ಬುಧವಾರ, ಮೇ 25, 2022
23 °C

ರಾಜ್ಯ ಬ್ಯಾಡ್ಮಿಂಟನ್ ಟೂರ್ನಿ: ಯಶ್ ಪಾಟೀಲ್, ರಿಚಾಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಳಗಾವಿಯ ಯಶ್ ಪಾಟೀಲ್ ಹಾಗೂ ರಿಲಾಯನ್ಸ್‌ನ ರಿಚಾ ಮುಕ್ತಿಬೋಧ ಅವರು ಇಲ್ಲಿ ನಡೆದ ಯೊನೆಕ್ಸ್ ಸನ್ ರೈಸ್ ರಾಜ್ಯ ಬ್ಯಾಡ್ಮಿಂಟನ್ ಟೂರ್ನಿಯ 10 ವರ್ಷದೊಳಗಿನವರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ದೇವನಹಳ್ಳಿ ಕ್ಲಬ್‌ನಲ್ಲಿ ಸೋಮವಾರ ನಡೆದ ಬಾಲಕರ ವಿಭಾಗದ ಫೈನಲ್‌ನಲ್ಲಿ ಯಶ್ ಪಾಟೀಲ್ 21-23, 25-23, 21-11ರಲ್ಲಿ ಬಿಸಿಐನ ಶಿವದೀಪ್ ಜಯಂತ್ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡರು.

ಬಾಲಕಿಯರ ವಿಭಾಗದ ಅಂತಿಮ ಪಂದ್ಯದಲ್ಲಿ ರಿಚಾ 9-21, 21-19, 21-5ರಲ್ಲಿ ಬೆಂಗಳೂರಿನ ಆದಿಯಾ ವಾರಿಯತ್ ಎದುರು ಗೆಲುವು ಪಡೆದರು.

ಇದಕ್ಕೂ ಮುನ್ನ ನಡೆದ ಬಾಲಕರ ವಿಭಾಗದ ಸೆಮಿಫೈನಲ್ ಪಂದ್ಯಗಳಲ್ಲಿ ಯಶ್ 21-17, 21-12ರಲ್ಲಿ ಸಿ.ಎಸ್ ಸಾಕೇತ್ ಮೇಲೂ, ಶಿವದೀಪ್ 19-21, 21-16, 21-11ರಲ್ಲಿ ಬೆಳಗಾವಿಯ ಅಜಿಂಕ್ಯ ಜೋಶಿ ವಿರುದ್ಧವೂ ಜಯ ಪಡೆದು ಫೈನಲ್ ಪ್ರವೇಶಿಸಿದ್ದರು.

ಬಾಲಕಿಯರ ವಿಭಾಗದಲ್ಲಿ ರಿಚಾ 21-19, 21-7ರಲ್ಲಿ ಅದ್ವಿಕಾ ಗಣೇಶ್ ಮೇಲೂ, ಆದಿಯಾ 21-15, 21-5ರಲ್ಲಿ ಕೀರ್ತನಾ ವಿರುದ್ಧವೂ ವಿಜಯ ಪಡೆದರು.

ಶಿವದೀಪ್-ಯಶ್ ಚಾಂಪಿಯನ್: ಇದೇ ಟೂರ್ನಿಯ ಬಾಲಕರ ವಿಭಾಗದ ಡಬಲ್ಸ್‌ನಲ್ಲಿ ಶಿವದೀಪ್ ಹಾಗೂ ಯಶ್ ಪಾಟೀಲ್ ಚಾಂಪಿಯನ್ ಆದರು. ಫೈನಲ್ ಪಂದ್ಯದಲ್ಲಿ ಈ ಜೋಡಿ 21-17, 21-13ರಲ್ಲಿ ಸಿ.ಎಸ್. ಸಕೇತ್ ಹಾಗೂ ಸಿ.ಜಿ. ತೇಜಸ್ ಅವರನ್ನು ಮಣಿಸಿ ಪ್ರಶಸ್ತಿ ಪಡೆಯಿತು. ಕೀರ್ತನಾ ಹಾಗೂ ರಿಚಾ ಅವರು ಬಾಲಕಿಯರ ವಿಭಾಗದ ಡಬಲ್ಸ್‌ನಲ್ಲಿ 21-10, 21-8ರಲ್ಲಿ ಅದ್ವಿಕಾ ಗಣೇಶ್-ಅನುಷ್ಕಾ ಗಣೇಶ್ ಜೋಡಿಯನ್ನು ಪರಾಭವಗೊಳಿಸಿ ಪ್ರಶಸ್ತಿಯನ್ನು ಗೆದ್ದುಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.