ಸೋಮವಾರ, ಜೂನ್ 14, 2021
22 °C

ರಾಜ್ಯ ಬಜೆಟ್: ಮಿಶ್ರ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ರಾಜ್ಯ ಬಜೆಟ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜೆಡಿಎಸ್, ಕಾಂಗ್ರೆಸ್ ಪಕ್ಷಗಳು ಇದು ಚುನಾವಣಾ `ಚುನಾವಣಾ ಬಜೆಟ್~ ಎಂದು ತರಾಟೆಗೆ ತೆಗೆದುಕೊಂಡಿದ್ದರೆ; ಬಿಜೆಪಿ ಜನಪರ ಬಜೆಟ್ ಎಂದು ಬಣ್ಣಿಸಿದೆ. ಅಸಂಖ್ಯ ಪುಸ್ತಕಗಳ ಸಂಗ್ರಹದ ಮೂಲಕ ಸಾಹಿತ್ಯ ಸೇವೆ ಮಾಡುತ್ತಿರುವ ಅಂಕೇಗೌಡರು, ಬಜೆಟ್‌ನಲ್ಲಿ ಪುಸ್ತಕ ಮನೆ ಅಭಿವೃದ್ಧಿಗೂ ಒತ್ತು ನೀಡಿರುವುದಕ್ಕೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ.ಜನಪರ ಬಜೆಟ್-ಬಿಜೆಪಿ: ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಪಿ.ಮಹೇಶ್ ಅವರು, ಇದು ನಿಜಕ್ಕೂ ಜನಪರ ಬಜೆಟ್. ಜನಸಾಮಾನ್ಯರ ಪ್ರಗತಿಯನ್ನು ದೃಷ್ಟಿಯಲ್ಲಿ ಇರಿಸಿ ಕೊಂಡಿದ್ದಾಗಿದೆ. ಜಿಲ್ಲೆಗೆ ಸ್ವಲ್ಪ ಮಟ್ಟಿಗೆ ನಿರಾಸೆ ಯಾಗಿದೆ ಎಂಬುದು ಇದ್ದರೂ ಪೂರಕ ಬಜೆಟ್‌ನಲ್ಲಿ ಆ ಕೊರತೆಯನ್ನು ನೀಗಿಸುವ ವಿಶ್ವಾಸವಿದೆ ಎಂದು ಪ್ರತಿಕ್ರಿಯಿಸಿದ್ದಾರೆ.ಹಿಂದೆ ಕೊಟ್ಟಿದ್ದೂ ಹೇಗೆ ವೆಚ್ಚವಾಯಿತು?: ಜೆಡಿಎಸ್‌ನ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್ ಅವರು,  ಮಂಡ್ಯ ಮೈಷುಗರ್‌ಗೆ ಈ ಬಾರಿ ರೂ. 30 ಕೋಟಿ ನೀಡಿದ್ದಾರೆ. ಪ್ರತಿ ವರ್ಷ ಕೊಡುತ್ತಲೇ ಇದ್ದಾರೆ. ಆದರೆ, ಈವರೆಗೂ ಕೊಟ್ಟಿದ್ದು ಏನಾಯಿತು ಎಂಬುದರ ಮಾಹಿತಿ ಮಾತ್ರ ಸಿಗುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.ಉಳಿದಂತೆ, ಯಡಿಯೂರಪ್ಪ ಅವರಿಗಿಂಥ ಸದಾನಂದಗೌಡರು ಭಿನ್ನರೇನೂ ಅಲ್ಲ. ಅವರು ಮಠಗಳಿಗೆ ಹಣ ನೀಡಿದರೆ, ಇವರು ಜಾತಿಗಳಿಗೆ ನೀಡಿದ್ದಾರೆ. ಒಟ್ಟಾರೆ, ಮುಂದಿನ ಚುನಾವಣೆಯನ್ನು ಸಮಗ್ರವಾಗಿ ದೃಷ್ಟಿಯಲ್ಲಿ ಇರಿಸಿಕೊಂಡು ಈ ಬಜೆಟ್ ರೂಪಿಸಲಾಗಿದೆ ಎಂದು ಟೀಕಿಸಿದರು.ಅಂಕಿ ಅಂಶಗಳಿಂದ ಕೂಡಿದ ಬಜೆಟ್:    ಕಾಂಗ್ರೆಸ್‌ನ ಪ್ರತಿಕ್ರಿಯೆಯೂ ಇದಕ್ಕಿಂತಲೂ ಭಿನ್ನವಾಗೇನೂ ಇಲ್ಲ. `ಶ್ರೀಸಾಮಾನ್ಯನ ಅಭಿವೃದ್ಧಿಗೆ ಪೂರಕವಲ್ಲದ, ಕೇವಲ ಅಂಕಿ-ಅಂಶಗಳಿಂದ ಕೂಡಿರುವ ಬಜೆಟ್ ಇದಾಗಿದೆ~ ಎಂದು ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಆತ್ಮಾನಂದ ತರಾಟೆಗೆ ತೆಗೆದುಕೊಂಡರು.`ಕಳೆದ ಬಾರಿ ಮಂಡಿಸಿದ ಕೃಷಿ ಬಜೆಟ್ ಯಾವುದೇ ಫಲ ನೀಡಿಲ್ಲ. ಈ ಬಜೆಟ್ ಕೂಡಾ ಅದೇ ಹಾದಿ ಯಲ್ಲಿರುವ ಸೂಚನೆ ಇದೆ. ಮಹಿಳಾ ಸಬಲೀಕರಣ, ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಪ್ರಗತಿ ಹೀಗೆ ಯಾವುದೇ ರೀತಿಯಲ್ಲಿಯೂ ಅಭಿವೃದ್ಧಿಯ ಸೂಚನೆಗಳು ಕಾಣುತ್ತಿಲ್ಲ. ಕೇವಲ ಚುನಾವಣೆ ದೃಷ್ಟಿಯಿಂದ ಮಾಡಿದ ಬಜೆಟ್ ಆಗಿದೆ~ ಎಂದರು.ಶಾಶ್ವತ ಪರಿಹಾರ ಬೇಕು: ರೈತ ಸಂಘದ ಅಧ್ಯಕ್ಷ ಕೋಣಸಾಲೆ ನರಸರಾಜು ಅವರು, ಮೈಷುಗರ್ ಕಾರ್ಖಾನೆಗೆ 30 ಕೋಟಿ ನೀಡಿರುವುದು ಸಂತೋಷ ದಾಯಕ ಎನ್ನಿಸಿದರೂ ಹೀಗೆ ಅಲ್ಪ ಮೊತ್ತದಿಂದ ಕಾರ್ಖಾನೆಗೆ ಯಾವುದೇ ಶಾಶ್ವತ ಪರಿಹಾರ ಸಿಗುವುದಿಲ್ಲ ಎಂದು ಪ್ರತಿಕ್ರಿಯಿಸಿದರು.ಸರ್ಕಾರಕ್ಕೆ ಕಾರ್ಖಾನೆ ಉಳಿಸುವ ಆಸಕ್ತಿ ಇದ್ದರೆ, ಶಾಶ್ವತ ಪರಿಹಾರ ಕಾರ್ಯಗಳನ್ನು ಪ್ರಕಟಿಸಬೇಕು ಎಂದು ಅಭಿಪ್ರಾಯಪಟ್ಟರು.ಸಮಾಧಾನ ಆಗಿದೆ, ಇನ್ನಷ್ಟು ನೆರವು ಸಿಗಲಿದೆ: ಮೈಷುಗರ್ ಅಧ್ಯಕ್ಷ ನಾಗರಾಜಪ್ಪ ಅವರು, ಪೂರಕ ಬಜೆಟ್‌ನಲ್ಲಿ ಮೈಷುಗರ್‌ಗೆ ಇನ್ನಷ್ಟು ನೆರವು ಸಿಗುವ ವಿಶ್ವಾಸವಿದೆ ಎಂದು ಅಭಿಪ್ರಾಯಪಟ್ಟರು. ಕಾರ್ಖಾನೆಗೆ 114 ಕೋಟಿ ನೆರವು ನೀಡಬೇಕು ಎಂಬ ಪ್ರಸ್ತಾಪ ಇಡ ಲಾಗಿತ್ತು. 30 ಕೋಟಿ ಕೊಟ್ಟಿದ್ದಾರೆ. ಒಟ್ಟಾರೆ, ಕಾರ್ಖಾನೆಗೆ ಬಿಜೆಪಿ ಸರ್ಕಾರ ನೀಡಿದಷ್ಟು ಹಿಂದಿನ ಯಾವುದೇ ಸರ್ಕಾರ ನೀಡಿಲ್ಲ ಎಂಬುದನ್ನು ಗಮನಿಸ ಬೇಕು ಎಂದು ಸಮರ್ಥಿಸಿಕೊಂಡರು.ಪರಿಶ್ರಮಕ್ಕೆ ದೊರೆತ ಗೌರವ: `ಸಂಬಳದಿಂದಲೇ ಪುಸ್ತಕ ಖರೀದಿಸಿದ ಸಂಗ್ರಹ ಮಾಡುತ್ತಿದ್ದೆ. ಈಗ ಸರ್ಕಾರ ಕೂಡಾ ನೆರವು ಪ್ರಕಟಿಸಿದೆ. ಇದು, ನನ್ನ 35 ವರ್ಷಗಳು ಪಟ್ಟ ಪರಿಶ್ರಮಕ್ಕೆ ಸಂದ ಗೌರವ ಎಂದೇ ಭಾವಿಸುತ್ತೇನೆ~ಇಲ್ಲಿನ `ಪುಸ್ತಕ ಮನೆ~ಯ ರೂವಾರಿ, ಅಂಕೇಗೌಡ ಜ್ಞಾನ ಪ್ರತಿಷ್ಠಾನದ ಮೂಲಕ ಲಕ್ಷಾಂತರ ಪುಸ್ತಕ ಸಂಗ್ರಹಿಸಿರುವ ಎಂ.ಅಂಕೇಗೌಡ ಅವರ ಪ್ರತಿಕ್ರಿಯೆ ಇದು. ರಾಜ್ಯ ಬಜೆಟ್‌ನಲ್ಲಿ ಪುಸ್ತಕ ಮನೆ ಅಭಿವೃದ್ಧಿಗೆ 50 ಲಕ್ಷ ರೂಪಾಯಿ ನೆರವು ಪ್ರಕಟಿಸಿದೆ.`ಸಂಬಳದಿಂದ ಪುಸ್ತಕಗಳನ್ನು ಕೊಂಡುಕೊಳ್ಳುವ ಹವ್ಯಾಸ ಇದ್ದು, ಸುಮಾರು 2ಲಕ್ಷಕ್ಕೂ ಅಧಿಕ ಪುಸ್ತಕಗಳು, 75 ರಾಷ್ಟ್ರಗಳ ನಾಣ್ಯಗಳು, ಕರೆನ್ಸಿಗಳನ್ನು ಹಾಗೂ ದೇಶ ವಿದೇಶಗಳ ಸುಮಾರು 10 ಸಾವಿರಕ್ಕೂ ಹೆಚ್ಚು ಸ್ಟಾಂಪ್ ಸಂಗ್ರಹಿಸಿದ್ದೇನೆ. ಆ ಶ್ರಮಕ್ಕೆ ಈಗ ಗೌರವ ದೊರೆತಿದೆ ಎಂದರು.`ಹರಿಖೋಡೆಯವರು ಪುಸ್ತಕದ ಮನೆ ಕಟ್ಟಿಸಿ ಕೊಟ್ಟು ಸಹಾಯ ಮಾಡಿದ್ದಾರೆ. ಈಗಿನ ನೆರವು ಗ್ರಾಮಾಂತರ ಪ್ರದೇಶಗಳ ಜನರಿಗೆ ಅನುಕೂಲ ವಾಗುವಂತೆ ಜ್ಞಾನದ ಅರಿವು ಮೂಡಿಸುವ ಕೆಲಸ ಮಾಡಲು ಉತ್ತೇಜನ ಸಿಕ್ಕಿದೆ ಎಂದು ಪ್ರತಿಕ್ರಿಯಿಸಿದರು.ಸಾಲ ಮನ್ನಾಕ್ಕೆ ಸ್ವಾಗತ: ಬಿಜೆಪಿ ಎಸ್‌ಸಿವಿಭಾಗದ ಅಧ್ಯಕ್ಷ ಪುಟ್ಟ ಅಂಕಯ್ಯ ಅವರು, ಅಂಬೇ ಡ್ಕರ್ ಅಭಿವೃದ್ಧಿ ನಿಗಮದ ಮೂಲಕ ಪಡೆದ ಸಾಲ ಮನ್ನಾ ಮಾಡಿರುವುದು ಸ್ವಾಗತಾರ್ಹ. ಇದು, ನಮ್ಮ ಹಲವು ವರ್ಷಗಳ ಹೋರಾಟವೂ ಆಗಿತ್ತು ಎಂದರು.ಮಂಡ್ಯ ಯುವ ಪರಿಷತ್‌ನ ಅಧ್ಯಕ್ಷ ಕೆಂಪರಾಜು, `ಈ ಬಜೆಟ್‌ನಲ್ಲಿ ಯುವಜನರಿಗೆ ಪ್ರೋತ್ಸಾಹದಾಯಕ ಕಾರ್ಯಕ್ರಮಗಳಿಲ್ಲ. ಒಟ್ಟಾರೆ, ಸರ್ಕಾರ ಯುವಜನ ರನ್ನೇ ಮರೆತಂತಿದೆ~ ಎಂದು ಬೇಸರ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.