಾಯಗೊಂಡ ಚಾಂಪಿಯನ್‌ಷಿಪ್‌ನ ಬಾಲಕಿಯರ ವಿಭಾಗದ ಫೈನಲ್ ಪಂದ್ಯದಲ್ಲಿ ಸ್ಪೋರ್ಟ್ಸ್ ಹಾಸ್ಟೆಲ್ ತಂಡ 43-22ಪಾಯಿಂಟ್‌ಗಳಿಂದ ಬೆಂಗಳೂರಿನ ಜೆಎಸ್‌ಸಿ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿ ಕೊಂಡಿತು.ವಿರಾಮಕ್ಕೆ ಮೊದಲು 24- 11ಪಾಯಿಂಟ್‌ಗಳ ಮುನ್ನಡೆಯಲ್ಲಿದ ವಿಜಯಿ ತಂಡ ವಿರಾಮದ ನಂತರ ಚುರುಕಿನ ಆಟವಾಡಿತು. ನವನೀತ 21 ಪಾಯಿಂಟ್ ಹಾಗೂ ಮಾಧುರಿ 16 ಪಾಯಿಂಟ್ ಕಲೆ ಹಾಕಿ ಸ್ಪೋರ್ಟ್ಸ್ ಹಾಸ್ಟೆಲ್ ತಂಡಕ್ಕೆ ಭಾರಿ ಅಂತರದ ಗೆಲುವು ತಂದು ಕೊಟ್ಟರು.ಇದೇ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದಲ್ಲಿ  ಬೀಗಲ್ಸ್ ತಂಡ ಪ್ರಶಸ್ತಿ ಗೆದ್ದುಕೊಂಡಿತು. ಬೀಗಲ್ಸ್ 52-50 ಪಾಯಿಂಟ್‌ಗಳಿಂದ ಜೆಎಸ್‌ಸಿ ತಂಡ ವನ್ನು ರೋಚಕವಾಗಿ ಮಣಿಸಿತು. ಬೀಗಲ್ಸ್ ತಂಡದ ಯಶಸ್ ಹಾಗೂ ಶಶಾಂಕ್ ಅವರು ತಲಾ 12 ಪಾಯಿಂಟ್ ಕಲೆ ಹಾಕಿ ಗೆಲುವಿಗೆ ಕಾರಣರಾದರು. ಜೆಎಸ್‌ಸಿ ತಂಡದ ಕೈಫ್ 22 ಪಾಯಿಂಟ್ ಗಳಿಸಿ ಉತ್ತಮ ಪ್ರದರ್ಶನ ತೋರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry