ರಾಬಿನ್ ಉತ್ತಪ್ಪ ತ್ರಿಶತಕ

ಶುಕ್ರವಾರ, ಜೂಲೈ 19, 2019
22 °C
ಶಫಿ ದಾರಾಷ ಕ್ರಿಕೆಟ್: ಕೆಎಸ್‌ಸಿಎ ಇಲೆವೆನ್ ತಂಡದ ಭಾರಿ ಮೊತ್ತ

ರಾಬಿನ್ ಉತ್ತಪ್ಪ ತ್ರಿಶತಕ

Published:
Updated:

ಬೆಂಗಳೂರು: ಸ್ಫೋಟಕ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ (307; 358 ಎ, 29 ಬೌಂ, 5 ಸಿ.) ಅವರ ಅಜೇಯ ತ್ರಿಶತಕದ ನೆರವಿನಿಂದ ಕೆಎಸ್‌ಸಿಎ ಇಲೆವೆನ್ ತಂಡದವರು ಇಲ್ಲಿ ನಡೆಯುತ್ತಿರುವ ಶಫಿ ದಾರಾಷ ಟ್ರೋಫಿ  ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ಎದುರು ಭಾರಿ ಮೊತ್ತ ಪೇರಿಸಿದ್ದಾರೆ.ಆಲೂರಿನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದ ಎರಡನೇ ದಿನವಾದ ಗುರುವಾರ ಕೆಎಸ್‌ಸಿಎ ಇಲೆವೆನ್ ತನ್ನ ಮೊದಲ ಇನಿಂಗ್ಸ್‌ನಲ್ಲಿ 120 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 550 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿರುವ ಜಾರ್ಖಂಡ್ ತಂಡ 41.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 124 ರನ್ ಕಲೆಹಾಕಿದೆ.ಮೊದಲ ದಿನದಾಟದಲ್ಲಿ ಅಜೇಯ 223 ರನ್ ಗಳಿಸಿದ್ದ ಆರಂಭಿಕ ಬ್ಯಾಟ್ಸ್‌ಮನ್ ಉತ್ತಪ್ಪ ಎರಡನೇ ದಿನವೂ ಎದುರಾಳಿ ತಂಡದ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು. ಅಷ್ಟು ಮಾತ್ರವಲ್ಲದೇ, ತಂಡ ಭರ್ಜರಿ ಮೊತ್ತ ಕಲೆಹಾಕಲು ಕಾರಣರಾದರು. ಅವರಿಗೆ ಉತ್ತಮ ಬೆಂಬಲ ನೀಡಿದ ಮನೀಷ್ ಪಾಂಡೆ 78 ರನ್ ಗಳಿಸಿದರು. ಆದರೆ ಈ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿತು.ಒಡಿಶಾ ತಂಡಕ್ಕೆ ಮುನ್ನಡೆ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆತಿಥೇಯ ಕೆಎಸ್‌ಸಿಎ ಕೋಲ್ಟ್ಸ್ ಎದುರು ಒಡಿಶಾ ಕ್ರಿಕೆಟ್ ಸಂಸ್ಥೆ ಇನಿಂಗ್ಸ್ ಮುನ್ನಡೆ ಸಾಧಿಸಿದೆ.     ಕೋಲ್ಟ್ಸ್‌ನ 204 ರನ್‌ಗಳಿಗೆ ಉತ್ತರವಾಗಿ ಒಡಿಶಾ ಎರಡನೇ ದಿನದ ಅಂತ್ಯಕ್ಕೆ 90 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿದೆ. ರಾಜ್ಯ ತಂಡದ ಡೇವಿಡ್ ಮಥಾಯಿಸ್ ನಾಲ್ಕು ವಿಕೆಟ್ ಪಡೆದರು.ಆಲೂರಿನಲ್ಲಿ ನಡೆಯುತ್ತಿರುವ ಮತ್ತೊಂದು ಪಂದ್ಯದಲ್ಲಿ ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆ ಎದುರು ಕೆಎಸ್‌ಸಿಎ ಅಧ್ಯಕ್ಷರ ಇಲೆವೆನ್ ತಂಡ ಇನಿಂಗ್ಸ್ ಮುನ್ನಡೆ ಸಾಧಿಸಿದೆ. ಬಂಗಾಳದ 262 ರನ್‌ಗಳಿಗೆ ಉತ್ತರವಾಗಿ ಅಧ್ಯಕ್ಷರ ಇಲೆವೆಮ್ ಎರಡನೇ ದಿನದಾಟದ ಅಂತ್ಯಕ್ಕೆ 84.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 284 ರನ್ ಗಳಿಸಿದೆ. ಈ ತಂಡದ ಆರ್.ಸಮರ್ಥ್ (ಬ್ಯಾಟಿಂಗ್ 150) ಮಿಂಚಿನ ಶತಕ ಗಳಿಸಿದರು.ಸಂಕ್ಷಿಪ್ತ ಸ್ಕೋರ್

ಬೆಂಗಳೂರಿನಲ್ಲಿ ನಡೆದ ಪಂದ್ಯಗಳು
: ಕೆಎಸ್‌ಸಿಇ ಇಲೆವೆನ್: ಮೊದಲ    ಇನಿಂಗ್ಸ್ 120 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 550 (ರಾಬಿನ್ ಉತ್ತಪ್ಪ ಔಟಾಗದೆ 307, ಮನೀಷ್ ಪಾಂಡೆ 78; ರಾಹುಲ್ ಶುಕ್ಲಾ 112ಕ್ಕೆ1, ಸಮರ್ ಖಾದ್ರಿ 132ಕ್ಕೆ2). ಜಾರ್ಖಂಡ್ ಕ್ರಿಕೆಟ್ ಸಂಸ್ಥೆ: ಮೊದಲ ಇನಿಂಗ್ಸ್ 41.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 124 (ಆಕಾಶ್ ವರ್ಮ 35, ಮನಿಷ್ 38; ಕೆ.ಗೌತಮ್ 28ಕ್ಕೆ2, ಅಮಿತ್ ವರ್ಮ 1ಕ್ಕೆ1).ಕೆಎಸ್‌ಸಿಎ ಕೋಲ್ಟ್ಸ್: ಮೊದಲ ಇನಿಂಗ್ಸ್ 91.1 ಓವರ್‌ಗಳಲ್ಲಿ 204; ಒಡಿಶಾ ಕ್ರಿಕೆಟ್ ಸಂಸ್ಥೆ: ಮೊದಲ   ಇನಿಂಗ್ಸ್ 90 ಓವರ್‌ಗಳಲ್ಲಿ 8 ವಿಕೆಟ್‌ಗೆ 209 (ಗಿರಿಜಾ ರಾವತ್ 41, ಬಿಪ್ಲಬ್ ಸಮಂತ್ರನ್ 33, ದೀಪಕ್  ಬೆಹರಾ ಬ್ಯಾಟಿಂಗ್ 32; ಡೇವಿಡ್ ಮಥಾಯಿಸ್ 63ಕ್ಕೆ4, ಅಬ್ರಾರ್ ಕಾಜಿ 31ಕ್ಕೆ2).ಬಂಗಾಳ ಕ್ರಿಕೆಟ್ ಸಂಸ್ಥೆ: 79.4 ಓವರ್‌ಗಳಲ್ಲಿ 262; ಕೆಎಸ್‌ಸಿಎ ಅಧ್ಯಕ್ಷರ ಇಲೆವೆನ್: 84.4 ಓವರ್‌ಗಳಲ್ಲಿ 3 ವಿಕೆಟ್‌ಗೆ 284 (ಸಮರ್ಥ್ ಬ್ಯಾಟಿಂಗ್ 150, ಪವನ್ ದೇಶಪಾಂಡೆ ಬ್ಯಾಟಿಂಗ್ 45).ಹರಿಯಾಣ ಕ್ರಿಕೆಟ್ ಸಂಸ್ಥೆ: 120 ಓವರ್‌ಗಳಲ್ಲಿ 9 ವಿಕೆಟ್‌ಗೆ 448 (ಪ್ರತೀಕ್ ಪನ್ವಾರ್ 103; ಚಿರಾಗ್ ಜೈನ್ 103ಕ್ಕೆ4, ಡಿ. ಜಡೇಜ 114ಕ್ಕೆ2); ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ: 47.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 146 (ಜಯದೇವ್ ಷಾ 67, ಅರ್ಪಿತ್ ಬ್ಯಾಟಿಂಗ್ 30; ಆರೀಶ್ ಹೂಡಾ 31ಕ್ಕೆ3).ತ್ರಿಪುರಾ ಕ್ರಿಕೆಟ್ ಸಂಸ್ಥೆ: 96.1 ಓವರ್‌ಗಳಲ್ಲಿ 190; ಕೇರಳ ಕ್ರಿಕೆಟ್ ಸಂಸ್ಥೆ: 85 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 273 (ಜಗದೀಶ್ ಬ್ಯಾಟಿಂಗ್ 123, ನಿಖಿಲೇಷ್ 48, ಸಚಿನ್ ಬೇಬಿ 36; ಬಿ.ಅಭಿಜಿತ್ 28ಕ್ಕೆ3).ಮೈಸೂರು (ಎಸ್‌ಜೆಸಿಇ ಎಂಜಿನಿಯರಿಂಗ್ ಕಾಲೇಜು ಕ್ರೀಡಾಂಗಣ).

ಅಸ್ಸಾಂ ಕ್ರಿಕೆಟ್ ಸಂಸ್ಥೆ
:108.4 ಓವರ್‌ಗಳಲ್ಲಿ 309 (ರಿಷವ್ ದಾಸ್ 119, ಅವಿಜಿತ್ ಸಿಂಗ್ ರಾಯ್ 44; ಕೆ.ಹರೀಶ್ 83ಕ್ಕೆ2, ಎಸ್.ಕೆ.ಮೊಹಮ್ಮದ್ ಬಾಷಾ 50ಕ್ಕೆ3, ಸಿ.ಸ್ನೇಹ ಕಿಶೋರ್ 56ಕ್ಕೆ3). ಆಂಧ್ರಪ್ರದೇಶ ಕ್ರಿಕೆಟ್ ಸಂಸ್ಥೆ: 54 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 165 (ಡಿ.ಬಿ.ಪ್ರಶಾಂತ್ 74, ಕೆ.ಶ್ರೀಕಾಂತ್ 44).ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣ: ಕೆಎಸ್‌ಸಿಎ ಕಾರ್ಯದರ್ಶಿ ಇಲೆವೆನ್ 83.5 ಓವರ್‌ಗಳಲ್ಲಿ 177 (ಗರುಲ್ ಗೋಯೆಲ್ 51, ಜೆ. ಸುಚಿತ್ ಔಟಾಗದೆ 42; ಸೋನಿತ್ ಸಿಂಗ್ 23ಕ್ಕೆ4); ಬರೋಡ ಕ್ರಿಕೆಟ್ ಸಂಸ್ಥೆ: 75 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 194 (ಎನ್.ಆದಿತ್ಯ 54, ಕೇದಾರ್ ದೇವಧರ್ 45; ಪರಪ್ಪ ಮೋರ್ದಿ 32ಕ್ಕೆ2, ಜೆ.ಸುಚಿತ್ 66ಕ್ಕೆ2).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry