ಗುರುವಾರ , ಜೂನ್ 24, 2021
28 °C

ರಾಜ್ಯ ಮಟ್ಟದ ಚುಟುಕು ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಉದಯೋನ್ಮುಖ ಬರಹಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಕೈಗಾದ ಸಹ್ಯಾದ್ರಿ ಕನ್ನಡ ಸಂಘವು ರಾಜ್ಯ ಮಟ್ಟದ ಸ್ವರಚಿತ ಕನ್ನಡ ಚುಟುಕು ಸ್ಪರ್ಧೆ ಆಯೋಜಿಸಿದೆ.ಗರಿಷ್ಠ ನಾಲ್ಕು ಸಾಲಿನ ಚುಟುಕುಗಳಲ್ಲಿ ಅತ್ಯುತ್ತಮವಾದುದನ್ನು ಆರಿಸಿ ಬಹುಮಾನ ನೀಡಲಾಗುತ್ತದೆ. ಸ್ಪರ್ಧೆಗೆ ಕಳುಹಿಸುವ ಚುಟುಕುಗಳು ಸ್ವರಚಿತವಾಗಿರಬೇಕು ಮತ್ತು ಈವರೆಗೆ ಯಾವುದೇ ಪತ್ರಿಕೆಗಳಲ್ಲಿ ಪ್ರಕಟವಾಗಿರಬಾರದು.ಪ್ರಥಮ ಬಹುಮಾನ ರೂ 3000, ದ್ವಿತೀಯ ಬಹುಮಾನ ರೂ 2000 ಮತ್ತು ತೃತೀಯ ಬಹುಮಾನ ರೂ 1000. ಒಬ್ಬರು ನಾಲ್ಕು ಚುಟುಕುಗಳನ್ನು ಮಾತ್ರ ಕಳುಹಿಸಬಹುದು. ಚುಟುಕುಗಳನ್ನು ಸ್ವವಿಳಾಸದ ಲಕೋಟೆಯಲ್ಲಿಟ್ಟು ಸಹ್ಯಾದ್ರಿ ಕನ್ನಡ ಸಂಘ, ಕೈಗಾ ವಸತಿ ಸಂಕೀರ್ಣ ಮಲ್ಲಾಪುರ, ಕಾರವಾರ, ಉತ್ತರ ಕನ್ನಡ ಜಿಲ್ಲೆ- 581400 ವಿಳಾಸಕ್ಕೆ ಕಳುಹಿಸಬೇಕು ಎಂದು ಸಂಘದ ಕಾರ್ಯದರ್ಶಿ ಸುನಿಲ್ ಬಾರ್ಕೂರ ಮನವಿ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.