ರಾಣಿ ಎಲಿಜಬತ್‌ರಿಗೆ ಬೆಂಗಳೂರಿನಲ್ಲಿ ಸ್ವಾಗತ

7

ರಾಣಿ ಎಲಿಜಬತ್‌ರಿಗೆ ಬೆಂಗಳೂರಿನಲ್ಲಿ ಸ್ವಾಗತ

Published:
Updated:

ರಾಣಿ ಎಲಿಜಬತ್‌ರಿಗೆ ಬೆಂಗಳೂರಿನಲ್ಲಿ ಸ್ವಾಗತ

ಬೆಂಗಳೂರು, ಫೆ. 21 - ಬಿಸಿಲನ್ನು ಲೆಕ್ಕಿಸದೆ ಕಾದು ನಿಂತಿದ್ದ ಎರಡು ಲಕ್ಷಕ್ಕೂ ಮೀರಿದ ಜನರು, ಇಂದು ಬ್ರಿಟನ್ನಿನ ರಾಣಿ ಹಾಗೂ ಅವರ ಪತಿ ಎಡಿನ್‌ಬರೋ ಡ್ಯೂಕರನ್ನು ಅತ್ಯಂತ ಆದರಾಭಿಮಾನಗಳಿಂದ ಬರ ಮಾಡಿಕೊಂಡರು.

ಸಂಜೆ ನಂದಿ ಬೆಟ್ಟಕ್ಕೆ ತೆರಳುವವರೆಗೆ ರಾಣಿ ನಗರದಲ್ಲಿ ಹೋದ ಮಾರ್ಗಗಳಲ್ಲೆಲ್ಲ ಒಟ್ಟು, ಸುಮಾರು 5 ಲಕ್ಷ ಮಂದಿ ಜನರು ನೆರೆದಿದ್ದು ಕರತಾಡನ ಹಾಗೂ ಹರ್ಷ ಧ್ವನಿಗಳಿಂದ ಸ್ವಾಗತಿಸಿದರು.

ಲಲಿತಾಬಾಯಿ ಪಾಟೀಲ  ವಿಧಾನ ಸಭೆಗೆ ಆಯ್ಕೆ

ಬೆಂಗಳೂರು, ಫೆ. 21 - ಗುಲ್ಬರ್ಗ ಜಿಲ್ಲೆಯ ಆಳಂದ ಮತದಾರ ಕ್ಷೇತ್ರದಿಂದ ರಾಜ್ಯದ ವಿಧಾನ ಸಭೆಗೆ ನಡೆದ ಉಪಚುನಾವಣೆಯಲ್ಲಿ ಶ್ರೀಮತಿ ಲಲಿತಾಬಾಯಿ ಚಂದ್ರಶೇಖರ ಪಾಟೀಲ ಅವರು ಅವಿರೋಧವಾಗಿ ಆಯ್ಕೆಗೊಂಡಿರುವರೆಂದು ಇಂದು ಇಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry