ರಾಜ್ಯ ಲೋಕಸೇವಾ ಆಯೋಗದ ಇಲಾಖಾ ಪರೀಕ್ಷೆ: 25 ರಿಂದ

ಶನಿವಾರ, ಜೂಲೈ 20, 2019
23 °C

ರಾಜ್ಯ ಲೋಕಸೇವಾ ಆಯೋಗದ ಇಲಾಖಾ ಪರೀಕ್ಷೆ: 25 ರಿಂದ

Published:
Updated:

ಬೆಂಗಳೂರು: ರಾಜ್ಯ ಲೋಕಸೇವಾ ಆಯೋಗ ನಡೆಸುವ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಯನ್ನು ಇದೇ 25ರಿಂದ 30ರ ವರೆಗೆ ಬೆಂಗಳೂರಿನ ಕೇಂದ್ರದಲ್ಲಿ ಮತ್ತು ಜುಲೈ 4ರಿಂದ 15ರ ವರೆಗೆ ಜಿಲ್ಲಾ ಕೇಂದ್ರಗಳಲ್ಲಿ ನಡೆಸಲಾಗುವುದು ಎಂದು ಆಯೋಗದ ಸದಸ್ಯ ಕಾರ್ಯದರ್ಶಿ ಡಿ.ಎಸ್. ವಿಶ್ವನಾಥ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪರೀಕ್ಷಾ ವೇಳಾಪಟ್ಟಿ, ಅಭ್ಯರ್ಥಿಗಳಿಗೆ ನೀಡಲಾಗಿರುವ ಸೂಚನೆಗಳು ಮತ್ತು ಪ್ರವೇಶ ಪತ್ರಗಳನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ (http://kpsc.kar.­nic.in-homepage/) ಪ್ರಕಟಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.ಪ್ರವೇಶ ಪತ್ರಕ್ಕೆ ವೆಬ್‌ಸೈಟ್‌ನಲ್ಲಿ‘DE 2011 I Session-Admission card’ಮೇಲೆ ಕ್ಲಿಕ್ ಮಾಡಬೇಕು. ಡೌನ್‌ಲೋಡ್ ಮಾಡಿಕೊಳ್ಳುವಲ್ಲಿ ಯಾವುದೇ ಸಮಸ್ಯೆ ಎದುರಾದರೆ ದೂ. 30574944 ಅಥವಾ 30574945 ಕರೆ ಮಾಡಬಹುದು ಎಂದು ತಿಳಿಸಿದ್ದಾರೆ. ಅರ್ಜಿ ಸಲ್ಲಿಸಿಯೂ ಪ್ರವೇಶ ಪತ್ರ ಲಭ್ಯವಾಗದಿದ್ದಲ್ಲಿ, ಇದೇ 23ಕ್ಕೆ ಮೊದಲು ಖುದ್ದಾಗಿ ಆಯೋಗವನ್ನು ಅಥವಾ ಇಲ್ಲಿ ತಿಳಿಸಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ ವಿಚಾರಿಸಬಹುದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry