`ರಾಮಕಥಾ' ಆರಂಭ

7

`ರಾಮಕಥಾ' ಆರಂಭ

Published:
Updated:

ಕುಮಟಾ: ` ಈ ಜಗತ್ತಿನಲ್ಲಿ ರಾಮಾಯಣ ಮಹಾ ಕಾವ್ಯಕ್ಕೆ ಸಮನಾದ  ಕಾವ್ಯ ಮತ್ತೊಂದಿಲ್ಲ. ರಾಮನಂಥ ನಾಯಕನಿಲ್ಲ, ಸೀತೆಯಂಥ ಸತಿಯಿಲ್ಲ. ರಾಮಸಾಗರವನ್ನು ಮಾತುಗಳ ಹರಿಗೋಲಿನಿಂದ ದಾಟುವ ಪ್ರಯತ್ನವೇ ರಾಮಕಥಾ' ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮಿಜಿ  ಹೇಳಿದರು.ತಾಲ್ಲೂಕಿನ ಮೂರೂರಿನ ಪ್ರಗತಿ ವಿದ್ಯಾಲಯದ ರಾಮ ಲೀಲಾ ಮೈದಾನದಲ್ಲಿ ಸೋಮವಾರ ಆರಂಭವಾದ `ರಾಮಕಥಾ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ರಾಮ ಕಥೆ'ಯಲ್ಲಿ ಪ್ರಾಣವಾಯುವಾದ ಮುಖ್ಯಪ್ರಾಣನೇ ರಾಮ ಕಥೆಯ ಕೇಂದ್ರ ಎಂದರು. ಆರಂಭದಲ್ಲಿ ಗಜಾನನ ಶರ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಂ.ಕೆ.ಹೆಗಡೆ, ಜಿ.ಎಸ್.ಹೆಗಡೆ, ಡಾ.ಜಿ.ಜಿ.ಹೆಗಡೆ, ಡಾ. ಸೀತಾಲಕ್ಷ್ಮಿ ಹೆಗಡೆ, ನಿವೃತ್ತ ಪ್ರಾಚಾರ್ಯ ಎಸ್. ಶಂಭು ಭಟ್ಟ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆರ್.ಟಿ.ಹೆಗಡೆ. ಉದ್ಯಮಿ ಮುರಳೀಧರ ಪ್ರಭು, ವಿ.ಆರ್.ನಾಯಕ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry