ರಾಜ್ಯ ಮಟ್ಟದ ಸೈಕ್ಲಿಂಗ್: ಸದಾಶಿವ, ಸಿದ್ದಪ್ಪ, ಫರಿಯಾಲಾ ಪ್ರಥಮ

7

ರಾಜ್ಯ ಮಟ್ಟದ ಸೈಕ್ಲಿಂಗ್: ಸದಾಶಿವ, ಸಿದ್ದಪ್ಪ, ಫರಿಯಾಲಾ ಪ್ರಥಮ

Published:
Updated:

ಜಮಖಂಡಿ: ರಾಜ್ಯ ಅಮೆಚ್ಯೂರ್ ಸೈಕ್ಲಿಂಗ್ ಸಂಸ್ಥೆ ಹಾಗೂ ಬಾಗಲಕೋಟೆ ಜಿಲ್ಲಾ ಸೈಕ್ಲಿಂಗ್ ಸಂಸ್ಥೆಯ ಆಶ್ರಯದಲ್ಲಿ ತಾಲ್ಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ಶನಿವಾರ ಆರಂಭವಾದ 7ನೇ ರಾಜ್ಯ ಮಟ್ಟದ ಮೌಂಟೆನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನ 17 ವರ್ಷದೊಳಗಿನ ಬಾಲಕರ 2 ಲ್ಯಾಪ್ಸ್ ಮಾಸ್ಡ್ ಸ್ಟಾರ್ಟ್ ಸ್ಪರ್ಧೆಯಲ್ಲಿ ವಿಜಾಪುರ ಕ್ರೀಡಾ ನಿಲಯದ ಸೈಕ್ಲಿಸ್ಟ್ ಸದಾಶಿವ ನಾಟಿಕರ ಕೂದಲೆಳೆ ಅಂತರದಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿದರು.ವಿಜಾಪುರ ಕ್ರೀಡಾ ನಿಲಯದ ಮಾಳಪ್ಪ ಮೂರ್ತನ್ನವರ ಅವರನ್ನು ಕೊನೆಯ ಕ್ಷಣದಲ್ಲಿ ಹಿಂದೆ ಸರಿಸಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡರು. ಈ ಸ್ಪರ್ಧೆಯ ಮೊದಲ ಐದು ಸ್ಥಾನಗಳನ್ನು ವಿಜಾಪುರ ಕ್ರೀಡಾ ನಿಲಯದ ಸೈಕ್ಲಿಸ್ಟ್‌ಗಳೇ ಪಡೆದಿರುವುದು ಕೂಡ ವಿಶೇಷವೆನಿಸಿತು.ಪುರುಷರ 1 ಲ್ಯಾಪ್ ಟೈಮ್ ಟ್ರಯಲ್ ಸ್ಪರ್ಧೆಯಲ್ಲಿ ಬಾಗಲಕೋಟೆಯ ಶಿದ್ದಪ್ಪ ಕುರಣಿ ಹಾಗೂ ಮಹಿಳೆಯರ 1 ಲ್ಯಾಪ್ ಟೈಮ್ ಟ್ರಯಲ್ ಸ್ಪರ್ಧೆಯಲ್ಲಿ ವಿಜಾಪುರದ ಫರಿಯಾಲಾ ಜಮಾದಾರ ಮೊದಲಿಗರಾಗಿ ಗುರಿ ತಲುಪಿದರು.ಮೊದಲ ದಿನದ ಫಲಿತಾಂಶಗಳು:

ಪುರುಷರ ವಿಭಾಗ: 1 ಲ್ಯಾಪ್ ಟೈಮ್ ಟ್ರಯಲ್: ಸಿದ್ದಪ್ಪ ಕುರಣಿ-1, ಸಂತೋಷ ಮಾನೆ-2, ಮಾದಪ್ಪ ಕುರಣಿ (ಎಲ್ಲರೂ ಬಾಗಲಕೋಟೆ) ಕಾಲ: 21:09.80ಬಾಲಕರ ವಿಭಾಗ: 19 ವರ್ಷದೊಳಗಿನ ಬಾಲಕರ 1 ಲ್ಯಾಪ್ ಟೈಮ್ ಟ್ರಯಲ್: ಮಹಾದೇವ ಹಳಬರ (ಬಾಗಲ ಕೋಟೆ)-1, ಮಾರುತಿ ಹೊನ್ನಪ್ಪನವರ (ವಿಜಾಪುರ ಕ್ರೀಡಾಶಾಲೆ)-2, ಯಲಗುರೇಶ ಗಡ್ಡಿ (ವಿಜಾಪುರ)-3 ಕಾಲ: 14:21.7717 ವರ್ಷದೊಳಗಿನ ಬಾಲಕರ 2 ಲ್ಯಾಪ್ಸ್ ಮಾಸ್ಡ್ ಸ್ಟಾರ್ಟ್: ಸದಾಶಿವ ನಾಟಿಕಾರ-1, ಮಾಳಪ್ಪ ಮೂರ್ತನ್ನವರ-2, ರಾಜು ಕುರಣಿ-3, ಕೃಷ್ಣಾ ನಾಯ್ಕ್‌ಡೆ-4, ಮಲ್ಲಪ್ಪ ಜಂಬಗಿ-5 (ಎಲ್ಲರೂ ವಿಜಾಪುರ ಕ್ರೀಡಾ ನಿಲಯ) , ಶ್ರೀಧರ ಹೆಗಡೆ-6 (ಬಾಗಲಕೋಟೆ ಜಿಲ್ಲೆ)15 ವರ್ಷದೊಳಗಿನ ಬಾಲಕರ 1 ಲ್ಯಾಪ್ ಟೈಮ್ ಟ್ರಯಲ್: ಯಲ್ಲಪ್ಪ ಶಿರಬೂರ (ಬಾಗಲಕೋಟೆ)- 1,ಮುಚಕಂಡೆಪ್ಪ ಗುರವ (ಚಂದರಗಿ ಕ್ರೀಡಾಶಾಲೆ)-2, ಬಸವರಾಜ ತೇರದಾಳ (ಬಾಗಲಕೋಟೆ)-3 ಕಾಲ: 9:45.6213 ವರ್ಷ ಬಾಲಕರ 1 ಲ್ಯಾಪ್ ಟೈಮ ಟೆಯಲ್: ಅನಿಲ ಮಡ್ಡಿ-1, ರಾಜು ಬಾಟಿ-2, ಸಚಿನ್ ಬೋವಿ-3 (ಎಲ್ಲರೂ ಬಾಗಲಕೋಟೆಯ ಕ್ರೀಡಾ ನಿಲಯ) ಕಾಲ: 6.25:33ಮಹಿಳೆಯರ ವಿಭಾಗ: 1 ಲ್ಯಾಪ್ ಟೈಮ್ ಟ್ರಯಲ್: ಫರಿಯಾಲಾ ಜಮಾದಾರ (ವಿಜಾಪುರ)-1, ಸವಿತಾ ಗೌಡರ- 2, ರೂಪಾ ಗೌಡರ -3 (ಇಬ್ಬರೂ ಬಾಗಲಕೋಟೆ) ಕಾಲ: 12:09.8019 ವರ್ಷದೊಳಗಿನ ಬಾಲಕಿಯರ 1 ಲ್ಯಾಪ್ ಟೈಮ್ ಟ್ರಯಲ್: ಶಾಹಿರಾ ಅತ್ತಾರ (ವಿಜಾಪುರ)-1, ಬಸವ್ವ ಸೌದತ್ತಿ-2, ಹೀನಾ ನಾಲಬಂದ (ಇಬ್ಬರೂ ಬೆಳಗಾವಿ)-3, ಕಾಲ: 11:58.7517 ವರ್ಷದೊಳಗಿನ ಬಾಲಕಿಯರ 1 ಲ್ಯಾಪ್ ಟೈಮ್ ಟ್ರಯಲ್: ಶೈಲಾ ಮಟ್ಯಾಳ (ಬಾಗಲಕೋಟೆ ಕ್ರೀಡಾ ನಿಲಯ)-1, ಸೀಮಾ ಆಡಗಲ್ (ವಿಜಾಪುರ)-2, ಅಶ್ವಿನಿ ಮೇಟಿ (ಬಾಗಲಕೋಟೆ ಕ್ರೀಡಾ ನಿಲಯ)-3 ಕಾಲ: 06:53.2715 ವರ್ಷದೊಳಗಿನ ಬಾಲಕಿಯರ 1 ಲ್ಯಾಪ್ ಟೈಮ್ ಟ್ರಯಲ್: ಶಾಹಿರಾಬಾನು ಲೋದಿ-1, ರೇಣುಕಾ ದಂಡಿನ (ಇಬ್ಬರೂ ವಿಜಾಪುರ ಕ್ರೀಡಾ ನಿಲಯ)-2, ಅಶ್ವಿನಿ ಕುರಿ(ಬಾಗಲಕೋಟೆ ಕ್ರೀಡಾ ನಿಲಯ)-3 ಕಾಲ: 07:23.0713 ವರ್ಷದೊಳಗಿನ ಬಾಲಕಿಯರ 1 ಲ್ಯಾಪ್ ಟೈಮ್ ಟ್ರಯಲ್: ರಾಜೇಶ್ವರಿ ಡೊಳ್ಳಿ-1, ಸುಧಾರಾಣಿ ಜಂಬಗಿ (ಇಬ್ಬರೂ ಬಾಗಲಕೋಟೆ ಕ್ರೀಡಾ ನಿಲಯ)-2, ಪ್ರೇಮಾ ಗುಣದಾಳ (ವಿಜಾಪುರ ಕ್ರೀಡಾ ನಿಲಯ)-3 ಕಾಲ: 7:11.02

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry