ರಾಝ್-3 ಆರಂಭ

7

ರಾಝ್-3 ಆರಂಭ

Published:
Updated:
ರಾಝ್-3 ಆರಂಭ

ವಿಕ್ರಂ ಭಟ್ `ರಾಝ್-3~ ಚಿತ್ರವನ್ನು ಆರಂಭಿಸಿದ್ದಾರೆ. `ಹಾರರ್ ಆಫ್ ದಿ ಹಾರ್ಟ್ಸ್~ ಎಂಬ ವಿಷಯವನ್ನು ಆಧಾರವಾಗಿಟ್ಟುಕೊಂಡು ಕತೆ ಹೆಣೆಯಲಾಗಿದೆ. `ಇದು ಸಂಪೂರ್ಣವಾಗಿ ಹೊಸ ಕತೆ. `ರಾಝ್-3~ ಎಂಬ ಹೆಸರನ್ನು ಪ್ರಚಾರಕ್ಕಾಗಿ ಇಡಲಾಗಿದೆ.

 

ಒಂದನೇ ಮತ್ತು ಎರಡನೇ ಸರಣಿಗೂ ಇದಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ಹಾರರ್ ದೃಶ್ಯಗಳಷ್ಟೇ ರೊಮ್ಯಾಂಟಿಕ್ ದೃಶ್ಯಗಳೂ ಚಿತ್ರದಲ್ಲಿವೆ. ಪ್ರತಿಯೊಂದು ಸನ್ನಿವೇಶವೂ ಆಶ್ಚರ್ಯ ಮತ್ತು ಆಘಾತ ನೀಡಲಿವೆ. ನಮ್ಮ ಈ ಮೊದಲಿನ ಎಲ್ಲಾ ದಾಖಲೆಗಳನ್ನು ಈ ಚಿತ್ರ ಮುರಿಯಲಿದೆ~ ಎಂದು ಮುಖೇಶ್ ಭಟ್ ಹೇಳಿದ್ದಾರೆ.ಶಗುಫ್ತಾ ರಫಿಕ್ ಹೆಸರಿನ ಹೊಸ ಹುಡುಗ ಬರೆದಿರುವ ಸ್ಕ್ರಿಪ್ಟ್ ಬಗ್ಗೆ ಅಪಾರ ಭರವಸೆ ವ್ಯಕ್ತಪಡಿಸಿರುವ ಮಹೇಶ್ ಭಟ್, ತಮ್ಮ ಎರಡನೇ ಪುತ್ರಿ ಶಹೀನ್ ಈ ಚಿತ್ರದ ಮೂಲಕ ಸಹಾಯಕ ನಿರ್ದೇಶಕಿಯಾಗಿ ಕೆಲಸ ಆರಂಭಿಸುತ್ತಿರುವ ವಿಚಾರವನ್ನೂ ತಿಳಿಸಿದ್ದಾರೆ. ಅಂದಹಾಗೆ, ಚಿತ್ರದ ನಾಯಕ ಇಮ್ರಾನ್ ಹಷ್ಮಿ , ನಾಯಕಿ ಬಿಪಾಶಾ ಬಸು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry