ಶುಕ್ರವಾರ, ಜೂನ್ 18, 2021
20 °C

ರಾಜ್ಯ ಬಜೆಟ್ 2012-13 ಯಾರು ಯಾರಿಗೆ ಎಷ್ಟೆಷ್ಟು ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿಂದುಳಿದ ವರ್ಗಗಳ ಸಮುದಾಯಗಳಾದ ಕಮ್ಮಾರ, ಸವಿತಾ ಸಮಾಜ, ಗಾಣಿಗ, ಮಡಿವಾಳ, ನೇಕಾರ, ಕುಂಬಾರ, ಬಡಗಿ, ವಿಶ್ವಕರ್ಮ, ದರ್ಜಿ, ಕುರುಬ, ಉಪ್ಪಾರ, ಬಲಿಜ (ಕೈವಾರ ತಾತಯ್ಯ ಕ್ಷೇತ್ರ), ದೇವಾಂಗ, ವಹ್ನಿಕುಲ, ವೇಮನ(ರೆಡ್ಡಿ) ಸಂಸ್ಥಾನ, ಆರ್ಯ ಈಡಿಗ, ರಾಜು ಕ್ಷತ್ರಿಯ, ಮರಾಠ ಕ್ಷತ್ರಿಯ, ತೊಗಟವೀರ, ಪದ್ಮಸಾಲಿ, ಗಂಗಾಮತಸ್ಥರು, ಕುಂಚಿಟಿಗ, ಹೆಳವ, ಯಾದವ (ಗೊಲ್ಲ) ಸಮುದಾಯಗಳ ವಿಶೇಷ ಅಭಿವೃದ್ಧಿ ಹಾಗೂ ಗುರುಪೀಠಗಳ ಶೈಕ್ಷಣಿಕ ಮೂಲಭೂತ ಸೌಕರ್ಯಕ್ಕಾಗಿ ಬಜೆಟ್‌ನಲ್ಲಿ ರೂ. 75 ಕೋಟಿ ಅನುದಾನ ಒದಗಿಸಲಾಗಿದೆ.ಅಲ್ಲದೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗಾಗಿ ಚಲವಾದಿ, ಆದಿಜಾಂಬವ, ಮಹರ್ಷಿ ವಾಲ್ಮೀಕಿ, ಮಾದಾರ ಚೆನ್ನಯ್ಯ, ಸಿದ್ಧರಾಮೇಶ್ವರ ಸ್ವಾಮಿ ಭೋವಿ, ಕೇತೇಶ್ವರ ಮೇದಾರ ಇತ್ಯಾದಿ ಸಮುದಾಯಗಳ ಕ್ಷೇಮಾಭಿವೃದ್ಧಿ ಮತ್ತು ಗುರುಪೀಠಗಳ ಶೈಕ್ಷಣಿಕ ಮೂಲಸೌಕರ್ಯಕ್ಕಾಗಿ 20 ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ.

ಯಾರು ಯಾರಿಗೆ ಎಷ್ಟೆಷ್ಟು ?

-ಬಾಳೆಹೊನ್ನೂರಿನ ರಂಭಾಪುರಿ ಪೀಠದ ಮೂಲ ಸ್ಥಳದಲ್ಲಿ ಜೀರ್ಣೋದ್ಧಾರ ಮತ್ತು ಅಭಿವೃದ್ಧಿ ಕಾಮಗಾರಿಗೆ ರೂ. 2 ಕೋಟಿ-ಮೈಸೂರಿನಲ್ಲಿ ಶೃಂಗೇರಿಯ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನದ ಸಂದೇಶ ಭವನ ನಿರ್ಮಾಣಕ್ಕೆ ರೂ. 2 ಕೋಟಿ-ಕುಂಬಾರ ಭವನ ನಿರ್ಮಾಣಕ್ಕೆ ರೂ. 1 ಕೋಟಿ-ಭಾವಸಾರ ಕ್ಷತ್ರಿಯ ಸಮಾಜಕ್ಕೆ ಅಂಬಾಭವಾನಿ ಭವನ ಹಾಗೂ ಶಿವಾಜಿ ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣಕ್ಕೆ 2 ಕೋಟಿ-ಗಂಗಾಮತಸ್ಥರ ನಿಜ ಶರಣರ ಅಂಬಿಗರ ಚೌಡಯ್ಯ ಸ್ಮಾರಕ ಐಕ್ಯ ಸ್ಥಳ (ಹಾವೇರಿ ಜಿಲ್ಲೆ) ಅಭಿವೃದ್ಧಿಗಾಗಿ 1 ಕೋಟಿ-ವಿಶ್ವಕರ್ಮ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ 1 ಕೋಟಿ-ವಿಶ್ವ ಗಾಣಿಗರ ಸಮುದಾಯ ಟ್ರಸ್ಟ್‌ನ ಸಮುದಾಯ ಭವನ ಮತ್ತು ವಿದ್ಯಾರ್ಥಿನಿಲಯಕ್ಕೆ 1 ಕೋಟಿ-ಬಲಿಜ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ 1 ಕೋಟಿ-ಹಿಂದುಳಿದ ವರ್ಗಗಳ ಒಕ್ಕೂಟದ ದಶಮಾನೋತ್ಸವ ಆಚರಣೆಗೆ50 ಲಕ್ಷ-ಕಾಗಿನೆಲೆ ಗ್ರಾಮದ ದೊಡ್ಡ ಕೆರೆ ಅಭಿವೃದ್ಧಿ, ದೈವೀವನ, ಸಂಪರ್ಕ ರಸ್ತೆ ಹಾಗೂ ಬೆಂಗಳೂರಿನಲ್ಲಿ ಕನಕ

ಸ್ಮಾರಕ ಭವನ ನಿರ್ಮಾಣ ಮತ್ತು ಅಭಿವೃದ್ಧಿಗಾಗಿ ಕಾಗಿನೆಲೆ ಪ್ರಾಧಿಕಾರಕ್ಕೆ 2 ಕೋಟಿ-ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ, ಶಿವಮೊಗ್ಗ ನಗರದ ಸಂಗೊಳ್ಳಿ ರಾಯಣ್ಣ ಬಡಾವಣೆಯಲ್ಲಿ ಕನಕ ಭವನ ನಿರ್ಮಾಣ, ಶಿಕಾರಿಪುರದಲ್ಲಿ ಸಂಚಾರಿ ಕುರಿಗಾರ, ಮಕ್ಕಳ ವಸತಿ ನಿಲಯ ಕಟ್ಟಡ ನಿರ್ಮಾಣ, ರಾಣೆಬೆನ್ನೂರು ತಾಲ್ಲೂಕಿನಲ್ಲಿ ಕನಕ ಭವನ ನಿರ್ಮಾಣ, ಜಮಖಂಡಿಯಲ್ಲಿ ಕಾಗಿನೆಲೆ ಜಮಖಂಡಿ ಕನಕ ಸಮುದಾಯ ಭವನ ನಿರ್ಮಾಣಕ್ಕೆ 6 ಕೋಟಿ-ಹರಿಹರ ತಾಲ್ಲೂಕಿನ ಹಿರೇಹೊಸಳ್ಳಿಯ ಹೇಮ-ವೇಮಾ ಸದ್ಭಾವನಾ ವಿದ್ಯಾಪೀಠದ ಸಮಗ್ರ ಅಭಿವೃದ್ಧಿಗೆ 2 ಕೋಟಿ-ಗುಲ್ಬರ್ಗ ಜಿಲ್ಲೆ ಜೇವರ್ಗಿಯ ಜಗದ್ಗುರು ಮರುಳಶಂಕರ ದೇವರ ಗುರುಪೀಠದ ಸಮಗ್ರ ಅಭಿವೃದ್ಧಿಗೆ 1 ಕೋಟಿ-ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನಕ ಅಧ್ಯಯನ ಪೀಠ ಸ್ಥಾಪನೆಗೆ 1 ಕೋಟಿ-ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಸಿದ್ಧಾರೂಢ ಸ್ವಾಮಿ ಟ್ರಸ್ಟ್‌ನ ಅಭಿವೃದ್ಧಿಗೆ 1 ಕೋಟಿ-ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಶಿವಶರಣರ ಹಡಪದ ಅಪ್ಪಣ್ಣ, ಶಿವಶರಣರ ಹಡಪದ ಲಿಂಗಮ್ಮ ತಾಯಿ ಅಧ್ಯಯನ ಪೀಠ ಸ್ಥಾಪನೆಗೆ 1 ಕೋಟಿ-ಹೊಸದುರ್ಗದ ಪುರುಷೋತ್ತಮಾನಂದಪುರ ಉಪ್ಪಾರ ಸಮಾಜದ ಪೀಠದ ಸಮಗ್ರ ಅಭಿವೃದ್ಧಿಗೆ 1 ಕೋಟಿ-ಬೆಂಗಳೂರಿನ ಭಗೀರಥ ಸಮಾಜ ಮಹಾಸಂಸ್ಥಾನ ಮಠದ ಸಮಗ್ರ ಅಭಿವೃದ್ಧಿಗೆ 1 ಕೋಟಿ-ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಕೋಳಾಲದ ಅನ್ನಪೂರ್ಣೇಶ್ವರಿ ದೇವಾಲಯದ ಅಭಿವೃದ್ಧಿ ಸೇವಾ ಟ್ರಸ್ಟ್‌ಗೆ ಸಮುದಾಯ ಭವನ, ನಿತ್ಯ ಅನ್ನದಾಸೋಹ, ಅನಾಥಾಶ್ರಮ ಹಾಗೂ ಗೋ ಶಾಲೆ ನಿರ್ಮಾಣಕ್ಕೆ ರೂ. 25 ಲಕ್ಷ-ನೆಲಮಂಗಲ ತಾಲ್ಲೂಕು ಶಿವಗಂಗೆಯ ಮಹಾಲಕ್ಷ್ಮಿ ತಿಗಳ ಮಹಾಸಂಸ್ಥಾನ ಟ್ರಸ್ಟ್‌ಗೆ ರೂ. 1 ಕೋಟಿ-ರಾಜ್ಯ ತಿಗಳ ಸಮಾಜ ಹೂವು, ಹಣ್ಣು ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ 1 ಕೋಟಿ-ಬೆಂಗಳೂರಿನ ಮಹಾಲಕ್ಷ್ಮೀಪುರದ ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದ ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣಕ್ಕೆ 50 ಲಕ್ಷ-ಬೆಂಗಳೂರಿನ ಸೋಮವಂಶ ಆರ್ಯ ಕ್ಷತ್ರಿಯ ಸೇವಾ ಸಮಾಜದ ವಿದ್ಯಾರ್ಥಿನಿಲಯ ಕಟ್ಟಡಕ್ಕೆ 25 ಲಕ್ಷ-ಬೆಂಗಳೂರಿನ ಸಂಪಂಗಿರಾಮನಗರದ ತೊಗಟವೀರ ಕ್ಷತ್ರಿಯ ಸಂಘದ ಸಮಗ್ರ ಅಭಿವೃದ್ಧಿಗೆ 50 ಲಕ್ಷ-ಮಾಗಡಿ ತಾಲ್ಲೂಕಿನ ಸೋಲೂರಿನ ಕರ್ನಾಟಕ ಪ್ರದೇಶ ಆರ್ಯ ಈಡಿಗ ಮಹಾ ಸಂಸ್ಥಾನದ ಅಭಿವೃದ್ಧಿಗೆ 1 ಕೋಟಿ-ಬೆಂಗಳೂರಿನ ಕರ್ನಾಟಕ ರಾಜ್ಯ ಮಡಿವಾಳ ಸಂಘಕ್ಕೆ ದೋಬಿಘಾಟ್ ಸಮಗ್ರ ಅಭಿವೃದ್ಧಿಗೆ 50 ಲಕ್ಷ-ಬೆಂಗಳೂರಿನ ಕರ್ನಾಟಕ ರಾಜ್ಯ ಸವಿತಾ ಸಮಾಜದ ಸಮಗ್ರ ಅಭಿವೃದ್ಧಿಗೆ 1 ಕೋಟಿ-ಬೆಂಗಳೂರಿನ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ಗೆ ಶೈಕ್ಷಣಿಕ ಸಂಸ್ಥೆಗಳ ಸಮಗ್ರ ಅಭಿವೃದ್ಧಿಗೆ50 ಲಕ್ಷ-ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಹುಟ್ಟೂರಾದ ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿಯ ಸಮಗ್ರ ಅಭಿವೃದ್ಧಿ ಹಾಗೂ ಹೊಂಗನೂರಿನಲ್ಲಿ ವಿಜಯನಗರದ ಅರಸು ಸಮುದಾಯ ಮಂಟಪ ಕಾಮಗಾರಿ ಪೂರ್ಣಗೊಳಿಸಲು1 ಕೋಟಿ-ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವಕ್ಕಾಗಿ 1 ಕೋಟಿ-ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯ ಕೃಷ್ಣ ಯಾದವ ಬಣ ಮಹಾಸಂಸ್ಥಾನಕ್ಕೆ 1 ಕೋಟಿ-ಬೆಂಗಳೂರಿನ ಗವೀಪುರಂ ಗೋಸಾಯಿ ಮಹಾಸಂಸ್ಥಾನದ ಸಮಗ್ರ ಅಭಿವೃದ್ಧಿಗೆ 1 ಕೋಟಿ-ಹಿರಿಯೂರು ತಾಲ್ಲೂಕಿನ ಕೋಡಿಹಳ್ಳಿಯ ಬಸವ ಭಾವೈಕ್ಯತಾ ಕೇಂದ್ರ (ಪರಿಶಿಷ್ಟ ಜಾತಿ)ಕ್ಕೆ25 ಲಕ್ಷ-ಹೊಸದುರ್ಗದ ಜಗದ್ಗುರು ಅಖಿಲ ಕುಂಚಿಟಿಗ ಮಹಾಸಂಸ್ಥಾನದ ಸಮಗ್ರ ಅಭಿವೃದ್ಧಿಗೆ 50 ಲಕ್ಷ-ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಬಿ. ಕೋಡಿಹಳ್ಳಿಯ ಹೆಳವ ಸಮಾಜ ಗುರುಪೀಠದ ಬಸವ ಬೃಂಗೇಶ್ವರ ಮಹಾಮಠಕ್ಕೆ 1 ಕೋಟಿ-ಚಿತ್ರದುರ್ಗದ ಮಾಚಿದೇವ ಮಹಾಸಂಸ್ಥಾನದ ಮಡಿವಾಳ ಮಾಚಿದೇವ ಸ್ಮಾರಕ ಭವನ ನಿರ್ಮಾಣಕ್ಕೆ 1 ಕೋಟಿ-ಹಂಪಿ ದೇವಾಂಗ ಸಮಾಜದ ಜಗದ್ಗುರು ದಯಾನಂದಪುರಿ ಸ್ವಾಮೀಜಿ ಅವರ ಗಾಯಿತ್ರಿ ಪೀಠದ ಸಮಗ್ರ ಅಭಿವೃದ್ಧಿಗೆ 1 ಕೋಟಿ-ಬೆಂಗಳೂರಿನ ಕೆಂಗೇರಿಯ ಭಗವತ್ ರಾಮಾನುಜ ಟ್ರಸ್ಟ್‌ಗೆ ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣ ಹಾಗೂ ಅಭಿವೃದ್ಧಿಗೆ 1 ಕೋಟಿ-ಉಡುಪಿ ಜಿಲ್ಲೆಯ ಕುಡುಬಿ ಸಮಾಜದ ಸಮುದಾಯ ಭವನಕ್ಕೆ 1 ಕೋಟಿ-ಕೊಂಕಣ ಖಾರ್ವಿ ಸಮಾಜ ಸಮುದಾಯ ಭವನಕ್ಕೆ 1 ಕೋಟಿ-ತುಮಕೂರಿನಲ್ಲಿ ಕುಂಚಿಟಿಗರ ಸಮುದಾಯ ಭವನ ನಿರ್ಮಾಣಕ್ಕೆ 1 ಕೋಟಿ
 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.