ರಾಜ್ಯ ಬಂದ್‌ಗೆ ಬೆಂಬಲ

7

ರಾಜ್ಯ ಬಂದ್‌ಗೆ ಬೆಂಬಲ

Published:
Updated:

ಬೆಂಗಳೂರು : `ಕಾವೇರಿ ನದಿ ನೀರಿನ ಹೋರಾಟಕ್ಕೆ ಸಂಬಂಧಿಸಿದಂತೆ ಕನ್ನಡಪರ ಸಂಘಟನೆಗಳು (ಅ.6) ಶನಿವಾರ ಕರ್ನಾಟಕ ಬಂದ್‌ಗೆ ಸಂಘವು ಸಂಪೂರ್ಣವಾದ ಬೆಂಬಲವನ್ನು ನೀಡಲಾಗುವುದು~ ಎಂದು ಅಖಿಲ ಕರ್ನಾಟಕ ಎಚ್.ಡಿ.ಕುಮಾರಸ್ವಾಮಿ ಅಭಿಮಾನಿಗಳ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಲವಕುಮಾರ್ ತಿಳಿಸಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, `ರಾಜ್ಯ ಬಿಜೆಪಿ ಸರ್ಕಾರ ಕಾವೇರಿ ನದಿ ಪ್ರಾಧಿಕಾರಕ್ಕೆ ಸರಿಯಾದ ಮಾಹಿತಿ ನೀಡುವಲ್ಲಿ ವಿಫಲವಾಗಿದೆ. ಇದರಿಂದ ನಾಡಿನ ಬೆಳೆಗಳಿಗೆ ಮತ್ತು ಕುಡಿಯುವ ನೀರಿಗೆ ಮುಂದಿನ ದಿನಗಳಲ್ಲಿ ಭೀಕರ ಪರಿಸ್ಥಿತಿ ಎದುರಿಸುವುದು ಅನಿವಾರ್ಯವಾಗುತ್ತದೆ. ಇದು  ರಾಜ್ಯದ ಜನತೆಗೆ ಆಗಿರುವ ದ್ರೋಹ~ ಎಂದರು.ಸಂಘದ ಅಧ್ಯಕ್ಷ ಎಂ.ಬಿ.ನಾಗೇಶ್‌ಸಂಘದ ಗೌರವ ಅಧ್ಯಕ್ಷ ರೇಣುಕುಮಾರ್, ಉಪಾಧ್ಯಕ್ಷ ರಘುನಾಥ್ ರೈ ಕುಂಬ್ರ, ಸಂಘಟನಾ ಕಾರ್ಯದರ್ಶಿ ವಿ.ಮಣಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry