ರಾಜ್ಯ ಹಾಕಿ ಸಂಸ್ಥೆಗಳಿಗೆ ಅನುದಾನ

7

ರಾಜ್ಯ ಹಾಕಿ ಸಂಸ್ಥೆಗಳಿಗೆ ಅನುದಾನ

Published:
Updated:

ನವದೆಹಲಿ (ಪಿಟಿಐ): ಗ್ರಾಮೀಣ ಭಾಗಗಳಲ್ಲಿ ಹಾಕಿ ಕ್ರೀಡೆಯನ್ನು ಅಭಿವೃದ್ಧಿ ಪಡಿಸಲು ಹಾಗೂ ಟೂರ್ನಿಗಳನ್ನು ಸಂಘಟಿಸಲು ಹಾಕಿ ಇಂಡಿಯಾ (ಎಚ್‌ಐ) ರಾಜ್ಯ ಹಾಕಿ ಸಂಸ್ಥೆಗಳಿಗೆ ಐದು ಲಕ್ಷ ರೂಪಾಯಿ ಅನುದಾನ ನೀಡಲು ನಿರ್ಧರಿಸಿದೆ.ಶನಿವಾರ ನಡೆದ ಹಾಕಿ ಇಂಡಿಯಾದ ಕಾರ್ಯಕಾರಿಣಿ ಮಂಡಳಿ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಯಿತು. ಸೀನಿಯರ್, ಜೂನಿಯರ್, ಸಬ್ ಜೂನಿಯರ್ ಹಂತದ ಟೂರ್ನಿ  ಸಂಘಟಿಸಲು ಈ ಹಣ ಬಳಕೆ ಮಾಡಬಹುದು.

`ದೇಶಾದ್ಯಂತ ಹಾಕಿ ಕ್ರೀಡೆ ಜನಪ್ರಿಯಗೊಳ್ಳಬೇಕು.ಈ ಕ್ರೀಡೆಯತ್ತ ಯುವಕರನ್ನು ಸೆಳೆಯಬೇಕು ಹಾಗೂ ಅವರಿಗೆ ಅಗತ್ಯ ನೆರವು ದೊರೆಯಬೇಕು ಎನ್ನುವುದು ನಮ್ಮ ಉದ್ದೇಶ~ ಎಂದು ಎಚ್‌ಐನ ಪ್ರಧಾನ ಕಾರ್ಯದರ್ಶಿ ನರೀಂದರ್ ಬಾತ್ರಾ ಹೇಳಿದರು. ಆರ್ಥಿಕವಾಗಿ ಹಿಂದುಳಿದಿರುವ ಸುಮಾರು 66 ಜೂನಿಯರ್ ಆಟಗಾರರಿಗೆ ಆರ್ಥಿಕ ನೆರವು ನೀಡುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry