ರಾಜ್ಯ ರ‌್ಯಾಂಕಿಂಗ್ ಬ್ಯಾಡ್ಮಿಂಟನ್: ಆನ್ಸಿಲಾಗೆ ಪ್ರಯಾಸದ ಜಯ

ಶುಕ್ರವಾರ, ಜೂಲೈ 19, 2019
26 °C

ರಾಜ್ಯ ರ‌್ಯಾಂಕಿಂಗ್ ಬ್ಯಾಡ್ಮಿಂಟನ್: ಆನ್ಸಿಲಾಗೆ ಪ್ರಯಾಸದ ಜಯ

Published:
Updated:

ಉಡುಪಿ: ಮೊದಲ ಗೇಮ್ ಹಿನ್ನಡೆಯಿಂದ ಚೇತರಿಸಿಕೊಂಡ ಸ್ಥಳೀಯ ಆಟಗಾರ್ತಿ ಆನ್ಸಿಲಾ ಸಲ್ಡಾನಾ ಭಾನುವಾರ ಇಲ್ಲಿ ಆರಂಭವಾದ ರಾಜ್ಯ ರ‌್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ 17 ವರ್ಷದೊಳಗಿನವರ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಗೆಲುವು ಸಾಧಿಸಿದರು.ಬಾಲಕಿಯರ ವಿಭಾಗದಲ್ಲಿ ಆನ್ಸಿಲಾ 12-21, 21-16, 21-8ರಲ್ಲಿ ಆಶಿ ಗುಪ್ತಾ (ಬೆಂಗಳೂರು) ವಿರುದ್ಧ ಜಯ ಗಳಿಸಿದರು.ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಮೊದಲ ಸುತ್ತಿನ ಹೆಚ್ಚಿನ ಪಂದ್ಯಗಳು ನೇರ ಗೇಮ್‌ಗಳಲ್ಲಿ ಇತ್ಯರ್ಥವಾದವು. ಅಶ್ವಿನಿ ಮುನ್ನಡೆ: 13 ವರ್ಷದೊಳಗಿನವರ ಬಾಲಕಿಯರ ವಿಭಾಗದ ಮೊದಲ ಸುತ್ತಿನ ಪಂದ್ಯಗಳಲ್ಲಿ ಅಗ್ರ ಶ್ರೇಯಾಂಕದ ಕೆ.ಅಶ್ವಿನಿ ಭಟ್ (ಬೆಂಗಳೂರು) 21-11, 21-5ರಲ್ಲಿ ಸಿಯಾ ನಿಕೋಲ್ ಕೊಲಾಕೊ ವಿರುದ್ಧ, ನಾಲ್ಕನೇ ಶ್ರೇಯಾಂಕದ ಶೀತಲ್ ಡಿ. (ಬೆಂಗಳೂರು) 21-2, 21-0 ಯಿಂದ ಹಸ್ತಾ ಜೈನ್ ಎದುರೂ ಗೆಲುವು ದಾಖಲಿಸಿದರು. ಉಳಿದ ಶ್ರೇಯಾಂಕ ಆಟಗಾರ್ತಿಯರಿಗೂ ಹೆಚ್ಚಿನ ಸವಾಲು ಎದುರಾಗಲಿಲ್ಲ.ಎನ್.ಎಸ್.ಗಗನಾ 21-13, 21-17 ರಲ್ಲಿ ಕೆ.ದೇಚಮ್ಮ ವಿರುದ್ಧ; ನಮಿತಾ ಯಾಳಗಿ (ಬೆಳಗಾವಿ) 21-2, 21-2 ರಲ್ಲಿ ಚೆಲ್ಸಿಯಾ ಮಸ್ಕರೇನಾಸ್ ಎದುರು; ನೇಹಾ ಹರೀಶ್ (ಉಡುಪಿ) 21-15, 21-16 ರಲ್ಲಿ ರಿಯಾ ಪಾಟ್ಕೆ ವಿರುದ್ಧ; ಗ್ಲಾನ್ಸಿಯಾ ಎ.ಪಿಂಟೊ 21-2, 21-2ರಲ್ಲಿ ಸ್ಪಂದನಾ ಬೇಕಲ್ ಮೇಲೆ ಜಯ ಗಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry