ರಾಣಿ ಚೆನ್ನಮ್ಮ ವಿ.ವಿ:ವೆಬ್‌ಸೈಟ್ ಆರಂಭ

ಶುಕ್ರವಾರ, ಜೂಲೈ 19, 2019
28 °C

ರಾಣಿ ಚೆನ್ನಮ್ಮ ವಿ.ವಿ:ವೆಬ್‌ಸೈಟ್ ಆರಂಭ

Published:
Updated:

ಬೆಳಗಾವಿ: ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಲಭ್ಯ ಇರುವ ಎಲ್ಲ ಕೋರ್ಸ್‌ಗಳ, ಪ್ರವೇಶ ಇತ್ಯಾದಿ ವಿಷಯಗಳ ಮಾಹಿತಿಯನ್ನು www.rcub.ac.in ವೈಬ್‌ಸೈಟ್ ಮೂಲಕ ಪಡೆಯಬಹುದಾಗಿದೆ ಎಂದು ವಿಶ್ವವಿದ್ಯಾಲಯದ ಕುಲಸಚಿವರು ತಿಳಿಸಿದ್ದಾರೆ.ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜು, ಸ್ನಾತಕೋತ್ತರ ಕಾಲೇಜು, ಪರೀಕ್ಷಾ ವೇಳಾಪಟ್ಟಿ, ಪಠ್ಯಕ್ರಮ ಮುಂತಾದ ಮಾಹಿತಿಗಳಿದ್ದು, ವಿದ್ಯಾರ್ಥಿಗಳು ಹಾಗೂ ಪಾಲಕರು ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ಕಾಲೇಜುಗಳ ಪ್ರಾಚಾರ್ಯರು, ತಮ್ಮ ಕಾಲೇಜಿನ ಇ-ಮೇಲ್ ವಿಳಾಸವನ್ನು ವಿಶ್ವವಿದ್ಯಾಲಯಕ್ಕೆ ಕಳುಹಿಸಿಕೊಡಬೇಕು ಎಂದು ಅವರು ಕೋರಿದ್ದಾರೆ.ನೇಮಕ: ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಹಣಕಾಸು ಸಮಿತಿಯ ಸದಸ್ಯರಾಗಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ವಸಂತ ಹೊರಟ್ಟಿ ನೇಮಕಗೊಂಡಿದ್ದಾರೆ ಎಂದು ಕುಲಸಚಿವರು  ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry