ಶನಿವಾರ, ಆಗಸ್ಟ್ 24, 2019
28 °C

ರಾಜ್ಯ ರ‍್ಯಾಂಕಿಂಗ್ ಟಿಟಿ ಟೂರ್ನಿ 15ರಿಂದ

Published:
Updated:

ಬೆಳಗಾವಿ: ಬೆಳಗಾವಿ ಜಿಲ್ಲಾ ಟೇಬಲ್ ಟೆನಿಸ್ ಸಂಸ್ಥೆಯು (ಬಿಡಿಟಿಟಿಎ) ಭಾರತೀಯ ಜೀವವಿಮಾ ನಿಗಮದ ಬೆಳಗಾವಿ ವಿಭಾಗದ ಸಹಯೋಗದಲ್ಲಿ ಇದೇ ತಿಂಗಳ 15ರಿಂದ 18ರವರೆಗೆ `ಎಲ್‌ಐಸಿ ಕಪ್' ಕರ್ನಾಟಕ ರಾಜ್ಯ ರ‍್ಯಾಂಕಿಂಗ್ಟೇಬಲ್ ಟೆನಿಸ್ ಟೂರ್ನಿ ಆಯೋಜಿಸಿದೆ.ನಗರದ ಬೆಳಗಾವಿ ಕ್ಲಬ್‌ನ ಬ್ಯಾಡ್ಮಿಂಟನ್ ಹಾಲ್‌ನಲ್ಲಿ ಟೂರ್ನಿ ನಡೆಯಲಿದೆ. ಜೂನಿಯರ್, ಸಬ್ ಜೂನಿಯರ್, ಕೆಡೆಟ್, ಮಿನಿ ಕೆಡೆಟ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಪುರುಷ ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ಸ್ಪರ್ಧೆ ನಡೆಯಲಿದೆ.

ಹೆಸರು ನೊಂದಾಯಿಸಲು ಇದೇ 11 ಕಡೆಯ ದಿನ.ಮಾಹಿತಿಗೆ ಮುಖ್ಯ ರೆಫರಿ ಹರೀಶ ಪುತ್ರನ್  (harish.puthran@orientalinsurance.co.in)  ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Post Comments (+)