ಗುರುವಾರ , ಮೇ 6, 2021
23 °C

ರಾತ್ರಿಯಿಡೀ ಗೆಲುವಿನ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರ್ಮಿಂಗ್‌ಹ್ಯಾಂ (ಪಿಟಿಐ): ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡದ ಸದಸ್ಯರು ಭಾನುವಾರ ರಾತ್ರಿಯಿಡೀ ಗೆಲುವಿನ ಸಂಭ್ರಮ ಆಚರಿಸಿದ್ದಾರೆ. ಟ್ರೋಫಿ ಎತ್ತಿಹಿಡಿದು ಕ್ರೀಡಾಂಗಣದಲ್ಲಿ ಕುಣಿದಾಡಿದ್ದ ಮಹೇಂದ್ರ ಸಿಂಗ್ ದೋನಿ ಬಳಗ ಹೋಟೆಲ್‌ನಲ್ಲೂ ಸಂಭ್ರಮದಲ್ಲಿ ಮಿಂದೆದ್ದಿತು.ಪರಸ್ಪರ ಶಾಂಪೇನ್ ಚಿಮ್ಮಿಸಿ ಸಂತಸಪಟ್ಟ ಆಟಗಾರರು ಹಿಂದಿ ಹಾಗೂ ಪಂಜಾಬಿ ಹಾಡುಗಳಿಗೆ ನೃತ್ಯಮಾಡಿದ್ದಾರೆ. ಈ ಮೋಜಿನ ಆಟ ಸೋಮವಾರ ಮುಂಜಾನೆಯವರೆಗೂ ಮುಂದುವರಿದಿತ್ತು.ಭಾರತ ತಂಡದ ಅಧಿಕಾರಿಗಳು ಕೂಡಾ ಆಟಗಾರರ ಸಂಭ್ರಮಕ್ಕೆ ಅಡ್ಡಿ ಉಂಟುಮಾಡಿಲ್ಲ. ಇತರ ದಿನಗಳಲ್ಲಿ ಆಟಗಾರರು ರಾತ್ರಿ ಬೇಗನೇ ಹೋಟೆಲ್ ಕೊಠಡಿಯೊಳಗೆ ತೆರಳುವುದು ಕಡ್ಡಾಯ. ಆದರೆ ಭಾನುವಾರ ರಾತ್ರಿ ಅಂತಹ ಯಾವುದೇ ನಿರ್ಬಂಧ ಹೇರಲಿಲ್ಲ.ವಿವಾದವನ್ನು ಮರೆಸಿದ ಸಾಧನೆ

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣ `ಗಂಭೀರ' ಸ್ವರೂಪ ಪಡೆದಿದ್ದ ಸಂದರ್ಭದಲ್ಲೇ ಭಾರತ ತಂಡದ ಆಟಗಾರರು ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದ್ದರು. ಈ ಪ್ರಕರಣದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ದೋನಿ ಎಲ್ಲರ ಟೀಕೆಗೆ ಗುರಿಯಾಗಿದ್ದರು.ಇಂಗ್ಲೆಂಡ್ ನೆಲದಲ್ಲೂ `ಸ್ಪಾಟ್ ಫಿಕ್ಸಿಂಗ್' ಕುರಿತ ಪ್ರಶ್ನೆಗಳು ಎದುರಾಗಿದ್ದಾಗ ದೋನಿ ಮೌನಕ್ಕೆ ಶರಣಾಗಿದ್ದರು. ಮಾತ್ರವಲ್ಲ ಟೂರ್ನಿಯ ವೇಳೆ ಇತ್ತ ಬಿಸಿಸಿಐ ಆಡಳಿತದಲ್ಲಿ ಹಲವು ಮಹತ್ವದ ಬದಲಾವಣೆಗಳು ಉಂಟಾಗಿದ್ದವು.`ಆಟಗಾರರನ್ನು ವಿವಾದಗಳಿಂದ ದೂರವಿಡುವುದು ನನ್ನ ಗುರಿ' ಎಂದು ದೋನಿ ಟೂರ್ನಿಗೆ ಮುನ್ನ ಹೇಳಿದ್ದರು. ಅದರಲ್ಲಿ ಯಶಸ್ವಿಯಾಗಿರುವ ಅವರು ಟೀಕಾಕಾರರ ಬಾಯಿ ಕೂಡಾ ಮುಚ್ಚಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.