ರಾಜ, ಕನಿಮೋಳಿ, ಕಲ್ಮಾಡಿಗೆ ಮತ್ತೆ ಸ್ಥಾನಮಾನ

7

ರಾಜ, ಕನಿಮೋಳಿ, ಕಲ್ಮಾಡಿಗೆ ಮತ್ತೆ ಸ್ಥಾನಮಾನ

Published:
Updated:

ಕೇಂದ್ರ ಸರ್ಕಾರ ಲಂಚ ರುಷುವತ್ತು ನಿಯಂತ್ರಣದಲ್ಲಿ ಗಂಭೀರವಾಗಿಲ್ಲ. ಪರೋಕ್ಷವಾಗಿ ಸಹಾಯ ಮಾಡುತ್ತಿದೆಯೇನೋ ಎನಿಸುತ್ತದೆ. ಮಾಡಬಾರದ್ದನ್ನೇ ಮಾಡಿದರೂ, ಏನೇನೂ ಆಗುವುದಿಲ್ಲ.ಸ್ವಲ್ಪ ದಿನ ಮಾತ್ರ ಅವಿತುಕೊಂಡು ಕೂತರೆ ನಂತರ ಹೇಗೆ ಬೇಕಾದರೂ ತಲೆ ಎತ್ತಿ ನಡೆಯಬಹುದು ಎನ್ನುವುದು, ಈಗ  ಸ್ಪಷ್ಟ.  ಕೋಟ್ಯಂತರ ರೂಪಾಯಿಗಳ ಹಗರಣದಲ್ಲಿ  ಆರೋಪ ಹೊತ್ತಿರವ ಎ. ರಾಜ, ಕನಿಮೋಳಿ ಮತ್ತು ಸುರೇಶ್ ಕಲ್ಮಾಡಿಯವರನ್ನುಅವರು ಆರೋಪಮುಕ್ತರಾಗುವ ಮೊದಲೇ ಸಂಸದೀಯ ಸಮಿತಿ  ಗಳಿಗೆ ತಂದು ಕೂರಿಸಿರುವುದು ಸರ್ಕಾರದ ನಿರ್ಲಜ್ಜ ನಿರ್ಧಾರ. ಈ ಕೃತ್ಯ ಸರ್ಕಾರದ ನೈತಿಕತೆ  ಕುರಿತಂತೆ ಗಹನವಾದಂತಹ ಪ್ರಶ್ನೆಗಳನ್ನ ಕೇಳುವಂತೆ ಮಾಡಿದೆ. ಸಾಮಾನ್ಯ ಮನುಷ್ಯರು ಇದನ್ನೆಲ್ಲಾ ನೋಡುತ್ತಾ ಉಸಿರು ಬಿಗಿಹಿಡಿದುಕೊಂಡು ಕೂರಬೇಕು. ಏಕೆಂದರೆ ಅವರು ಸರ್ಕಾರ ನಡೆಸುವವರನ್ನು ಏನು ತಾನೆ ಕೇಳಿಯಾರು? 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry