ರಾಜ್ಯ ಸರ್ಕಾರ ವಜಾಗೊಳಿಸಲು ಸಿಪಿಎಂ ಆಗ್ರಹ: ಧರಣಿ

ಶನಿವಾರ, ಜೂಲೈ 20, 2019
28 °C

ರಾಜ್ಯ ಸರ್ಕಾರ ವಜಾಗೊಳಿಸಲು ಸಿಪಿಎಂ ಆಗ್ರಹ: ಧರಣಿ

Published:
Updated:

ವಿರಾಜಪೇಟೆ: ಬಿಜೆಪಿ ಸರ್ಕಾರದಲ್ಲಿ 9ಮಂದಿ ಸಚಿವರು ರಾಜೀನಾಮೆ ನೀಡಿರುವುದರಿಂದ ಸರ್ಕಾರ ಅಸ್ಥಿರವಾಗಿದ್ದು, ರಾಜ್ಯಪಾಲರು ತಕ್ಷಣ ವಜಾಗೊಳಿಸುವಂತೆ ಆಗ್ರಹಿಸಿ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಸೋಮವಾರ ಮುಖ್ಯಬೀದಿಗಳಲ್ಲಿ ಪ್ರತಿಭಟನೆ ನಡೆಸಿ ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಿದರು.

ನಂತರ ನಡೆಸಿ ತಹಶೀಲ್ದಾರ್ ಎಂ.ಸಿ.ಚಾಮು ಅವರಿಗೆ ಮನವಿ ಸಲ್ಲಿಸಿದರು.ಇದೇ ಸಂದರ್ಭದಲ್ಲಿ ಪ್ರತಿಭಟನೆಗಾರರನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ. ದುರ್ಗಾಪ್ರಸಾದ್, ರಾಜ್ಯ ಭೀಕರ ಬರಗಾಲದ ಪರಿಸ್ಥಿತಿ ಎದುರಿಸುವ ಸಾಧ್ಯತೆ ಇರುವ ಇಂದಿನ ಸಮಯದಲ್ಲಿ ಪರಿಹಾರಕ್ಕೆ ಗಮನ ಕೊಡುವ ಬದಲು ರಾಜ್ಯದಲ್ಲಿ ರಾಜಕೀಯ ಜಂಜಾಟ ನಡೆಯುತ್ತಿದೆ.

 

ಸರ್ಕಾರ ಬರಗಾಲದ ಕುರಿತು ಪರಿಹಾರಕ್ಕಾಗಿ ದಿಟ್ಟ ನಿಲುವನ್ನು ಕೈಗೊಳ್ಳಬೇಕಾಗಿದೆ. ಭಿನ್ನಮತೀಯ ಸಚಿವರು,

ಶಾಸಕರನ್ನು ಓಲೈಸುವುದೇ ಈಗ ಮುಖ್ಯಮಂತ್ರಿಯ ಕರ್ತವ್ಯವಾಗಿದೆ, ಇದರಿಂದ ಜನತೆಗೆ ಯಾವುದೇ ಪರಿಹಾರ ದೊರಕುತ್ತಿಲ್ಲ. ಮುಖ್ಯಮಂತ್ರಿ ಸೇರಿದಂತೆ ಎಲ್ಲ ಸಚಿವರುಗಳು ರಾಜಿನಾಮೆ ನೀಡಿ ಹೊರ ಬಂದು ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತಕ್ಕೆ ಅವಕಾಶ ನೀಡಲಿ ಎಂದರು.ಕಾರ್ಯಕರ್ತರುಗಳಾದ ಶಾಜಿ ರಮೇಶ್, ಜಾಯ್, ಜೋಸ್ ಮತ್ತಿತರ ಕಾರ್ಯಕರ್ತರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry