ಭಾನುವಾರ, ಡಿಸೆಂಬರ್ 15, 2019
26 °C

ರಾತ್ರಿ ವೇಳೆ ಪೆಟ್ರೋಲ್ ಪಂಪ್ ಮುಚ್ಚುವ ಪ್ರಸ್ತಾವವಿಲ್ಲ: ಮೊಯಿಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾತ್ರಿ ವೇಳೆ ಪೆಟ್ರೋಲ್ ಪಂಪ್ ಮುಚ್ಚುವ ಪ್ರಸ್ತಾವವಿಲ್ಲ: ಮೊಯಿಲಿ

ನವದೆಹಲಿ (ಪಿಟಿಐ):  ರಾತ್ರಿ ಸಮಯದಲ್ಲಿ ಪೆಟ್ರೋಲ್ ಪಂಪ್‌ಗಳನ್ನು ಮುಚ್ಚುವ ಯಾವುದೇ ಪ್ರಸ್ತಾವನೆಗಳು ಸರ್ಕಾರದ ಮುಂದೆ ಇಲ್ಲ ಎಂದು ಪೆಟ್ರೋಲಿಯಂ ಖಾತೆ ಸಚಿವ ವೀರಪ್ಪ ಮೊಯಿಲಿ ಸೋಮವಾರ ಸ್ಪಷ್ಟಪಡಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಪೆಟ್ರೋಲ್ ಪಂಪ್‌ಗಳನ್ನು ರಾತ್ರಿ ಸಮಯದಲ್ಲಿ ಬಂದ್ ಮಾಡುವ ಬಗ್ಗೆ ನಾನು ಎಲ್ಲಿಯೂ ಮಾತನಾಡಿಲ್ಲ, ಈ ಬಗ್ಗೆ ಸಾರ್ವಜನಿಕರು ಮತ್ತು ಕೆಲ ಉದ್ಯಮಿಗಳು ಸಲಹೆ ನೀಡಿದ್ದರು ಎಂದು ಮೊಯಿಲಿ ತಿಳಿಸಿದರು.ಪೆಟ್ರೋಲ್ ಬಳಕೆಯನ್ನು ತಗ್ಗಿಸಲು ಪಂಪ್‌ಗಳನ್ನು ಮುಚ್ಚುವುದರಿಂದ ಯಾವುದೇ ಪ್ರಯೋಜನವಿಲ್ಲ, ನಾಗರಿಕರೇ ಪೆಟ್ರೋಲ್ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಮೊಯಿಲಿ ಸಲಹೆ ಮಾಡಿದರು.

ಪ್ರತಿಕ್ರಿಯಿಸಿ (+)