ಬುಧವಾರ, ನವೆಂಬರ್ 20, 2019
22 °C
ವಿವಿಧೆಡೆ ಶ್ರೀರಾಮನವಮಿ ಆಚರಣೆ, ಸೀತಾ ಕಲ್ಯಾಣೋತ್ಸವ

ರಾಮಚಂದ್ರಾಪುರದಲ್ಲಿ ಸಂಭ್ರಮದ ರಥೋತ್ಸವ

Published:
Updated:

ಹೊಸನಗರ: ಸಮೀಪದ ರಾಮಚಂದ್ರಾಪುರದಲ್ಲಿ  ಶ್ರೀರಾಮ ನವಮಿ ಅಂಗವಾಗಿ ಶುಕ್ರವಾರ ಮನ್ಮಹಾರಥೋತ್ಸವ  ಅದ್ದೂರಿಯಾಗಿ ಜರುಗಿತು.ಬೆಳಿಗ್ಗೆ ರಾಘವೇಶ್ವರ ಸ್ವಾಮೀಜಿನ ನೇತೃತ್ವದಲ್ಲಿ ಆರಂಭವಾದ ಧಾರ್ಮಿಕ ವಿಧಿ ವಿಧಾನಗಳ ಮಧ್ಯಾಹ್ನ 12.30 ಕ್ಕೆ ಸಂಪನ್ನಗೊಂಡು ಶ್ರಿರಾಮ ದೇವರ ರಥಾರೂಢ ಕಾರ್ಯಕ್ರಮ ನಡೆಯಿತು.ಸೇರಿದ ಭಕ್ತಜನಸಾಗರ ರಥ ಎಳೆದರು. ರಾಜ್ಯದ ವಿವಿಧೆಡೆಗಳಿಂದ ಮಠದ ಭಕ್ತರು ಆಗಮಿಸಿದ್ದರು. ಸಂಜೆ ಸೀತಾ ಕಲ್ಯಾಣೋತ್ಸವ ಹಾಗೂ ರಾವಣ ದಹನ ಕಾರ್ಯಕ್ರಮಗಳು ನಡೆಯಿತು.

ಪ್ರತಿಕ್ರಿಯಿಸಿ (+)