ರಾಜ್ ಕಪ್ ಟೂರ್ನಿಗೆ ಭರದ ಸಿದ್ಧತೆ

7

ರಾಜ್ ಕಪ್ ಟೂರ್ನಿಗೆ ಭರದ ಸಿದ್ಧತೆ

Published:
Updated:

ಬಾಗಲಕೋಟೆ: ಕರ್ನಾಟಕ ಚಲನಚಿತ್ರ ನೃತ್ಯ ನಿರ್ದೇಶಕರ ಮತ್ತು ನೃತ್ಯ ಕಲಾವಿದರ ಸಂಘ ಹಮ್ಮಿಕೊಂಡಿರುವ ಚಲನಚಿತ್ರ ತಾರೆಯರ ಮತ್ತು ಶಾಸಕರ ಕ್ರಿಕೆಟ್ ಟೂರ್ನಿಯ ನಾಲ್ಕು ಪಂದ್ಯಗಳು ಇದೇ 27ರಂದು ನಗರದಲ್ಲಿ ನಡೆಯಲಿವೆ.  ಟೂರ್ನಿಯ ಹಿನ್ನೆಲೆಯಲ್ಲಿ ನಗರದ ನವನಗರ ಜಿಲ್ಲಾ ಕೀಡಾಂಗಣದಲ್ಲಿ ಭರದ ಸಿದ್ಧತೆ ನಡೆಯುತ್ತಿದ್ದು ಚಲನಚಿತ್ರ ತಾರೆಯರ ಫ್ಲೆಕ್ಸ್‌ಗಳು ಬೀದಿಬೀದಿಗಳಲ್ಲಿ ರಾರಾಜಿಸುತ್ತಿವೆ. ನೆಚ್ಚಿನ ನಟರು ಹಾಗೂ ಚಲನಚಿತ್ರ ರಂಗಕ್ಕೆ ಸಂಬಂಧಪಟ್ಟವರನ್ನು ನೋಡಲು, ಅವರ ಆಟವನ್ನು ಸವಿಯಲು ಜನರು ಕಾತರರಾಗಿದ್ದಾರೆ.ಹ್ಯಾಟ್ರಿಕ್ ಹಿರೋ ಶಿವರಾಜ್‌ಕುಮಾರ್, ಸೂಪರ್ ಸ್ಟಾರ್ ಉಪೇಂದ್ರ, ದುನಿಯಾ ಖ್ಯಾತಿ ವಿಜಯ, ಲೂಸ್ ಮಾದಾ, ಗೋಲ್ಡನ್ ಸ್ಟಾರ್ ಗಣೇಶ,  ಶ್ರೀನಗರ ಕಿಟ್ಟಿ, ಪವರ್‌ಸ್ಟಾರ್ ಪುನೀತ್ ರಾಜಕುಮಾರ, ಯಶ್, ಚಲನಚಿತ್ರ ತಾಂತ್ರಿಕ ವರ್ಗದವರು, ನಿರ್ಮಾಪಕರು, ನಿರ್ದೇಶಕರು, ನೃತ್ಯಕಲಾವಿದರು, ಹಿನ್ನೆಲೆ ಗಾಯಕರು ಇಲ್ಲಿಗೆ ಆಗಮಿಸಲಿದ್ದಾರೆ. `ಒಟ್ಟು 8 ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿದ್ದು 40 ಪಂದ್ಯಗಳು ಇರುತ್ತವೆ. ತಲಾ 12 ಓವರ್‌ಗಳ ನಾಲ್ಕು ಪಂದ್ಯಗಳು ಒಂದೊಂದು ಜಿಲ್ಲೆಯಲ್ಲಿ ನಡೆಯಲಿವೆ~ ಎಂದು ಸಂಘಟಕ ಆರ್.ಡಿ. ಬಾಬು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry