ರಾಡಿಯಾ ಹಗರಣ:ಕೇಂದ್ರಕ್ಕೆ ಸುಪ್ರೀಂ ನೋಟಿಸ್

7

ರಾಡಿಯಾ ಹಗರಣ:ಕೇಂದ್ರಕ್ಕೆ ಸುಪ್ರೀಂ ನೋಟಿಸ್

Published:
Updated:

ನವದೆಹಲಿ (ಪಿಟಿಐ): ಸಚಿವರನ್ನು ಒಳಗೊಂಡಂತೆ ವಿವಿಧ ಪ್ರಸಿದ್ಧ ವ್ಯಕ್ತಿಗಳೊಂದಿಗೆ ಕಾರ್ಪೊರೇಟ್ ಮಧ್ಯವರ್ತಿ ನೀರಾ ರಾಡಿಯಾ ನಡೆಸಿದ್ದ ದೂರವಾಣಿ ಸಂಭಾಷಣೆಯ  ಪೂರ್ಣ ವಿವರಗಳನ್ನು ಬಹಿರಂಗಪಡಿಸಬೇಕೆಂಬ ಮನವಿ ಬಗ್ಗೆ ನಿರ್ಧಾರವನ್ನು ತಿಳಿಸುವಂತೆ ಸುಪ್ರಿಂಕೋರ್ಟ್ ಸೋಮವಾರ ಕೇಂದ್ರ ಸರ್ಕಾರವನ್ನು ಕೋರಿದೆ.ರಾಡಿಯಾ ಧ್ವನಿಸುರುಳಿಯನ್ನು ಬಹಿರಂಗಪಡಿಸಬೇಕೆಂಬ ಮನವಿ ಕುರಿತು  ನ್ಯಾಯಮೂರ್ತಿಗಳಾದ ಜಿ.ಎಸ್. ಸಿಂಘ್ವಿ ಮತ್ತು ಎಸ್.ಎಸ್. ನಿಜ್ಜಾರ್  ಸರ್ಕಾರಕ್ಕೆ ನೋಟಿಸ್ ನೀಡಿ ಫೆಬ್ರುವರಿ 2ರೊಳಗೆ ಪ್ರತಿಕ್ರಿಯಿಸುವಂತೆ ತಿಳಿಸಿದ್ದಾರೆ.ಸರ್ಕಾರವು 2008-09ನೇ ಸಾಲಿನಲ್ಲಿ ನೀರಾ ರಾಡಿಯಾ ಅವರ ದೂರವಾಣಿ ಸಂಭಾಷಣೆಗಳನ್ನು ದಾಖಲಿಸಿತ್ತು.ರಾಡಿಯಾ ಧ್ವನಿಸುರುಳಿಯ ಇಡೀ ವಿವರ ಪ್ರಕಟಿಸಬೇಕೆಂದು ಸಿಪಿಐಎಲ್ ಮನವಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry