ರಾಜ್ಯ ಮಟ್ಟದ ಸೈಕ್ಲಿಂಗ್: ಬಾಗಲಕೋಟೆ ಸೈಕ್ಲಿಸ್ಟ್‌ಗಳ ಮೇಲುಗೈ

7

ರಾಜ್ಯ ಮಟ್ಟದ ಸೈಕ್ಲಿಂಗ್: ಬಾಗಲಕೋಟೆ ಸೈಕ್ಲಿಸ್ಟ್‌ಗಳ ಮೇಲುಗೈ

Published:
Updated:

ಜಮಖಂಡಿ: ಬಾಗಲಕೋಟೆ ಜಿಲ್ಲೆಯ ಸೈಕ್ಲಿಸ್ಟ್‌ಗಳು ರಾಜ್ಯೋತ್ಸವದ ಅಂಗವಾಗಿ ಸ್ಥಳೀಯ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ಪುರುಷರ ಮತ್ತು ಮಹಿಳೆಯರ ರಾಜ್ಯ ಮಟ್ಟದ ರೋಡ್ ರೇಸ್ ಸೈಕ್ಲಿಂಗ್‌ನಲ್ಲಿ  ಮೇಲುಗೈ ಸಾಧಿಸಿದರು.ಪುರುಷರ ವಿಭಾಗದಲ್ಲಿ ಜಮಖಂಡಿಯಿಂದ ಬಬಲೇಶ್ವರ ತಲುಪಿ ಮರಳಿ ಬರುವ 80 ಕಿ.ಮೀ.ರೋಡ್ ರೇಸ್‌ನ ಮಾಸ್ಡ್ ಸ್ಟಾರ್ಟ್ ಚಾಂಪಿಯನ್‌ಷಿಪ್‌ನಲ್ಲಿ ಸ್ಥಳೀಯ ಸೈಕ್ಲಿಸ್ಟ್ ಬಸಪ್ಪ ಕಡಪಟ್ಟಿ 33 ಮಂದಿಯನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಗಿಟ್ಟಿಸಿದರು. ಮಹಿಳೆಯರ ವಿಭಾಗದಲ್ಲಿ ಜಮಖಂಡಿಯಿಂದ ಕವಟಗಿ ಕ್ರಾಸ್ ವರೆಗೆ ತೆರಳಿ ಮರಳಿ ಬರುವ 40 ಕಿ.ಮೀ. ರೋಡ್ ರೇಸ್ ಮಾಸ್ಡ್ ಸ್ಟಾರ್ಟ್ ಸ್ಪರ್ಧೆಯಲ್ಲಿ ಬಾಗಲಕೋಟೆಯ ಶೈಲಾ ಮಟ್ಯಾಳ ಮೊದಲಿಗರಾಗಿ ಗುರಿ ತಲುಪಿದರು.ಫಲಿತಾಂಶಗಳು: ಪುರುಷರ ವಿಭಾಗ: ಬಸಪ್ಪ ಕಡಪಟ್ಟಿ (ಜಮಖಂಡಿ)-1, ಸಿದ್ದು ಕುರಣಿ (ಕುಂಬಾರಹಳ್ಳ)-2, ಸಚಿನ್ ಪವಾರ (ವಿಜಾಪುರ)-3, ಪೈಗಂಬರ್ ನದಾಫ (ವಿಜಾಪುರ)-4, ಯೋಗೇಶ್ವರ ಗಡ್ಡಿ (ಕೋಲಾರ)-5, ಮಂಜುನಾಥ ಬೆಳ್ಳುಬ್ಬಿ (ಕೋಲಾರ)-6. ಮಹಿಳೆಯರ ವಿಭಾಗ: ಶೈಲಾ ಮಟ್ಯಾಳ (ಬಾಗಲಕೋಟೆ)-1, ಪ್ರಿಯಾಂಕಾ ದೇಸಾಯಿ (ಬಾಗಲಕೋಟೆ)-2, ಗೀತಾಂಜಲಿ (ಬಾಗಲಕೋಟೆ)-3, ಸಾಯಿರಾ ಬಾನು ಲೋದಿ (ವಿಜಾಪುರ)-4, ಮೇಘಾ ಗೂಗವಾಡ (ವಿಜಾಪುರ)-5, ಭಾಗ್ಯ ಮಸೂತಿ (ಬಾಗಲಕೋಟೆ)-6.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry