ಸೋಮವಾರ, ಏಪ್ರಿಲ್ 19, 2021
31 °C

ರಾಜ್ಯ ರ್‍ಯಾಂಕಿಂಗ್ ಟೇಬಲ್ ಟೆನಿಸ್: ವೇದಾಂತ್, ಮೈತ್ರೇಯಿ ಪ್ರಶಸ್ತಿ ಡಬಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಆತಿಥೇಯ ಮೈಸೂರಿನ ವೇದಾಂತ್ ಎಂ. ಅರಸ್ ಮತ್ತು ಬೆಳಗಾವಿಯ ಮೈತ್ರೇಯಿ ಬೇಲೂರ್ ಭಾನುವಾರ ಮುಕ್ತಾಯವಾದ `ವಿದ್ಯಾಶ್ರಮ ಕಪ್~ ಕರ್ನಾಟಕ ರಾಜ್ಯ ರ್‍ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ `ಡಬಲ್~ ಸಾಧನೆ ಮಾಡಿದರು.ಎನ್‌ಐಇ ಒಳಾಂಗಣ ಕ್ರೀಡಾಂಗಣದಲ್ಲಿ ಮೈಸೂರು ಜಿಲ್ಲಾ ಟೇಬಲ್ ಟೆನಿಸ್ ಸಂಸ್ಥೆ ಆಶ್ರಯದಲ್ಲಿ ನಡೆದ ಟೂರ್ನಿಯಲ್ಲಿ ಹರಿ ವಿದ್ಯಾಲಯದ ವೇದಾಂತ್ ಎಂ. ಅರಸ್ ಜೂನಿಯರ್ ಮತ್ತು ಯೂತ್ ಬಾಲಕರ ವಿಭಾಗಗಳ ಪ್ರಶಸ್ತಿಯನ್ನು ಗೆದ್ದರು. ಮೈತ್ರೇಯಿ ಬೇಲೂರ್ ಮಹಿಳೆಯರ ಮತ್ತು ಜೂನಿಯರ್  ವಿಭಾಗದ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.ಯೂತ್ ಬಾಲಕರ ಸಿಂಗಲ್ಸ್‌ನ ಫೈನಲ್‌ನಲ್ಲಿ ವೇದಾಂತ್ 5-11, 11-6, 11-8, 9-11, 11-9, 11-7ರಿಂದ  ಬೆಂಗಳೂರಿನ ಬಿಎನ್‌ಎಂ ಕ್ಲಬ್‌ನ ಶ್ರೇಯಲ್ ಕೆ. ತೇಲಂಗ್ ವಿರುದ್ಧ ಜಯ ಗಳಿಸಿದರು.ಸೆಮಿಫೈನಲ್‌ನಲ್ಲಿ ವೇದಾಂತ್11-7, 3-11, 11-8, 11-2,  4-11, 11-7ರಿಂದ ಹೊರೈಜನ್ ಕ್ಲಬ್‌ನ ಸುನಂದ್ ವಾಸನ್  ವಿರುದ್ಧ ಜಯಿಸಿದರು. ಇನ್ನೊಂದು ಸೆಮಿಫೈನಲ್‌ನಲ್ಲಿ ಬಿಎನ್‌ಎಂನ ಶ್ರೇಯಲ್ ತೇಲಂಗ್ 11-8, 14-12, 11-8, 4-11, 11-8 ರಿಂದ ಭಾರತೀಯ ಕ್ರೀಡಾ ಪ್ರಾಧಿಕಾರದ ವಿ.ಪಿ. ಚರಣ್ ಅವರನ್ನು ಸೋಲಿಸಿದರು.ಜೂನಿಯರ್ ಬಾಲಕರ ವಿಭಾಗದ ರೋಚಕ ಫೈನಲ್‌ನಲ್ಲಿ  ವೇದಾಂತ್ 13-11, 12-10, 11-3, 9-11, 9-11, 11-8ರಿಂದ ಬಿಎನ್‌ಎಂನ ಶ್ರೇಯಲ್ ತೇಲಂಗ್ ಅವರ ವಿರುದ್ಧ ಪ್ರಯಾಸ ಜಯ ಸಾಧಿಸಿದರು.ನಾಲ್ಕರ ಹಂತದ ಪಂದ್ಯಗಳಲ್ಲಿ ವೇದಾಂತ್ 11-9, 9-11, 7-11, 11-9, 9-11, 11-5, 12-10ರಿಂದ ಎಸ್‌ಎಐನ ವಿ.ಪಿ. ಚರಣ್ ವಿರುದ್ಧ ರೋಚಕ ಗೆಲುವು ಸಾಧಿಸಿದರು. ಶ್ರೇಯಲ್ 12-10, 11-7, 6-11, 11-7, 9-11, 11-5ರಿಂದ ಸುನಂದ್ ವಾಸನ್ ವಿರುದ್ಧ ಜಯಶಾಲಿಯಾದರು.ಮೈತ್ರೇಯಿ ಮಿಂಚು: ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ಬೆಳಗಾವಿ ಟೆಟಿ ಅಕಾಡೆಮಿಯ 11-9. 11-7, 11-9, 11-3ರಿಂದ ಜೆಟಿಟಿಎದ ಆರ್. ರಕ್ಷಾ ವಿರುದ್ಧ ಜಯ ಗಳಿಸಿದರು. ಉತ್ತಮ ರ‌್ಯಾಲಿಗಳು ಮತ್ತು ಫೋರಹ್ಯಾಂಡ್ ಹೊಡೆತಗಳ ಮೂಲಕ ಗಮನ ಸೆಳೆದ ಅವರು ರಕ್ಷಾ ಅವರಿಗೆ ಪ್ರಾಬಲ್ಯ ಗಳಿಸಲು ಬಿಡಲಿಲ್ಲ.ಸೆಮಿಫೈನಲ್‌ನಲ್ಲಿ ಪ್ರಬಲ ಪೈಪೋಟಿ ಎದುರಿಸಿದ ಮೈತ್ರೇಯಿ 11-4, 11-8, 6-11, 11-5, 11-4ರಿಂದ ಮೈಸೂರಿನ ಹರ್ಷ ಟಿಟಿ ಅಕಾಡೆಮಿಯ ಎಂ. ಮಾಧುರ್ಯ ವಿರುದ್ಧ ಗೆದ್ದರೆ, ರಕ್ಷಾ 10-12, 12-10, 11-9, 12-10, 13-11ರಿಂದ ಎಚ್‌ಟಿಟಿಎದ ರಿಧಿ ರೋಹಿತ್ ವಿರುದ್ಧ ಗೆಲುವು ಸಾಧಿಸಿದರು. ಜೂನಿಯರ್ ಬಾಲಕಿಯರ ಫೈನಲ್‌ನಲ್ಲಿ ಮೈತ್ರೇಯಿ 11-4, 7-11, 11-7, 11-4, 11-5ರಿಂದ ಮೈಸೂರಿನ ಪೇರೆಂಟ್ಸ್ ಟೇಬಲ್ ಟೆನಿಸ್ ಅಕಾಡೆಮಿಯ ಎಂ.ವಿ. ಸ್ಫೂರ್ತಿಯನ್ನು ಮಣಿಸಿದರು.ಅನಿರ್ಬನ್, ರಿಧಿಗೆ ಪ್ರಶಸ್ತಿ: ಭಾನುವಾರ ಸಂಜೆ ನಡೆದ ಪುರುಷರ ಫೈನಲ್‌ನಲ್ಲಿ ನೈಋತ್ಯ ರೈಲ್ವೆಯ ಆಟಗಾರ ಅನಿರ್ಬನ್ ರಾಯಚೌಧರಿ ಮತ್ತು ಯೂತ್ ಬಾಲಕಿಯರ ವಿಭಾಗದಲ್ಲಿ ಮೈಸೂರಿನ ರಿಧಿ ರೋಹಿತ್ ಪ್ರಶಸ್ತಿ ಗೆದ್ದುಕೊಂಡರು.ಪುರುಷರ ಫೈನಲ್‌ನಲ್ಲಿ ಅನಿರ್ಬನ್ 11-7, 11-5, 11-9, 11-8ರಿಂದ ತಮ್ಮ ಸಹದ್ಯೋಗಿ ಜಯದೀಪ್ ದಾಸ್ ಅವರನ್ನು ಮಣಿಸಿದರು. ಸೆಮಿಫೈನಲ್‌ನಲ್ಲಿ ಅನಿರ್ಬನ್ 12-10, 11-8, 9-11, 6-11, 11-6, 11-13, 11-9ರಿಂದ ನೈರುತ್ಯ ರೈಲ್ವೆಯವರೇ ಆದ ಸಗಾಯರಾಜ್ ಅವರನ್ನು ಪರಾಭವಗೊಳಿಸಿದರು.ಯೂತ್ ಬಾಲಕಿಯರ ವಿಭಾಗದಲ್ಲಿ ಸಮರ್ಥ ಆಟ ತೋರಿದ ರಿಧಿ ರೋಹಿತ್ 11-5, 7-11, 11-7, 11-9, 16-14ರಿಂದ ಬೆಳಗಾವಿಯ ಮೈತ್ರೇಯಿ ಬೇಲೂರ್ ವಿರುದ್ಧ ಗೆದ್ದು ಪ್ರಶಸ್ತಿ ಗಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.