ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ :ಶ್ರೇಯಲ್ಗೆ ಪ್ರಶಸ್ತಿ ಡಬಲ್
ಬೆಂಗಳೂರು: ಬಿಎನ್ಎಂನ ಶ್ರೇಯಲ್ ತೆಲಾಂಗ್ ಇಲ್ಲಿ ಕೊನೆಗೊಂಡ ಆಲ್ಟ್ರಾಟೆಕ್ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ ಯೂತ್ ಬಾಲಕರ ವಿಭಾಗದಲ್ಲಿ ಚಾಂಪಿಯನ್ ಆದರು.ಭಾನುವಾರ ನಡೆದ ಫೈನಲ್ನಲ್ಲಿ ಅವರು 11-8, 12-10, 8-11, 11-8, 12-10 ಇದೇ ಕ್ಲಬ್ನ ಎ.ಆರ್. ನವನೀತ್ ವಿರುದ್ಧ ಜಯ ಪಡೆದರು. ಈ ಮೂಲಕ ಪ್ರಶಸ್ತಿ `ಡಬಲ್~ ಸಾಧನೆ ತಮ್ಮದಾಗಿಸಿಕೊಂಡರು. ಶ್ರೇಯಲ್ ಶನಿವಾರ ಜೂನಿಯರ್ ಬಾಲಕರ ವಿಭಾಗದಲ್ಲಿ ಚಾಂಪಿಯನ್ ಆಗಿದ್ದರು.
ಬಿಟಿಟಿಎ ಕ್ಲಬ್ನ ಮೈತ್ರೇಯಿ ಬೈಲೂರು ಕೂಡಾ ಪ್ರಶಸ್ತಿ `ಡಬಲ್~ ಗೌರವ ಪಡೆದರು. ಜೂನಿಯರ್ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆಗಿದ್ದ ಅವರು ಭಾನುವಾರ ಮಹಿಳೆಯರ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಮೈತ್ರೇಯಿ ಫೈನಲ್ನಲ್ಲಿ 11-7, 11-8, 11-6, 11-7 ರಲ್ಲಿ ಕೆ.ಎಸ್. ಹರಿಪ್ರಿಯಾ ಎದುರು ಗೆದ್ದರು.
ಪುರುಷರ ವಿಭಾಗದ ಪ್ರಶಸ್ತಿ ಎಸ್ಡಬ್ಲ್ಯುಆರ್ನ ಅನಿರ್ಬನ್ ರಾಯ್ ಚೌಧರಿ ಪಾಲಾಯಿತು. ಅವರು ಫೈನಲ್ನಲ್ಲಿ 12-10, 11-7, 8-11, 14-16, 11-7, 14-12 ರಲ್ಲಿ ಬಿಎನ್ಎಂನ ವೈಭವ್ ವಿರುದ್ಧ ಜಯ ಪಡೆದರು.
ಹಿರಿಯರ ವಿಭಾಗದ ಫೈನಲ್ನಲ್ಲಿ ಗುಲ್ಬರ್ಗದ ಶಿವಕುಮಾರ್ 11-8, 11-8, 12-10 ರಲ್ಲಿ ಬಿಎಚ್ಇಎಲ್ನ ಸಿದ್ಧರಮಣ ಗೌಡ ಅವರನ್ನು ಮಣಿಸಿ ಪ್ರಶಸ್ತಿ ಜಯಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.