ರಾಮಗಿರಿಗೆ ಸುಸಜ್ಜಿತ ಬಸ್‌ನಿಲ್ದಾಣ

7

ರಾಮಗಿರಿಗೆ ಸುಸಜ್ಜಿತ ಬಸ್‌ನಿಲ್ದಾಣ

Published:
Updated:

ಹೊಳಲ್ಕೆರೆ: ತಾಲ್ಲೂಕಿನ ರಾಮಗಿರಿಯಲ್ಲಿ ಸುಸಜ್ಜಿತ ಬಸ್‌ನಿಲ್ದಾಣ ನಿರ್ಮಿಸಲಾಗುವುದು ಎಂದು ಶಾಸಕ ಎಂ. ಚಂದ್ರಪ್ಪ ಭರವಸೆ ನೀಡಿದರು.ತಾಲ್ಲೂಕಿನ ರಾಮಗಿರಿಯಲ್ಲಿ ಶುಕ್ರವಾರ ವಾಣಿಜ್ಯ ಸಂಕಿರ್ಣ ಉದ್ಘಾಟಿಸಿ ಅವರು ಮಾತನಾಡಿದರು.ರಾಮಗಿರಿ ಹೋಬಳಿ ತಾಲ್ಲೂಕಿನಲ್ಲಿಯೇ ಹಿಂದುಳಿದಿದ್ದು, ಮೊದಲಿನಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿದೆ.ರೈಲುನಿಲ್ದಾಣ ಹೊಂದಿರುವ ದೊಡ್ಡ ಗ್ರಾಮವಾದರೂ ಸುಸಜ್ಜಿತ ರಸ್ತೆ, ಚರಂಡಿ, ಬಸ್‌ನಿಲ್ದಾಣ ಮತ್ತಿತರ ಮೂಲಸೌಕರ್ಯ ಇಲ್ಲದೇ ಸೊರಗಿತ್ತು.  ನಾಲ್ಕು ವರ್ಷಗಳಲ್ಲಿ ಗ್ರಾಮದ ಅಭಿವೃದ್ಧಿಗೆ ರೂ 1 ಕೋಟಿಗೂ ಹೆಚ್ಚು ಅನುದಾನ ನೀಡಿದ್ದೇನೆ. ಮುಖ್ಯವೃತ್ತ ಅಭಿವೃದ್ಧಿಪಡಿಸುವುದರೊಟ್ಟಿಗೆ  ಸುಸಜ್ಜಿತ ಪಾದಚಾರಿ ಮಾರ್ಗ ನಿರ್ಮಿಸಲಾಗಿದೆ. ರಸ್ತೆಪಕ್ಕದಲ್ಲಿ ನಡೆಯುತ್ತಿದ್ದ ಸಂತೆಯನ್ನು ಸ್ಥಳಾಂತರಿಸಿ ಸೂಕ್ತ ಜಾಗ ಒದಗಿಸಿದ್ದೇನೆ  ಎಂದರು.ಜಿಲ್ಲಾ ಪಂಚಾಯ್ತಿ ಸದಸ್ಯ ಪಿ.ಆರ್. ಶಿವಕುಮಾರ್ ಮಾತನಾಡಿ, ತಾಲ್ಲೂಕು ನಾಲ್ಕು ವರ್ಷಗಳಲ್ಲಿ ಆಮೂಲಾಗ್ರ ಬದಲಾವಣೆ ಕಂಡಿದೆ. ಹಿಂದೆ ಹೋಬಳಿ ಕೇಂದ್ರಕ್ಕೂ ಕಡೆಯಾಗಿದ್ದ ತಾಲ್ಲೂಕು ಕೇಂದ್ರದಲ್ಲಿ ಈಗ ಗುರುತಿಸುವ ಕೆಲಸಗಳು ಆಗಿವೆ ಎಂದರು.ತಾ.ಪಂ. ಅಧ್ಯಕ್ಷ ಮೋಹನ್ ನಾಗರಾಜ್ ಮಾತನಾಡಿ, ಕೇವಲ ಸರ್ಕಾರದ ಅನುದಾನ, ಸ್ಥಳೀಯ ಸಂಪನ್ಮೂಲ ಕ್ರೋಢೀಕರಿಸಿಕೊಂಡು ಗ್ರಾಮವನ್ನು ಅಭಿವೃದ್ಧಿಪಡಿಸಬೇಕು. ವಾಣಿಜ್ಯ ಮಳಿಗೆಗಳಿಂದ ಬರುವ ಆದಾಯದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಗ್ರಾಮ ಪಂಚಾಯ್ತಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.ತಾ.ಪಂ. ಉಪಾಧ್ಯಕ್ಷೆ ಪುಟ್ಟೀಬಾಯಿ, ಸದಸ್ಯ ತಿಮ್ಮೇಶ್, ಭಾಗ್ಯಾ ರಾಜಪ್ಪ, ಗ್ರಾ.ಪಂ. ಅಧ್ಯಕ್ಷೆ ತಿಮ್ಮಕ್ಕ, ಗಂಗಮ್ಮ, ಬಿ.ಎಸ್. ಪ್ರಭಾಕರ್, ರಾಮಣ್ಣ, ಹೇಮಂತ ಕುಮಾರ್, ಚಂದ್ರಶೇಖರಪ್ಪ, ಕುಮಾರ್, ಶೇಖರ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry