ರಾಜ್ಯ ಸೆಪಕ್‌ಟಾಕ್ರಾ ತಂಡಗಳ ಆಯ್ಕೆ 22ರಂದು

7

ರಾಜ್ಯ ಸೆಪಕ್‌ಟಾಕ್ರಾ ತಂಡಗಳ ಆಯ್ಕೆ 22ರಂದು

Published:
Updated:

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಸೆಪಕ್‌­ಟಾಕ್ರಾ ಪುರುಷ ಹಾಗೂ ಮಹಿಳಾ ತಂಡಗಳ ಆಯ್ಕೆ ಪ್ರಕ್ರಿಯೆಯು ಇದೇ 22ರಂದು ಬೆಳಿಗ್ಗೆ 10ಕ್ಕೆ ಇಲ್ಲಿನ ಗೋಕುಲ ರಸ್ತೆಯಲ್ಲಿರುವ ಡಾ. ಕೆ.ಎಸ್‌. ಶರ್ಮಾ ಶಿಕ್ಷಣ ಸಂಸ್ಥೆಯ ಒಳಾ­ಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ.ಅಕ್ಟೋಬರ್‌ 15ರಿಂದ 18ರವರೆಗೆ ನಾಗಾಲ್ಯಾಂಡ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಸೆಪಕ್‌ಟಾಕ್ರಾ ಚಾಂಪಿಯನ್‌ಷಿಪ್‌ಗೆ ಈ ಸಂದರ್ಭ ರಾಜ್ಯ ತಂಡಗಳನ್ನು ಆಯ್ಕೆ ಮಾಡಲಾಗುವುದು. ನೋಂದಾಯಿತ ಶಾಲೆ–ಕಾಲೇಜುಗಳು, ಕ್ರೀಡಾ ಸಂಘ­ಗಳು, ಮಾನ್ಯತೆ ಪಡೆದ ಜಿಲ್ಲಾ ಸಂಸ್ಥೆಗಳ ಕ್ರೀಡಾಪಟುಗಳು ಪಾಲ್ಗೊಳ್ಳಬಹುದು.ಮಾಹಿತಿಗೆ ತರಬೇತುದಾರ ಕೇಶವ ಸೂರ್ಯವಂಶಿ (ಮೊ. 9886827491) ಅವರನ್ನು ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry